ಲೈವ್​ ಡಿಬೆಟ್​ನಲ್ಲಿ ಪಾಕ್​ ಕ್ರಿಕೆಟಿಗರು 
ಕ್ರಿಕೆಟ್

ಆ ಆಯೋಗ್ಯನನ್ನು ಕಿತ್ತು ಬಿಸಾಡಿ... ಲೈವ್​ ಡಿಬೆಟ್​ನಲ್ಲೇ ಕಿತ್ತಾಡಿಕೊಂಡ ಪಾಕ್​ ಮಾಜಿ ಆಟಗಾರರು!

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ವಿರುದ್ಧ ಪಾಕ್​ಗೆ ಹೀನಾಯ ಸೋಲು
  • ಸೂಪರ್​-8 ಪಂದ್ಯ ಸೋತ ಬೆನ್ನಲ್ಲೇ ಪಾಕ್​ಗೆ ಭಾರೀ ಮುಖಭಂಗ
  • ಲೈವ್​ ಡಿಬೆಟ್​ನಲ್ಲೇ ಕಿತ್ತಾಡಿಕೊಂಡ ಪಾಕ್​ ಮಾಜಿ ಕ್ರಿಕೆಟಿಗರು
ಕರಾಚಿ: ನಿನ್ನೆ (ಫೆ.24) ನಡೆದ ಸೂಪರ್​-8 ಪಂದ್ಯದಲ್ಲಿ ಇಂಗ್ಲೆಂಡ್​ ಎದುರು ಸೋತಿದ್ದೇ ತಡ ಇದೀಗ ಪಾಕಿಸ್ತಾನ ತಂಡಕ್ಕೆ ಭಾರೀ ಮುಖಭಂಗ, ಛೀಮಾರಿಗಳು ವ್ಯಕ್ತವಾಗುತ್ತಿವೆ. ಯಾವುದೂ ಪಾಕ್​ ಅಂದುಕೊಂಡಂತೆ ನಡೆಯದಿರುವುದೇ ಸದ್ಯ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಹಿರಿಯ ಕ್ರಿಕೆಟಿಗರು ತಂಡದ ಆಟಗಾರರ ಮುಖಕ್ಕೆ ಹೊಡೆದಂತೆ ಟೀಕಿಸುತ್ತಿದ್ದರೆ, ಅತ್ತ ಲೈವ್​ ಚರ್ಚೆಯಲ್ಲೇ ಮಾಜಿ ಆಟಗಾರರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸೋತ ಪಾಕಿಸ್ತಾನ ಸದ್ಯ ಸೆಮಿಫೈನಲ್ ತಲುಪುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ. ಈ ಮಧ್ಯೆ, ನ್ಯೂಸ್​ ಚಾನೆಲ್​ನ ಲೈವ್ ಡಿಬೆಟ್​ನಲ್ಲಿ ಪಾಕಿಸ್ತಾನದ ಮಾಜಿ ಹಿರಿಯ ಕ್ರಿಕೆಟಿಗರಾದ ಮೊಹಮ್ಮದ್ ಹಫೀಜ್, ಶೋಯೆಬ್​ ಆಖ್ತರ್​, ಸಕ್ಲೇನ್ ಮುಷ್ತಾಕ್ ಸೇರಿ ಇನ್ನು ಕೆಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಲೈವ್ ಮಧ್ಯೆಯೇ ಹಫೀಜ್​ ಮತ್ತು ಸಕ್ಲೇನ್​ ಏಕಾಏಕಿ ಮಾತಿನ ಜಟಾಪಟಿಯಲ್ಲಿ ಕಿತ್ತಾಡಿಕೊಂಡರು.
ಇಂಗ್ಲೆಂಡ್​ ವಿರುದ್ಧ ಪಾಕ್​ ತೋರಿದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡುವಾಗ, ಪಾಕಿಸ್ತಾನದ ಆಲ್‌ರೌಂಡರ್ ಶಾಬಾದ್ ಖಾನ್ ಬಗ್ಗೆ ಚರ್ಚೆಯಾಯಿತು. ಈ ವೇಳೆ ತನ್ನ ಅಳಿಯನ ಪರ ವಹಿಸಿಕೊಂಡು ಮಾತಾಡಿದ ಮುಷ್ತಾಕ್​, ಆತ ತಂಡಕ್ಕೆ ಗೆಲುವು ತಂದುಕೊಡಲು ಶತಾಯಗತಾಯ ಪ್ರಯತ್ನ ಮಾಡಿದ. ಆದ್ರೆ, ಉಳಿದ ಆಟಗಾರರು ಸಾಥ್​ ನೀಡಲಿಲ್ಲ ಎಂದರು.
ಇದಕ್ಕೆ ಸಿಟ್ಟಾದ ಹಫೀಜ್​, ಶಾಬಾದ್ ಪ್ರದರ್ಶನ ಕೆಟ್ಟದಾಗಿದೆ. ಆತ ಹೆಸರಿಗಷ್ಟೇ ಆಲ್​ರೌಂಡರ್. ಈ ಕೂಡಲೇ ಆತನನ್ನು ತಂಡದಿಂದ ಕಿತ್ತುಬಿಸಾಡಬೇಕು ಎಂದು ಹೇಳಿದರು. ಈ ವಿಷಯಕ್ಕೆ ಇಬ್ಬರ ನಡುವೆ ಕೆಲ ನಿಮಿಷ ನಡುವೆ ಜಗಳ ನಡೆಯಿತು. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).