- ಗುರುವಾರ (ಮಾ.05) ನಡೆದ ಈ ರೋಚಕ ಹಣಾಹಣಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಗೆಲುವಿಗಾಗಿ ಹೋರಾಡುತ್ತಿತ್ತು
- ಪಂದ್ಯದ ಅಂತಿಮ ಹಂತದಲ್ಲಿ ಬುಮ್ರಾ ಚೆಂಡನ್ನು ಕೈಗೆತ್ತಿಕೊಂಡಾಗ ಇಡೀ ಕ್ರೀಡಾಂಗಣದಲ್ಲಿ ಉದ್ವಿಗ್ನ ವಾತಾವರಣ
- ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಕೂಡಾ ಆಗಮಿಸಿದ್ದರು
ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ (ಮಾ.05) ನಡೆದ ಈ ರೋಚಕ ಹಣಾಹಣಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಗೆಲುವಿಗಾಗಿ ಹೋರಾಡುತ್ತಿತ್ತು. ಪಂದ್ಯದ ಅಂತಿಮ ಹಂತದಲ್ಲಿ ಬುಮ್ರಾ ಚೆಂಡನ್ನು ಕೈಗೆತ್ತಿಕೊಂಡಾಗ ಇಡೀ ಕ್ರೀಡಾಂಗಣದಲ್ಲಿ ಉದ್ವಿಗ್ನ ವಾತಾವರಣವಿತ್ತು. ಆದಾಗ್ಯೂ, ಬುಮ್ರಾ ಅವರ ಆ ಒಂದು ಓವರ್ ಇಡೀ ಪಂದ್ಯದ (MS Dhoni) ಚಿತ್ರಣವನ್ನೇ ಬದಲಿಸಿತು.
ಈ ವಿಶೇಷ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಕೂಡಾ ಆಗಮಿಸಿದ್ದರು. ಈ ವೇಳೆ ಅವರಿಬ್ಬರ ನಡುವೆ ನಡೆದ ಒಂದು ಮುದ್ದಾದ ಸನ್ನಿವೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಬುಮ್ರಾ ಎಸೆದ ಆ ಓವರ್ನ ಒಂದು ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟರ್ ಸಂಪೂರ್ಣವಾಗಿ ಚಕಿತಗೊಂಡರು. ಚೆಂಡು ಬ್ಯಾಟ್‌ಗೆ ತಗುಲಿ ಬೂಮ್ರಾ ಕೈ ಸೇರಿತು. ಸಾಕ್ಷಿ ಈ ದೃಶ್ಯವನ್ನು ಗಮನಿಸಿ, ಇಂಗ್ಲೆಡ್ನ ವಿಕೆಟ್ ಬಿದ್ದಿದೆ ತಿಳಿದು ಸಂಭ್ರಮಿಸಲು ಪ್ರಾರಂಭಿಸಿದರು. ಆದರೆ, ಅದು ವಿಕೆಟ್ ಆಗಿರಲಿಲ್ಲ.
ಸಾಕ್ಷಿ ಸಂಭ್ರಮಿಸುತ್ತಿರುವುದನ್ನು ನೋಡಿದ ಧೋನಿ, ಅವರ ಕಡೆಗೆ ತಿರುಗಿ ಅದು ವಿಕೆಟ್ ಅಲ್ಲ ಕುಳಿತುಕೋ ಎಂದು ಸನ್ನೆ ಮಾಡಿದರು. ಈ ವೇಳೆ ಕ್ರೀಡಾಂಗಣದ ಕ್ಯಾಮರಾಗಳು ಸಾಕ್ಷಿಯ ಸಂಭ್ರಮಾಚರಣೆಯನ್ನು ಸೆರೆಹಿಡಿದಿವೆ.
ಪಂದ್ಯದ ಬಗ್ಗೆ ಹೇಳುವುದಾದರೆ, ಭಾರತ ತಂಡ 7 ರನ್ಗಳಿಂದ ಗೆದ್ದು ಫೈನಲ್ಗೆ ತಲುಪಿತು. ಮೆನ್ ಇನ್ ಬ್ಲೂ ತಂಡವು ಒಟ್ಟು 254 ರನ್‌ಗಳನ್ನು ಗಳಿಸಿದ್ದು, ಸಂಜು ಸ್ಯಾಮ್ಸನ್ ಕೇವಲ 42 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಮತ್ತೊಮ್ಮೆ ಗರಿಷ್ಟ ಅಂಕವನ್ನು ಗಳಿಸಿದರು. ಹಾರ್ದಿಕ್ ಪಾಂಡ್ಯ (27), ಇಶಾನ್ ಕಿಶನ್ (39), ತಿಲಕ್ ವರ್ಮಾ (21), ಮತ್ತು ಶಿವಂ ದುಬೆ (43) ರನ್ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಲು ಸೆಣೆಸಾಡಿದರು.
ಭಾರತ ತಂಡವು ಭಾನುವಾರ (ಮಾ.08) ಅಹಮದಾಬಾದ್‌ನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದಾರೆ (ಏಜೆನ್ಸೀಸ್).