- ಕ್ರಿಕೆಟ್ ದಿಗ್ಗಜರಿಗೆ ಹಿಂಬಡ್ತಿ ನೀಡಿದ ಬಿಸಿಸಿಐ
- ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯನ್ನು ಬಿ ಗ್ರೂಪ್ಗೆ
- ಮೊದಲಿದ್ದ ಎ+ ತೆಗೆದು ಎ ಮಾತ್ರ ಉಳಿಸಿಕೊಂಡ ಬಿಸಿಸಿಐ
- ಎ ಗ್ರೇಡ್‌ನಲ್ಲಿ ಮೂವರಿಗೆ ಮಾತ್ರ ಸ್ಥಾನ
ನವದೆಹಲಿ: ಬಿಸಿಸಿಐ (BCCI Central Contracts) ಪ್ರತಿ ವರ್ಷ ಭಾರತೀಯ ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ನೀಡುತ್ತದೆ. ಅಂತೆಯೇ, ಈ ವರ್ಷವು ಘೋಷಿಸಿದ್ದು, ಮೊದಲಿನಿಂದಲೂ ಇದ್ದ ಎ+ ಪ್ಲಸ್ ಗ್ರೇಡ್ ಅನ್ನು ಕಡೆಗೂ ರದ್ದುಗೊಳಿಸಿ, ಎ ಶ್ರೇಣಿಯನ್ನು ಮಾತ್ರ ಉಳಿಸಿಕೊಂಡಿದೆ. ಈ ಹಿಂದಿನ ವರದಿಗಳಂತೆಯೇ, ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಗೆ ಹಿಂಬಡ್ತಿ ನೀಡಲಾಗಿದೆ.
ಈ ಮೊದಲು ಏಕದಿನ, ಟಿ20 ಮತ್ತು ಟೆಸ್ಟ್ ಸೇರಿದಂತೆ ಒಟ್ಟು ಮೂರು ಫಾರ್ಮೆಟ್ಗಳಲ್ಲಿ ಆಡುವ ಸ್ಟಾರ್ ಕ್ರಿಕೆಟಿಗರನ್ನು ಎ+ ವರ್ಗದಲ್ಲಿ ಇರಿಸಿ, ಅದರ ಮೇಲೆ ಅವರಿಗೆ ಸಂಭಾವನೆಯನ್ನು ನೀಡಲಾಗುತ್ತಿತ್ತು. ಆದರೀಗ, ಅದನ್ನು ತೆಗೆದುಹಾಕಿರುವ ಬಿಸಿಸಿಐ, ಆ ಗ್ರೂಪ್ನಲ್ಲಿರುವ ಆಟಗಾರರನ್ನು ಅವರ ಲಭ್ಯತೆ ಮತ್ತು ಪ್ರದರ್ಶನದ ಆಧಾರದ ಮೇರೆಗೆ ಬಡ್ತಿ ಮತ್ತು ಹಿಂಬಡ್ತಿ ನೀಡಿದೆ. ಅದರಂತೆಯೇ, ಹೊಸ ಕೇಂದ್ರ ಒಪ್ಪಂದದಲ್ಲಿ, ವಿರಾಟ್ ಮತ್ತು ರೋಹಿತ್ರನ್ನು ಬಿ ಗ್ರೇಡ್ಗೆ ಇಳಿಸಲಾಗಿದೆ.
'ಎ' ಶ್ರೇಣಿಯಲ್ಲಿ ಕೇವಲ ಮೂವರಿಗೆ ಸ್ಥಾನ
ಬಿಸಿಸಿಐ ರಿಲೀಸ್ ಮಾಡಿರುವ ಪಟ್ಟಿಯ ಪ್ರಕಾರ, ವೇಗಿ ಜಸ್ಪ್ರೀತ್ ಬುಮ್ರಾ, ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಆರಂಭಿಕ ಬ್ಯಾಟರ್ ಹಾಗೂ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಮಾತ್ರ ಕೇಂದ್ರ ಒಪ್ಪಂದದ 'ಎ' ಗ್ರೇಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
'ರೋಕೊ' ಜೋಡಿಗೆ ವರ್ಷಕ್ಕೆ 4 ಕೋಟಿ ರೂ. ಅಷ್ಟೇ
ಪ್ರಸ್ತುತ, ಟಿ20 ಮತ್ತು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ದಿಗ್ಗಜರು, ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಭಾರತ ಪರ ಆಡುತ್ತಿದ್ದಾರೆ. ಆಯಾ ಸರಣಿಯ ಪ್ರತಿ ಪಂದ್ಯದಲ್ಲೂ ಅವರ ಪ್ರದರ್ಶನ ಹೇಗಿದೆ? ಎಂಬುದು ಬಡ್ತಿ ಅಥವಾ ಹಿಂಬಡ್ತಿ ನೀಡಲು ಬಹುಮುಖ್ಯ ಅಂಶಗಳಾಗಿವೆ. ಇದೆಲ್ಲವನ್ನೂ ಪರಿಗಣಿಸಿಯೇ ಈಗ ಬಿಸಿಸಿಐ, ರೋಹಿತ್ ಮತ್ತು ವಿರಾಟ್ರನ್ನು 'ಬಿ' ಗ್ರೂಪ್ಗೆ ಇಳಿಸಿದೆ ಎಂದು ವರದಿಯಾಗಿದೆ. ಸದ್ಯ ಈ ವಿಷಯ ಕ್ರಿಕೆಟ್ ಪ್ರಿಯರಿಗೆ ಮಾತ್ರವಲ್ಲದೇ, ಸ್ಟಾರ್ ಕ್ರಿಕೆಟಿಗರ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.
ಬಿ, ಸಿ ಅವರಿಗೆ ಇಷ್ಟೇ ಸಂಭಾವನೆ
ಶ್ರೇಣಿ 'ಎ' ಆಟಗಾರರು ವರ್ಷಕ್ಕೆ 5 ಕೋಟಿ ರೂ. ಪಡೆಯುತ್ತಾರೆ. ಅದೇ ಗ್ರೇಡ್ 'ಬಿ' ಮತ್ತು 'ಸಿ' ಆಟಗಾರರು ವಾರ್ಷಿಕವಾಗಿ 3 ಕೋಟಿ ಮತ್ತು ಹೆಚ್ಚುವರಿ 1 ಕೋಟಿ ರೂ. ಮೊತ್ತವನ್ನು ಸಂಭಾವನೆಯಾಗಿ ಸ್ವೀಕರಿಸುತ್ತಾರೆ. ಈ ಹಿಂದೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಗ್ರೂಪ್ ಎ+ ಆಟಗಾರರಾಗಿದ್ದರು. 2024-25ರಲ್ಲಿ 7 ಕೋಟಿ ರೂ. ಸಂಭಾವನೆಯನ್ನು ವಾರ್ಷಿಕವಾಗಿ ಪಡೆದಿದ್ದರು,(ಏಜೆನ್ಸೀಸ್).