- ವೆಸ್ಟ್ ಇಂಡೀಸ್ ವಿರುದ್ಧ 97 ರನ್ ಬಾರಿಸಿದ ಸಂಜು ಸ್ಯಾಮ್ಸನ್
- ಸ್ಫೋಟಕ ಇನ್ನಿಂಗ್ಸ್ ನೀಡಿದ ಸಂಜು ಸೆಮಿಫೈನಲ್ ಪಂದ್ಯದಿಂದ ಹೊರಗೆ?
- ಸಂಭ್ರಮಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ್ರಾ ಸ್ಯಾಮ್ಸನ್?
ನವದೆಹಲಿ: ಮಾ.0ರಂದು ಕೋಲ್ಕತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೆಯ ಸೂಪರ್-8 ಹಾಗೂ ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ಭಾರತ ಸಂಜು ಸ್ಯಾಮನ್ಸ್ ಅವರ ಅದ್ಭುತ ಇನ್ನಿಂಗ್ಸ್ ಸಹಾಯದಿಂದ ರೋಚಕ ಜಯ ಸಾಧಿಸಿತು. ತಂಡದ ಪರ ಅಜೇಯರಾಗಿ ಉಳಿದ ಸಂಜು, ಟೀಮ್ ಇಂಡಿಯಾದ ಸೆಮೀಸ್ ಕನಸನ್ನು ಈಡೇರಿಸಿದರು. 97 ರನ್ ಬಾರಿಸುವ ಮೂಲಕ ಏಕಾಂಗಿಯಾಗಿ ತಂಡಕ್ಕೆ ಆಸೆರೆಯಾದ ಸಂಜು ಈಗ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯುತ್ತಾರೆ ಎನ್ನಲಾಗಿದೆ.
ನಿಯಮ ಉಲ್ಲಂಘನೆ?
ಕೇವಲ 50 ಎಸೆತಗಳಲ್ಲಿ 97 ರನ್ ಬಾರಿಸಿದ ಸಂಜು, ತಮ್ಮ ತಂಡದ ಉಳಿದ ಬ್ಯಾಟರ್ಗಳು ಸಾಥ್ ನೀಡಲು ವಿಫಲರಾದರೂ ಸಹ ಆಟವನ್ನು ಬಿಟ್ಟುಕೊಡದೆ ಕೊನೆಯವರೆಗೂ ನಿಂತಿದ್ದು ಕ್ರಿಕೆಟ್ ಪ್ರಿಯರ ಹೃದಯ ಗೆದ್ದಿತು. ಸ್ಯಾಮ್ಸನ್ ಆಟವನ್ನು ಇಡೀ ಕ್ರಿಕೆಟ್ ಲೋಕವೇ ಮೆಚ್ಚಿಕೊಂಡಿತು. ಪ್ರಸ್ತುತ, ಮುಂದಿನ ಪಂದ್ಯಗಳಲ್ಲಿ ಅವರ ಲಭ್ಯತೆ ಮತ್ತು ಜವಾಬ್ದಾರಿ ದುಪ್ಪಟ್ಟಾಗಿದೆ. ಹೀಗಿರುವಾಗಲೇ, ಸಂಜು ಸ್ಯಾಮ್ಸನ್ ಐಸಿಸಿಯ ಮೂಲ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೆಲ್ಮೆಟ್ ತೂರಿದ...
ತಂಡವನ್ನು ಗೆಲುವಿನ ದಡ ಸೇರಿಸಿದೆ ಎಂದು ನಿಟ್ಟುಸಿರು ಬಿಟ್ಟ ಸ್ಯಾಮ್ಸನ್, ಮೈದಾನದಲ್ಲೇ ಹೆಲ್ಮೆಟ್ ಮತ್ತು ಬ್ಯಾಟ್ ಅನ್ನು ಪಕಕ್ಕೆ ಎಸೆದು ದೇವರಿಗೆ ಕೈಮುಗಿದರು. ಇದು ಆ ಕ್ಷಣಕ್ಕೆ ಅವರ ಆನಂದ ಎಂದು ಅನಿಸಿದರೂ ಐಸಿಸಿಯ ರೂಲ್ಸ್ ಬ್ರೇಕ್ ಆಗಿದೆ ಎಂಬುದನ್ನು ಸೂಚಿಸಿದೆ. ನಿಯಮಗಳ ಪ್ರಕಾರ, ಯಾವುದೇ ಆಟಗಾರ ಹೆಲ್ಮೆಟ್ ಅಥವಾ ಬ್ಯಾಟ್ ಕಿತ್ತೆಸೆಯುವುದು ತಪ್ಪು. ಇದು ಮೂಲ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಿರುವಾಗ, ಸಂಜು ಸ್ಯಾಮ್ಸನ್ ಧರಿಸಿದ್ದ ಹೆಲ್ಮೆಟ್ ಬದಿಗೆಸೆದು ಸಂಭ್ರಮಿಸಿದ್ದು ಹಲವರ ಕಣ್ಣಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ, ಇದೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಐಸಿಸಿ ನೀತಿ ಸಂಹಿತೆಯು ಆಟಗಾರರ ಮೈದಾನದಲ್ಲಿನ ನಡವಳಿಕೆ ಮತ್ತು ಕ್ರಿಕೆಟ್‌ನ ಉತ್ಸಾಹಕ್ಕೆ ವಿರುದ್ಧವಾದ ಕ್ರಮಗಳನ್ನು ಹತೋಟಿಗೆ ತರುವುದಾಗಿದೆ. ಇದು ಕ್ರಿಕೆಟ್ ಉಪಕರಣಗಳು (ಬ್ಯಾಟ್, ಬಾಲ್, ಹೆಲ್ಮೆಟ್ ಇತ್ಯಾದಿ) ಮತ್ತು ವಿವಿಧ ರೀತಿಯ ದುರ್ನಡತೆಯ ನಿಬಂಧನೆಗಳನ್ನು ಒಳಗೊಂಡಿದೆ. ಈಗ ಸಂಜು ಕೇಸ್ನಲ್ಲಿಯೂ ಇದೇ ಆಗಿರುವುದು. ಐಸಿಸಿ ರೂಲ್ಸ್ ಪ್ರಕಾರ, ಹೆಲ್ಮೆಟ್ ಎಸೆಯುವುದು ಲೆವೆಲ್ 1 ಅಪರಾಧವಾಗಿದೆ.
ಸಂಜುಗೆ ದಂಡ?
ಲೆವೆಲ್ 1ರ ಉಲ್ಲಂಘನೆಗಾಗಿ, ಐಸಿಸಿ ಪಂದ್ಯದ ಅಂಪೈರ್ ವಾಗ್ದಂಡನೆ, ಆಟಗಾರನ ಪಂದ್ಯ ಶುಲ್ಕದ ಶೇ.50ರಷ್ಟು ದಂಡ ಅಥವಾ ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್ಗಳನ್ನು ವಿಧಿಸಬಹುದು. ಗೆಲುವಿನ ಬಳಿಕ ಸಂಭ್ರಮಾಚರಣೆಯ ಸಲುವಾಗಿ ಹೆಲ್ಮೆಟ್ ಎಸೆಯುವುದು ದೊಡ್ಡ ತಪ್ಪೇನಲ್ಲ. ಇದು ದಂಡಕ್ಕೆ ಕಾರಣವಾಗದಿದ್ದರೂ, ಪಂದ್ಯದ ಅಂಪೈರ್ ವಿವೇಚನೆಯಿಂದ ಉಲ್ಲಂಘನೆ ಎಂದು ವರ್ಗೀಕರಿಸಬಹುದು ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).