T20 World Cup: ಸ್ಕಾಟ್ಲೆಂಡ್​ ಎದುರು ಇಟಲಿ ಗಲಿಬಿಲಿ 
ಕ್ರಿಕೆಟ್

T20 World Cup: ಸ್ಕಾಟ್ಲೆಂಡ್​ ಎದುರು ಇಟಲಿ ಗಲಿಬಿಲಿ

ಕೋಲ್ಕತ: ಇಟಲಿ (Italy) ತಂಡ ಟಿ20 ವಿಶ್ವಕಪ್​ (T20 world cup) ಪದಾರ್ಪಣೆಯ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಆಲ್ರೌಂಡರ್​ ಮೈಕೆಲ್​ ಲೀಸ್ಕ್​ (22*ರನ್​, 17ಕ್ಕೆ 4 ವಿಕೆಟ್​) ಮತ್ತು ಆರಂಭಿಕ ಜಾರ್ಜ್​ ಮುನ್ಸೆ (84 ರನ್​, 54 ಎಸೆತ, 13 ಬೌಂಡರಿ, 2 ಸಿಕ್ಸರ್​) ಆಕ್ರಮಣಕಾರಿ ಆಟದ ಎದುರು ಮಂಕಾದ ಇಟಲಿ ತಂಡ ಸ್ಕಾಟ್ಲೆಂಡ್​ (scotland) ಎದುರು 73 ರನ್​ಗಳಿಂದ ಪರಾಭವಗೊಂಡಿತು. ಇಟಲಿ ಟಿ20 ವಿಶ್ವಕಪ್​ ಆಡಿದ 25ನೇ ತಂಡವೆನಿಸಿತು.

ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಸೋಮವಾರ ಬೆಳಗ್ಗೆ ನಡೆದ ಸಿ ಗುಂಪಿನ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಸ್ಕಾಟ್ಲೆಂಡ್​ 4 ವಿಕೆಟ್​ಗೆ 207 ರನ್​ ಕಲೆಹಾಕಿತು. ಪ್ರತಿಯಾಗಿ ಇಟಲಿ 16.4 ಓವರ್​ಗಳಲ್ಲಿ 134 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು.

ಸ್ಕಾಟ್ಲೆಂಡ್​: 4 ವಿಕೆಟ್​ಗೆ 207 (ಜಾರ್ಜ್​ ಮುನ್ಸೆ 84, ಜೋನ್ಸ್​ 37, ಮೆಕ್​ಮುಲೆನ್​ 41*, ಮೈಕೆಲ್​ ಲೀಸ್ಕ್​ 22*, ಅಲಿ ಹಸನ್​ 21ಕ್ಕೆ 1, ಸ್ಟೀವರ್ಟ್​ 44ಕ್ಕೆ 1, ಜೆಜೆ ಸ್ಮಟ್ಸ್​ 38ಕ್ಕೆ 1). ಇಟಲಿ: 16.4 ಓವರ್​ಗಳಲ್ಲಿ 134 (ಜೆಜೆ ಸ್ಮಟ್ಸ್​ 22, ಹ್ಯಾರಿ ಮ್ಯಾನೆಂಟಿ 37, ಬೆನ್​ ಮ್ಯಾನೆಂಟಿ 52, ಲೀಸ್ಕ್​ 17ಕ್ಕೆ 4, ಮಾರ್ಕ್​ ವ್ಯಾಟ್​ 24ಕ್ಕೆ 2). ಪಂದ್ಯಶ್ರೇಷ್ಠ: ಮೈಕೆಲ್​ ಲೀಸ್ಕ್​.