- ಭಾರತ ಮತ್ತು ಯುಎಸ್ಎ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು
- ಉದ್ಘಾಟನಾ ಪಂದ್ಯಕ್ಕೆ ಆಗಮಿಸಿದ್ದ ರೋಹಿತ್ ಶರ್ಮ
- ಮುಖೇಶ್ ಅಂಬಾನಿ ನೀಡಿದ ಸ್ನ್ಯಾಕ್ಸ್ ಬೇಡವೆಂಡ ರೋಹಿತ್ ರಿಯಾಕ್ಷನ್ ವೈರಲ್
ನವದೆಹಲಿ: ನಿನ್ನೆ (ಫೆ.07) ನಡೆದ ಭಾರತ ಮತ್ತು ಯುಎಸ್ಎ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ರೋಚಕ ಗೆಲುವನ್ನೇ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಮತ್ತೊಂದೆಡೆ, ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಸ್ಟೇಡಿಯಂಗೆ ಆಗಮಿಸಿದ್ದ ರೋಹಿತ್ ಶರ್ಮ, ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಕೊಟ್ಟ ಟೀ ಮತ್ತು ತಿನಿಸನ್ನು ತಿರಸ್ಕರಿಸಿದ ದೃಶ್ಯ ಸದ್ಯ ಜಾಲತಾಣಗಳಲ್ಲಿ ನೆಟ್ಟಿಗರ ಮಿಶ್ರ ಅಭಿಪ್ರಾಯಗಳಿಗೆ ಕಾರಣವಾಗಿದೆ.
ತಮ್ಮ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಒಂದೆಡೆಯಾದರೆ, 2026ರ ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಟೂರ್ನಮೆಂಟ್ ರಾಯಭಾರಿಯಾಗಿ ಕಾಣಿಸಿಕೊಂಡ ರೋಹಿತ್ ಶರ್ಮ, ಪ್ರತಿಷ್ಠಿತ ಐಸಿಸಿ ಟ್ರೋಫಿಯನ್ನು ಹೊತ್ತು, ಐತಿಹಾಸಿಕ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ನಡೆದುಕೊಂಡು ಹೋಗಿದ್ದು ಮತ್ತೊಂದೆಡೆ. ಈ ಮಧ್ಯೆ, ಮುಖೇಶ್ ಅಂಬಾನಿ ಜತೆ ಸ್ಟ್ಯಾಂಡ್ಸ್ನಲ್ಲಿ ಕುಳಿತಿದ್ದ ರೋಹಿತ್, ಅಂಬಾನಿ ಅವರು ನೀಡಿದ ಟೀ ಮತ್ತು ಬಿಸ್ಕತ್ ಬೇಡೆವಂದ ರೀತಿ ನೋಡಿ, ಇದೇನು ಡಯೆಟ್ ಮಹಿಮೆಯೇ? ಎಂದೆಲ್ಲ ನೆಟ್ಟಿಗರು ಲೇವಡಿ ಮಾಡಿದ್ದಾರೆ.
ತಮ್ಮ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಪತ್ನಿ ನೀತಾ ಅವರೊಂದಿಗೆ ವಿಐಪಿ ಬಾಕ್ಸ್ನಲ್ಲಿದ್ದ ಮುಖೇಶ್ ಅಂಬಾನಿ, ರೋಹಿತ್ರನ್ನು ಮಾತನಾಡಿಸಿ, ಟೀ ಮತ್ತು ಬಿಸ್ಕತ್ ನೀಡಿದರು. ಇದನ್ನು ನೋಡ್ತಿದ್ದಂತೆ ಬೇಡ ಎಂದ ರೋಹಿತ್ ಶರ್ಮ ರಿಯಾಕ್ಷನ್ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೊಂದು ದೃಶ್ಯವನ್ನು ಮುಂದಿಟ್ಟು ಒಂದೊಂದು ರೀತಿಯಲ್ಲಿ ಲೇವಡಿ ಮಾಡಿರುವ ನೆಟ್ಟಿಗರು, 2027ರ ವಿಶ್ವಕಪ್ ಆಡಬೇಕು ಎಂಬ ಛಲದಿಂದ, ಹೆಚ್ಚು ತಿನ್ನೋದು ಬೇಡ ಎಂದು ರೋಹಿತ್ ನಿರ್ಧರಿಸಿದ್ದಾರೆ ಎಂದಿದ್ದಾರೆ.
ಹೀಗಿದೆ ನೆಟ್ಟಿಗರ ರಿಯಾಕ್ಷನ್ಗಳು
1. ರೋಹಿತ್ ಬಾಯ್, ನಿಮ್ಮ ಡಯಟ್ ಪ್ಲ್ಯಾನ್ ತುಂಬ ಕಠಿಣವಾಗಿದೆ ಅನಿಸುತ್ತೆ? 2027 ವರ್ಲ್ಡ್ಕಪ್ ಮುಗಿಯುವವರೆಗೂ ಕುರುಕಲು ತಿಂಡಿಗಳು ಬೇಡ, ಕೇವಲ ಬೌಂಡರಿ ಮಾತ್ರ ಇರಲಿ ಎಂದು ನಿರ್ಧರಿಸಬೇಕು? ಎಂದಿದ್ದಾರೆ.
2. ಅದು ಟೀ ಅಲ್ಲ ಅನಿಸುತ್ತೆ, ಯಾವುದೋ ತಿನಿಸು ಮತ್ತು ಚಟ್ನಿ ಅಂತೆ ಕಾಣುತ್ತೆ ಎಂದು ಕಮೆಂಟ್ ಹಾಕಿದ್ದಾರೆ.
3. ಮತ್ತೊಬ್ಬರು, ಇದು ಶಿಸ್ತು ಎಂದರೆ. ವಿಶ್ವಕಪ್ ಗೆಲ್ಲುವುದೇ ದೊಡ್ಡ ಗುರಿ ಆಗಿರುವಾಗ, ಅಂಬಾನಿ ಅವರ ಸ್ನಾಕ್ಸ್ಗೆ ಜಾಗವಿಲ್ಲ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).