ಸಚಿನ್ ಕ್ರಿಕೆಟ್ ದೇವರು; ವೈಭವ್ ದೇವರ ಮಗ: ಕೆ. ಶ್ರೀಕಾಂತ್
- ಐಪಿಎಲ್ ಆರೆಂಜ್ ಕ್ಯಾಪ್ ವಿನ್ನರ್ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಆಯ್ಕೆ
- ಟೀಮ್ ಇಂಡಿಯಾಗೆ ಆಯ್ಕೆಯಾದ ವೈಭವ್ ಸೂರ್ಯವಂಶಿಯನ್ನು ಸಚಿನ್ ತೆಂಡೂಲ್ಕರ್ಗೆ ಹೋಲಿಕೆ
- ಸಚಿನ್ ಕ್ರಿಕೆಟ್ ದೇವರು; ವೈಭವ್ ದೇವರ ಮಗ: ಕೆ. ಶ್ರೀಕಾಂತ್
ಕ್ರಿಕೆಟ್: ಈ ಭಾರಿಯ ಐಪಿಎಲ್ನಲ್ಲಿ ಎಲ್ಲರ ಬಾಯಲ್ಲಿ ತನ್ನ ಹೆಸರು ಮೂಡುವಂತೆ ಮಾಡಿದ ಆಟಗಾರನೆಂದರೆ ಅದು ವೈಭವ್ ಸೂರ್ಯವಂಶಿ ಎಂದು ಹೇಳಬಹುದು.
ರಾಜಸ್ಥಾನ್ ರಾಯಲ್ಸ್ ತಂಡದ ಓಪನಿಂಗ್ ಬ್ಯಾಟರ್ ಆಗಿ ಕಣಕ್ಕಿಳಿದು, ಖ್ಯಾತನಾಮ ಬೌಲರ್ಗಳನ್ನು ಮನಸೋ ಇಚ್ಛೆ ತಳಿಸಿ ರನ್ಗಳ ಕೋಟೆಯನ್ನೇ ಕಟ್ಟಿದನು. ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಸಹಿತ ಇತರ ನಾಲ್ಕು ಪ್ರಶಸ್ತಿಗಳಿಗೆ ವೈಭವ್ ಭಾಜನರಾಗಿದ್ದ.
ಅಂತೆಯೇ ಐಪಿಎಲ್ನಲ್ಲಿ ಅಮೋಗ ಪ್ರದರ್ಶನ ನೀಡಿದ ಹಿನ್ನಲೆ, ವೈಭವ್ ಸೂರ್ಯವಂಶಿ ಭಾರತ ಪುರುಷರ ತಂಡಕ್ಕೆ ಸಹ ಆಯ್ಕೆಯಾಗಿದ್ದಾನೆ. ಈ ಮೂಲಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಮ್ಮೆಗೆ ಪಾತ್ರನಾಗಿದ್ದಾನೆ.
ಸಚಿನ್ ಕ್ರಿಕೆಟ್ ದೇವರು; ವೈಭವ್ ದೇವರ ಮಗ!
ವೈಭವ್ ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಅನೇಕರು ವೈಭವ್ನನ್ನು, ಸಚಿನ್ ತೆಂಡೂಲ್ಕರ್ (Vaibhav Suryavanshi and Sachin Tendulkar) ಜೊತೆ ಹೋಲಿಸಲು ಪ್ರಾರಂಭಿಸಿದ್ದಾರೆ. ಆದರೆ ಈ ಹೋಲಿಕೆ ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ವಿರೋಧ ವ್ಯಕ್ತ ಪಡಿಸಿದ್ದಾರೆ.
ಸಚಿನ್ ಮತ್ತು ವೈಭವ್ ನಡುವಿನ ಹೋಲಿಕೆ ಮಾಡಲೇ ಬಾರದು. ಜಗತ್ತಿಗೆ ಒಬ್ಬನೇ ಸಚಿನ್ ತೆಂಡೂಲ್ಕರ್ ಇರುವುದು, ಅದಕ್ಕೆ ಅವನನ್ನು ಕ್ರಿಕೆಟ್ ದೇವರೆಂದು ಕರೆಯುವುದು. ನಾವು ವೈಭವ್ನನ್ನು ದೇವರ ಮಗನೆಂದು ಹೇಳಬಹುದೆಂದು ಅವರು ಹೇಳಿದ್ದಾರೆ. ಹಾಗೆಯೇ ಸಚಿನ್ ಮತ್ತು ವೈಭವ್ ಇಬ್ಬರು ಬೇರೆ ತಲಮಾರಿನ ಆಟಗಾರರು, ಹೀಗಾಗಿ ಇವರಿಬ್ಬರ ಹೋಲಿಕೆಗೆ ಯಾವುದೇ ಅರ್ಥವಿಲ್ಲ, ತರ್ಕವಿಲ್ಲ ಎಂದು ಶ್ರೀಕಾಂತ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ವೈಭವ್ಗೆ ಉತ್ತಮ ಭವಿಷ್ಯವಿದೆ!
ಈ ಭಾರಿಯ ಐಪಿಎಲ್ನಲ್ಲಿ ಮತ್ತು ಟಿ-ಟ್ವೆಂಟಿ ಕ್ರಿಕೆಟ್ನಲ್ಲಿ ವೈಭವ್ ಉತ್ತಮ ಪ್ರದರ್ಶನ ನೀಡಿದ್ದಾನೆ. ಅವನಿಗೆ ರನ್ಗಳಿಸುವ ಹಂಬಲವಿದೆ, ಅವನ ಶಾಟ್ ಆಯ್ಕೆ ಮತ್ತು ಕೌಶಲ್ಯ ತುಂಬಾ ಚೆನ್ನಾಗಿದೆ. ಇವನ ಆಟ ಹೀಗೆ ಮುಂದುವರಿದರೆ ಕ್ರಿಕೆಟ್ನಲ್ಲಿ ವೈಭವ್ ಸೂರ್ಯವಂಶಿಗೆ ಉತ್ತಮ ಭವಿಷ್ಯವಿದೆ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ, (ಏಜನ್ಸೀಸ್).