ರೋಕೊ, ಗೌತಮ್ ಗಂಭೀರ್​ 
ಕ್ರಿಕೆಟ್

ಕೊಹ್ಲಿ, ರೋಹಿತ್​ರನ್ನು ಕಡೆಗಣಿಸಿದ್ರು! ಗೌತಮ್​ ಗಂಭೀರ್​ ನಡೆಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಕಿಡಿ

ಬೆಂಗಳೂರು: ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಭಾರತ ಗೆದ್ದು ಬೀಗಿತು. ಈ ಸರಣಿಯಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮ ಜೋಡಿಗೆ ಕ್ರಿಕೆಟ್​ ಪ್ರಿಯರಿಂದ ಮೆಚ್ಚುಗೆ, ಪ್ರಶಂಸೆಗಳ ಸುರಿಮಳೆಯೇ ಹರಿದುಬಂದಿತು. ಆದರೆ, ಹೆಡ್​ ಕೋಚ್ ಗೌತಮ್ ಗಂಭೀರ್ ಅವರ ನಡೆಗೆ ಭಾರೀ ತೀವ್ರ ಅಸಮಾಧಾನಗಳು ವ್ಯಕ್ತವಾಯಿತು.
ಸರಣಿಯ ಮೊದಲೆರೆಡು ಪಂದ್ಯಗಳಲ್ಲಿ ಎರಡು ಶತಕ ಬಾರಿಸಿದ ಕೊಹ್ಲಿ, ಮೂರನೇ ಮ್ಯಾಚ್​ನಲ್ಲಿ ಅರ್ಧಶತಕ ಸಿಡಿಸಿದರು. ಇನ್ನು ರೋಹಿತ್ ಶರ್ಮ ಕೂಡ ಅರ್ಧಶತಕಗಳ ಮೂಲಕ ಸ್ಪೋಟಕ ಇನ್ನಿಂಗ್ಸ್ ನೀಡಿದರು. 'ರೋಕೊ' ಜೋಡಿಯ ಆಟಕ್ಕೆ ಫಿದಾ ಆದ ಮಾಜಿ ಹಿರಿಯ ಕ್ರಿಕೆಟಿಗರು ಮತ್ತು ಅಭಿಮಾನಿ ಬಳಗ, ದಿಗ್ಗಜ ಬ್ಯಾಟರ್​ಗಳ ಬೆನ್ನುತಟ್ಟಿದರು. ಆದರೆ, ತಂಡದ ಹೆಡ್​ ಕೋಚ್​ ಆಗಿ ಗೌತಮ್​ ಗಂಭೀರ್​​ ಮಾತ್ರ ಇವರಿಬ್ಬರಿಗೂ ಪ್ರೋತ್ಸಾಹ ಅಥವಾ ಪ್ರಶಂಸೆ ವ್ಯಕ್ತಪಡಿಸುವ ಪ್ರಯತ್ನ ಮಾಡದಿರುವುದು ಆಂತರಿಕ ಸಮಸ್ಯೆ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ಒತ್ತಿ ಹೇಳಿದೆ.
ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಮಾತನಾಡಿದ ರಾಬಿನ್​, "ಒಂದು ಬೃಹತ್ ಗುರಿಯನ್ನು ನೀವು ಬೆನ್ನತ್ತಿದ್ದೀರಿ ಎಂದರೆ, ನಿಮ್ಮ ತಂಡದ ಅತ್ಯುತ್ತಮ ಬ್ಯಾಟ್ಸ್​ಮನ್​ಗಳು ಎಂಟ್ರಿ ಕೊಡಬೇಕು. ಟಾಪ್​ ಆರ್ಡರ್​ನ ಮೂವರು ಬ್ಯಾಟರ್​ಗಳಲ್ಲಿ ಯಾವುದೇ ಬದಲಾವಣೆ ಆಗಬಾರದು. ಪಿಚ್​ಗೆ ಅವರನ್ನು ಕಳಿಸುತ್ತಿದ್ದೀರಾ ಎಂದಾದರೆ, ಅವರ ಬಲಿಷ್ಠತೆ ನಿಮಗೆ ಗೊತ್ತಿರಬೇಕು" ಎಂದು ಹೇಳಿದ್ದಾರೆ.

ರೋಕೊ ಪ್ರದರ್ಶನ...

"ನನಗೆ ಎಲ್ಲೂ ಗಂಭೀರ್​ ಕೊಹ್ಲಿ ಅಥವಾ ರೋಹಿತ್​ರನ್ನು ಗುರುತಿಸಿ, ಅಭಿನಂದಿಸಲಿಲ್ಲ. ಇದು ನನಗೆ ಆಶ್ಚರ್ಯ ತಂದಿತು. ಈ ಇಬ್ಬರು ಆಟಗಾರರು ಅದ್ಭುತವೇ ನಿಜ. ​​ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಜತೆಗೆ ಅಗಾಧ ಸಾಮರ್ಥ್ಯವನ್ನು ತೋರಿದರು. ಈ ಮೂಲಕ ತಮ್ಮ ವಿರುದ್ಧದ ಟೀಕೆ, ವ್ಯಂಗ್ಯ ಮತ್ತು ಊಹಾಪೋಹಗಳಿಗೆ ಅವರಿಬ್ಬರು ಸರಿಯಾದ ಟಕ್ಕರ್ ನೀಡಿದರು" ಎಂದು ಉತ್ತಪ್ಪ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ,(ಏಜೆನ್ಸೀಸ್).