ರೋಹಿತ್ ಶರ್ಮ ಹೆಸರು ಪಾಕ್ ತಂಡದಲ್ಲಿ
- ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೇಳೆ ಬಿಗ್ ಮಿಸ್ಟೇಕ್
- ಸ್ಕೋರ್ ಬೋರ್ಡ್ನಲ್ಲಿ ಪಾಕ್ ತಂಡದಲ್ಲಿ ಭಾರತೀಯ ಆಟಗಾರರ ಪಟ್ಟಿ
- ರೋಹಿತ್ ಶರ್ಮಾ ನಾಯಕ ಎಂದು ತೋರಿಸಿದ ಪಟ್ಟಿಗೆ ನೆಟ್ಟಿಗರು ಆಕ್ರೋಶ
PAK vs BAN: ಇಲ್ಲಿ ನೋಡಿದರೆ ಐಪಿಎಲ್ 19ನೇ ಆವೃತ್ತಿಯು ಯಶಸ್ವಿಯಾಗಿ ನಡೆಯುತ್ತಿದ್ದು, ರೋಹಿತ್ ಶರ್ಮ ಸೇರಿದಂತೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳ ಪರ ಆಡುತ್ತಿದ್ದಾರೆ. ಹೀಗಿರುವಾಗ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೇಳೆ ನಡೆದ ಬಿಗ್ ಮಿಸ್ಟೇಕ್ ಸದ್ಯ ಭಾರತೀಯ ಕ್ರಿಕೆಟ್ ಪ್ರಿಯರ ಪಿತ್ತವನ್ನು ನೆತ್ತಿಗೇರಿಸಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ (ಬಾಂಗ್ಲಾದೇಶ vs ಪಾಕಿಸ್ತಾನ, 1 ನೇ ಟೆಸ್ಟ್,) ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 413 ರನ್‌ಗೆ ಆಲೌಟ್ ಆಯಿತು. ಈ ಸಂದರ್ಭದಲ್ಲಿ, ಒಂದು ಶಾಕಿಂಗ್ ಘಟನೆ ನಡೆದಿದ್ದು, ರೋಹಿತ್ ಶರ್ಮಾ ಮತ್ತು ಇತರ ಭಾರತೀಯ ಕ್ರಿಕೆಟಿಗರನ್ನು ಪಾಕಿಸ್ತಾನ ತಂಡದಲ್ಲಿರುವಂತೆ ಸ್ಕೋರ್‌ಬೋರ್ಡ್‌ನಲ್ಲಿ ತೋರಿಸಲಾಗಿದೆ.
ಇಲ್ಲಿ ಪಾಕ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಇದ್ದರೆ, ಅವರ ನಂತರದಲ್ಲಿ ಶುಭಮನ್ ಗಿಲ್, ಅಕ್ಷರ್ ಪಟೇಲ್, ತಿಲಕ್ ವರ್ಮಾ ಸೇರಿ ಸ್ಟಾರ್ ಆಟಗಾರರ ಹೆಸರಿದೆ. ಅಸಲಿಗೆ, ಈ ಪಾಕಿಸ್ತಾನ ತಂಡದಲ್ಲಿ ಭಾರತೀಯ ಆಟಗಾರರ ಪ್ಲೇಯಿಂಗ್ ಎಲೆವನ್ ಇದೆ. ಬ್ರಾಡ್ಕಾಸ್ಟರ್ ಮಾಡಿದ ದೊಡ್ಡ ಎಡವಟ್ಟು ಸೋಷಿಯಲ್ ಮೀಡಿಯಾದಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳ ಛೀಮಾರಿಗೆ ಕಾರಣವಾಗಿದೆ.
ಢಾಕಾ ಕ್ರಿಕೆಟ್ ಕ್ರೀಡಾಂಗಣದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ, ಪಾಕಿಸ್ತಾನ ಸ್ಕೋರ್‌ಬೋರ್ಡ್‌ನಲ್ಲಿ ಭಾರತೀಯ ಆಟಗಾರರ ಹೆಸರುಗಳನ್ನು ಪ್ರದರ್ಶಿಸಲಾಗಿದೆ. ಬ್ರಾಡ್ಕಾಸ್ಟರ್ ತಲೆಯಲ್ಲಿ ಆನೆ ಲದ್ದಿ ತುಂಬಿತ್ತೆ ಎಂದು ಅನೇಕರು ಕಿಡಿಕಾರುತ್ತಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಬಿಗ್ ಮಿಸ್ಟೇಕ್ ಹಿಂದೆಂದೂ ಸಂಭವಿಸಿಲ್ಲ. ಪಾಕ್ ಆಟಗಾರರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರನ್ನು ಹಾಕಿರುವುದು ದೊಡ್ಡ ತಪ್ಪು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).