ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್  
ಕ್ರಿಕೆಟ್

ಗೋವಾದಲ್ಲಿ ಸಚಿನ್​ ಪುತ್ರಿ ಸಾರಾ ಪ್ರತ್ಯಕ್ಷ: ಕೈಯಲ್ಲಿರುವ ಬಾಟಲಿ ನೋಡಿ ನೆಟ್ಟಿಗರು ಗರಂ! Sara Tendulkar

ಪ್ರಮುಖ ಮುಖ್ಯಾಂಶಗಳು

  • ವಿವಾದದಲ್ಲಿ ಸಿಲುಕಿದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್​
  • ಗೋವಾ ಬೀಚ್‌ನಲ್ಲಿ ಬಿಯರ್​ ಬಾಟಲಿ ಹಿಡಿದು ಓಡಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್
  • ಸಚಿನ್ ತೆಂಡೂಲ್ಕರ್ ಅವರನ್ನು ಉಲ್ಲೇಖಿಸಿ ನೆಟ್ಟಿಗರಿಂದ ಸಾರಾಗೆ ಟೀಕೆಗಳ ಸುರಿಮಳೆ
ಪಣಜಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ( Sara Tendulkar ) ಗೋವಾ ಬೀಚ್‌ನಲ್ಲಿ ಬಿಯರ್​ ಬಾಟಲಿ ಹಿಡಿದು ಓಡಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
@Ctrlmemes_ ಹೆಸರಿನ ಎಕ್ಸ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಬೈಕ್​ನಲ್ಲಿ ಹೋಗುತ್ತಿರುವ ವ್ಯಕ್ತಿಯೊಬ್ಬ ವಿಡಿಯೋ ಸೆರೆಹಿಡಿದಿದ್ದು, ಗೋವಾದ ಅರೋಸಿಮ್ ಬೀಚ್‌ನಲ್ಲಿ ಸಾರಾ ತೆಂಡೂಲ್ಕರ್ ಕಾಣಿಸಿಕೊಂಡಿದ್ದಾರೆ ಎಂದು ವಿಡಿಯೋ ಮೇಲೆ ಬರೆಯಲಾಗಿದೆ. ಆದರೆ, ಎಲ್ಲರ ಗಮನ ಸಾರಾಗಿಂತ ಅವರ ಕೈಯಲ್ಲಿರುವ ವಸ್ತುವಿನ ಮೇಲೆ ಬಿದ್ದಿದ್ದು, ವಿವಾದ ಸ್ವರೂಪ ಪಡೆದುಕೊಂಡಿದೆ.
ವಿಡಿಯೋ ನೋಡಿದ ಹಲವಾರು ವೀಕ್ಷಕರು ಸಾರಾ ಕೈಯಲ್ಲಿರುವುದನ್ನು ಬಿಯರ್ ಬಾಟಲಿ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್ ಅವರನ್ನು ಉಲ್ಲೇಖಿಸಿ ಸಾರಾರನ್ನು ಟೀಕಿಸುತ್ತಿದ್ದಾರೆ. ಸಚಿನ್​ ಅವರು ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯು ಮದ್ಯ ಅಥವಾ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡಲಿಲ್ಲ. ಆದರೆ, ಸಾರಾ ಅವರು ಬೀದಿಗಳಲ್ಲಿ ಮದ್ಯದ ಬಾಟಲಿ ಹಿಡಿದು ತಿರುಗಾಡುತ್ತಿದ್ದಾರೆ. ಸಾರಾ ಅವರು ತಮ್ಮ ತಂದೆಯ ಹಾದಿಯನ್ನು ಅನುಸರಿಸಲಿ, ತಂದೆಯ ಗೌರವನ್ನು ಕಾಪಾಡಲಿ ಎಂದು ಬುದ್ಧಿಮಾತುಗಳನ್ನು ಹೇಳುತ್ತಿದ್ದಾರೆ. 
ಇನ್ನು ಕೆಲವರು ಸಾರಾ ಅವರು ಪರ ಬ್ಯಾಟ್​ ಬೀಸಿದ್ದಾರೆ. ಸಾರಾಗೆ ಈಗ 28 ವರ್ಷ ವಯಸ್ಸು. ಆಕೆಗೆ ತನ್ನದೇಯಾದ ಆಯ್ಕೆಗಳನ್ನು ಮಾಡುವ ಹಕ್ಕಿದೆ. ತನಗೆ ಇಷ್ಟಬಂದಂತೆ ಬದುಕನ್ನು ಜೀವಿಸುವ ಸ್ವಾತಂತ್ಯವಿದೆ. ಇಲ್ಲಿ ತಂದೆಯ ಪ್ರಶ್ನೆಯೇ ಬರುವುದಿಲ್ಲ. ದಯವಿಟ್ಟು ಇತರರ ಗೌಪ್ಯತೆಯನ್ನು ಗೌರವಿಸಿ. ಆಕೆ ತನ್ನ ಸ್ನೇಹಿತರ ಜತೆ ಆನಂದಿಸುತ್ತಿದ್ದಾಳೆ. ಜನರು ಆನಂದಿಸಲಿ ಮತ್ತು ಅವರನ್ನು ಬದುಕಲು ಬಿಡಿ ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ. ಅಲ್ಲದೆ, ಆಕೆಯ ಕೈಯಲ್ಲಿರುವ ಬಿಯರ್​ ಬಾಟಲಿ ಎಂದು ಹೇಗೆ ನಿರ್ಣಯಿಸುತ್ತೀರಿ ಎಂದು ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ, ಸಚಿನ್ ತೆಂಡೂಲ್ಕರ್ ಫೌಂಡೇಶನ್‌ನ ನಿರ್ದೇಶಕಿಯಾಗಿರುವ ಸಾರಾ, ಬಯೋಮೆಡಿಕಲ್ ವಿಜ್ಞಾನಿ ಮತ್ತು ಪೌಷ್ಟಿಕತಜ್ಞೆಯೂ ಹೌದು. ಸಾರಾ ಇತ್ತೀಚೆಗೆ ತಮ್ಮ ಹೊಸ ಉದ್ಯಮವಾದ ಪೈಲೇಟ್ಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. 
ಇನ್ನು ವೈರಲ್​ ಆಗುತ್ತಿರುವ ಸಾರಾ ಅವರ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).