ರೋಹಿತ್ ಶರ್ಮಾ ನಿವೃತ್ತಿ ವದಂತಿ; ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ಗೆ ಆಪತ್ತು
- ರೋಹಿತ್ ಶರ್ಮಾ ನಿವೃತ್ತಿ ವದಂತಿ
- ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸ್ಥಾನಕ್ಕೆ ಕುತ್ತು
- ಅಗರ್ಕರ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಪೈಪೋಟಿ
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿ ಸಂದರ್ಭದಲ್ಲಿ ಟೀಂ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಿವೃತ್ತಿ ಹೊಂದಲಿದ್ದಾರೆಂಬ ವದಂತಿ ಹಬ್ಬಿದಕ್ಕೆ ಬಿಸಿಸಿಐ ಗರಂ ಆಗಿದ್ದು, ಇದೇ ಕಾರಣಕ್ಕಾಗಿ ಮುಖ್ಯ ಅಯ್ಕೆಗಾರರಾದ ಅಜಿತ್ ಅಗರ್ಕರ್ (Ajit Agarkar) ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ ಎಂಬ ಗುಸುಗುಸು ಪ್ರಾರಂಭವಾಗಿದೆ.
2027 ರಲ್ಲಿ ಅಜಿತ್ ಅಗರ್ಕರ್ ಅವರ ಸೇವಾ ಅವಧಿ ಮುಕ್ತಾಯವಾಗಲಿದ್ದು, ರೋಹಿತ್ ಶರ್ಮಾರ ನಿವೃತ್ತಿ ಕುರಿತು ವದಂತಿ ಹಬ್ಬಿದಕ್ಕೆ ಕುಪಿತಗೊಂಡಿರುವ ಆಡಳಿತ ಮಂಡಳಿ ಅಜಿತ್ರ ತಲೆದಂಡಕ್ಕೆ ಮುಂದಾಗಿದ್ದಾರೆಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಅಜಿತ್ ಬದಲಿಗೆ ವಿವಿಎಸ್!
ಡ್ರೇಸ್ಸಿಂಗ್ ರೂಮ್ನಲ್ಲಿ ನಡೆದಿರುವ ಘಟನೆಯನ್ನು ಮಾಧ್ಯಮ ವರದಿವೆರೆಗೆ ಎಳೆದು ತಂದಿರುವುದು ಬಿಸಿಸಿಐ ಕೋಪಕ್ಕೆ ಕಾರಣವಾಗಿದ್ದು, ಬಿಸಿಸಿಐ ಸೆಕ್ರೆಟರಿ ದೇವಜಿತ್ ಸೈಕಿಯಾ, ಈಗಾಗಲೇ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಅಜಿತ್ ಅಗರ್ಕರ್ ಹೇಗಿದ್ದರೂ 2027 ರಲ್ಲಿ ತಮ್ಮ ಅಧಿಕಾರವಧಿಯಿಂದ ಕೆಳಗಿಳಿಯುತ್ತಿದ್ದು, ಮುಂದುವರಿಸಲು ಬಿಸಿಸಿಐ ಮನಸ್ಸು ಮಾಡುತ್ತಿಲ್ಲ, ಅದರಲ್ಲೂ ರೋಹಿತ್ ಶರ್ಮಾ ನಿವೃತ್ತಿ ವದಂತಿ ನಂತರ ಅಗರ್ಕರ್ ಅವರ ಯಾವಾಗ ತಂಡದಿಂದ ಹೊರಹೋಗುತ್ತಾರೆ ಎನ್ನುವುದು ಗೊತ್ತಿಲ್ಲ ಎಂಬ ಮಾತು ಕೇಳಿಬುತ್ತಿದೆ.
ಈಗ ಅಜಿತ್ ಅಗರ್ಕರ್ ತಮ್ಮ ಸ್ಥಾನದಿಂದ ಕೆಳಗಿಳಿದರೆ, ಅನುಭವಿ ಆಟಗಾರ, ಹಾಗೂ ತಮ್ಮ ಅವಧಿಯಲ್ಲಿ ಅತ್ಯುತ್ತಮ ಕ್ರೀಡಾಪಟು ಎಂದೇ ಖ್ಯಾತಿಗಳಿಸಿದ್ದ ವಿವಿಎಸ್ ಲಕ್ಷ್ಮಣ್ ಮುಂದಿನ ಟೀಂ ಇಂಡಿಯಾ ತಂಡದ ಮುಖ್ಯ ಆಯ್ಕೆಗಾರ ಹುದ್ದೆ ಅಲಂಕರಿಸಲಿದ್ದಾರೆಂದು ಹೇಳಲಾಗುತ್ತಿದೆ. ಬಿಸಿಸಿಐ ವಲಯದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಲಕ್ಷ್ಮಣ್, ಯುವ ಆಟಗಾರರೊಂದಿಗೆ ಚೆನ್ನಾಗಿ ಬೆರೆಯಬಲ್ಲರು ಎನ್ನುವ ಸುದ್ದಿ ಹರಿದಾಡುತ್ತಿದೆ, (ಏಜನ್ಸೀಸ್).