ವೈಭವ್ ಸೂರ್ಯವಂಶಿ ಮಿಸ್ ಆದ ಅವಕಾಶ
- ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿಯೂ ಸಿಗಲಿಲ್ಲ ಅವಕಾಶ
- ವೈಭವ್ ಸೂರ್ಯವಂಶಿ ಕೈಬಿಟ್ಟಿದ್ದಕ್ಕೆ ಗಂಭೀರ್, ಶ್ರೇಯಸ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ
Vaibhav Sooryavanshi: ಬೆಲ್ಫಾಸ್ಟ್ನಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಿಂದಲೂ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರನ್ನು ಕೈಬಿಡಲಾಗಿದೆ. ವೈಭವ್ ಬದಲಿಗೆ ಇಬ್ಬರೂ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದು ಕ್ರಿಕೆಟ್ ಪ್ರೇಮಿಗಳು ಮತ್ತು ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಟೀಮ್ ಇಂಡಿಯಾ, ಐರಿಶ್ ಪಡೆ ನೀಡಿರುವ 155 ರನ್ಗಳ ಗುರಿಯನ್ನು ಬೆನ್ನತ್ತಿ, ಸರಣಿಯನ್ನು ಸಮಬಲಗೊಳಿಸಲು ಪಣತೊಟ್ಟಿದೆ. ಮತ್ತೊಂದೆಡೆ, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಂಡದ ಕ್ಯಾಪ್ಟನ್ ಮತ್ತು ಹೆಡ್ ಕೋಚ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಸೂರ್ಯಾಂಶ್ ಶೆಡ್ಜ್ ಮತ್ತು ಪ್ರಿನ್ಸ್ ಯಾದವ್ ಅವರಿಗೆ ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯವನ್ನಾಡಲು ಅವಕಾಶ ಮಾಡಿಕೊಟ್ಟಿದ್ದು ಓಕೆ, ಆದರೆ ವೈಭವ್ ಸೂರ್ಯವಂಶಿಯನ್ನು ಆಡಿಸದೆ ಹೋಗಿದ್ದು ಸರಿಯಲ್ಲ ಎಂದಿದ್ದಾರೆ.
ಇದು ಒಳ್ಳೆಯ ಕ್ರಿಕೆಟ್ ನಿರ್ಧಾರವಲ್ಲ. ಐರ್ಲೆಂಡ್ ಎದುರು ಮೊದಲ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಮಿಡಲ್ ಆರ್ಡರ್ ಅವಶ್ಯಕತೆ ಕಾಡತೊಡಗಿತು. ಆರಂಭಿಕ ಬ್ಯಾಟರ್ಗಳಿಂದ ಭರ್ಜರಿ ಓಪನಿಂಗ್ ಬರಬೇಕು. ಇಲ್ಲಿ ವೈಭವ್ರನ್ನು ಅಭಿಷೇಕ್ ಜೊತೆ ಕಳಿಸಬೇಕಿತ್ತು. ಮತ್ತು ಸಂಜು ಸ್ಯಾಮ್ಸನ್ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಲು ಬಿಡಬೇಕಿತ್ತು. ಆದರೆ, ಅದಾಗಿಲ್ಲ ಇಲ್ಲಿ. ನಿಮ್ಮ ನಿರ್ಧಾರ ಸ್ವಲ್ಪವೂ ಇಷ್ಟವಾಗಲಿಲ್ಲ ನನಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).