ಮೈದಾನದಲ್ಲೇ ಪತ್ನಿ ಜತೆ ರೋಹಿತ್ ಜಗಳ: ರಿತಿಕಾ ಮುಂದೆ ತಣ್ಣಗಾದ ಹಿಟ್​ಮ್ಯಾನ್​ ಆಕ್ರೋಶ, ವಿಡಿಯೋ ವೈರಲ್​! Rohit Sharma  
ಕ್ರಿಕೆಟ್

ಮೈದಾನದಲ್ಲೇ ಪತ್ನಿ ಜತೆ ರೋಹಿತ್ ಜಗಳ: ರಿತಿಕಾ ಮುಂದೆ ತಣ್ಣಗಾದ ಹಿಟ್​ಮ್ಯಾನ್​ ಆಕ್ರೋಶ, ವಿಡಿಯೋ ವೈರಲ್​! Rohit Sharma

ಪ್ರಮುಖ ಮುಖ್ಯಾಂಶಗಳು

  • ಗಂಡ-ಹೆಂಡತಿ ಅಂದಮೇಲೆ ಅಲ್ಲಿ ಪ್ರೀತಿ, ಕೋಪ, ಮುನಿಸು ಹಾಗೂ ಜಗಳ ತುಂಬಾ ಸಹಜ
  • ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್​ಗೆ ಅವರ ಪತ್ನಿ ಕಪಾಳಮೋಕ್ಷ ಮಾಡಿದ ವಿಡಿಯೋ ಭಾರಿ ವೈರಲ್​ ಆಗಿತ್ತು
  • ಇದೀಗ ಭಾರತ ತಂಡದ ಮಾಜಿ ನಾಯಕ ರೋಹಿತ್​ ಶರ್ಮಾ ಪತ್ನಿ ರಿತಿಕಾ ಜತೆ ಜಗಳವಾಡಿರುವ ವಿಡಿಯೋ ವೈರಲ್​ ಆಗಿದೆ​
Rohit Sharma : ಅದೆಷ್ಟೇ ಉನ್ನತ ಸ್ಥಾನವೇ ಇರಲಿ, ಗಂಡ-ಹೆಂಡತಿ ಅಂದಮೇಲೆ ಅಲ್ಲಿ ಪ್ರೀತಿ, ಕೋಪ, ಮುನಿಸು ಹಾಗೂ ಜಗಳ ತುಂಬಾ ಸಹಜ. ಹಿಂದೊಮ್ಮೆ ವಿಮಾನದಿಂದ ಕೆಳಗಿಳಿಯುವ ಮುನ್ನ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್​ಗೆ ಅವರ ಪತ್ನಿ ಕಪಾಳಮೋಕ್ಷ ಮಾಡಿದ ವಿಡಿಯೋ ಭಾರಿ ವೈರಲ್​ ಆಗಿ, ಸುದ್ದಿಯಾಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಟೀಮ್​ ಇಂಡಿಯಾದ ಮಾಜಿ ನಾಯಕ ರೋಹಿತ್​ ಶರ್ಮಾ ತಮ್ಮ ಪತ್ನಿ ರಿತಿಕಾ ಸಾಜ್ದೇಹ್​ ಜತೆ ಕ್ರೀಡಾಂಗಣದಲ್ಲೇ ಜಗಳವಾಡಿದ್ದಾರೆ.
ಹೌದು, ಟೀಮ್ ಇಂಡಿಯಾ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇದೇ ಖುಷಿಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆಗಳು ನಡೆಯುತ್ತಿವೆ. ಭಾನುವಾರ (ಮಾರ್ಚ್​ 8) ನ್ಯೂಜಿಲೆಂಡ್​ ವಿರುದ್ಧ ಫೈನಲ್​ ಪಂದ್ಯ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ಕ್ರಿಕೆಟಿಗರು ಅಹಮದಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಂಭ್ರಮಿಸಿದರು. ಇದೇ ಸಮಯದಲ್ಲಿ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಾಜ್ದೇಹ್ ಜಗಳವಾಡುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. 
ವಿಡಿಯೋದಲ್ಲಿ ಏನಿದೆ?
ರೋಹಿತ್​ ಮತ್ತು ರಿತಿಕಾ ಕ್ರೀಡಾಂಗಣದಲ್ಲೇ ಯಾವುದೋ ಒಂದು ವಿಷಯಕ್ಕೆ ಜಗಳವಾಡಿದ್ದಾರೆ. ರೋಹಿತ್​ ಅವರು LED ಬೌಂಡರಿ ಬೋರ್ಡ್ ಅನ್ನು ಒರಗಿ ನಿಂತಿರುವಾಗ ಬೋರ್ಡ್​ ಹಿಂಬದಿಯಲ್ಲಿದ್ದ ರಿತಿಕಾ, ರೋಹಿತ್​ಗೆ ಏನೋ ಹೇಳುತ್ತಾರೆ. ಇದರಿಂದ ರೋಹಿತ್​ ಆಕ್ರೋಶಗೊಂಡಂತೆ​​ ತಮ್ಮ ಪತ್ನಿಯ ವಿರುದ್ಧ ಅಸಮಾಧಾನ ಹೊರಹಾಕುತ್ತಾರೆ. ಆದರೂ, ರಿತಿಕಾ, ರೋಹಿತ್​ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ರೋಹಿತ್​ ಮಾತ್ರ ಪತ್ನಿಯ ಮಾತನ್ನು ಒಪ್ಪುವುದೇ ಇಲ್ಲ ಮತ್ತು ಮುನಿಸಿಕೊಂಡಂತೆ ಕಾಣುತ್ತಾರೆ. ಅಂತಿಮವಾಗಿ ರಿತಿಕಾ ನಗಾಡುತ್ತಾರೆ. ಅಲ್ಲಿಗೆ ವಿಡಿಯೋ ಕೊನೆಯಾಗುತ್ತದೆ.
ಈ ವಿಡಿಯೋ ನೆಟ್ಟಿಗರ ಗಮನ ಸೆಳೆದು, ಕ್ಷಣಾರ್ಧದಲ್ಲೇ ವೈರಲ್ ಆಗಿದೆ. ಅನೇಕ  ಮಂದಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಯಾರೇ ಆಗಲಿ ಹೆಂಡತಿ ಮುಂದೆ ತಲೆಯಾಡಿಸಲೇಬೇಕು ಎಂದು ಕೆಲವರು ಹಾಸ್ಯ ಚಟಾಕಿ ಹಾರಿಸಿದರೆ, ಇನ್ನು ಕೆಲವರು ರೋಹಿತ್​ ಮತ್ತು ರಿತಿಕಾ ನಡುವೆ ಏನಾಯ್ತು ಎಂದು ಗ್ರೋಕ್​ ಅನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಗ್ರೋಕ್​, ರಿತಿಕಾ ಅವರು ರೋಹಿತ್​ಗೆ ಏನನ್ನೋ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ರೋಹಿತ್​ ಮನವರಿಕೆಯಾಗುತ್ತಿಲ್ಲ. ಅಂಥ ದೊಡ್ಡ ಸಮಸ್ಯೆ ಏನಿಲ್ಲ ಎಂದು ಉತ್ತರಿಸಿದೆ. ಇನ್ನು ಕೆಲವರು ಇದು ಎಂಥಾ ಕ್ಯೂಟ್​ ಜಗಳ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.
ಅಂದಹಾಗೆ, ಕ್ರೀಡಾಂಗಣದ ಬೌಂಡರಿ ಗೆರೆ ಬಳಿ ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಜೊತೆ ಜಗಳವಾಡಿದರೆ, ಭಾರತೀಯ ತಂಡದ ಉಳಿದ ಆಟಗಾರರು ತಮ್ಮ ಪತ್ನಿಯರು ಮತ್ತು ಗೆಳತಿಯರೊಂದಿಗೆ ಸಂಭ್ರಮಿಸಿದರು. ವಿಶೇಷವಾಗಿ, ಹಾರ್ದಿಕ್ ಪಾಂಡ್ಯ ಇಡೀ ಮೈದಾನದಲ್ಲಿ ಸುತ್ತಾಡಿ ತನ್ನ ಗೆಳತಿ ಮಹಿಕಾ ಶರ್ಮಾ ಜೊತೆ ರೊಮ್ಯಾನ್ಸ್ ಮಾಡಿದರು. ಪಂದ್ಯದ ನಂತರ ಇಬ್ಬರೂ 100 ಬಾರಿ ಪರಸ್ಪರ ಅಪ್ಪಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವರದಿಗಳಿವೆ. ಇಶಾನ್ ಕಿಶನ್ ಕೂಡ ಕಡಿಮೆ ಏನಿಲ್ಲ, ತಮ್ಮ ಗೆಳತಿ ಅದಿತಿ ಹುಂಡಿಯಾಗೆ ಕಿಸ್ ನೀಡಿದರು, (ಏಜೆನ್ಸೀಸ್​).