Rishabh Pant makes midnight plea to Uttarakhand CM for land typo-filled post goes viral
- ಉತ್ತರಾಖಂಡದಲ್ಲಿ ಜಮೀನು ಬೇಕು ಎಂದು ಸಿಎಂಗೆ ಮಧ್ಯರಾತ್ರಿ ಕ್ರಿಕೆಟಿಗ ರಿಷಭ್ ಪಂತ್ ಮನವಿ.
- ಕಾಗುಣಿತ ದೋಷ, ಸೆಂಟೆನ್ಸ್ ಮಿಸ್ಟೇಕ್ ಕಂಡು ಕುಡಿದಿದ್ದಾರ ಎಂದು ಗೇಲಿ ಮಾಡಿದ ನೆಟ್ಟಿಗರು.
- ಇವ್ರಿಗೆ ಸರ್ಕಾರಿ ಜಮೀನು ಬೇಕೋ ಅಥವಾ ಗಿಫ್ಟ್ ಆಗಿ ಜಮೀನು ಬೇಕೋ ಎಂದು ಪ್ರಶ್ನಿಸಿದ ಎಕ್ಸ್ ಬಳಕೆದಾರರು.
ಪ್ರಸ್ತುತ ಶ್ರೀಲಂಕಾ ಪ್ರವಾಸದ ನಿಮಿತ್ತ ಕೊಲಂಬೊದಲ್ಲಿ ಭಾರತದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡುತ್ತಿರುವ 28 ವರ್ಷದ ಪಂತ್, ಪ್ರಸ್ತುತ ವಾಸ ಇರುವ ದೆಹಲಿಯ ನಿವಾಸದಿಂದ ತಮ್ಮ ಹುಟ್ಟೂರಿಗೆ ಸ್ಥಳಾಂತರಿಸಲು ಉತ್ತರಾಖಂಡದಲ್ಲಿ ಭೂಮಿ ಖರೀದಿಸಲು ಬಯಸಿರುವುದಾಗಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರಿಷಭ್ ಪಂತ್ ಬರೆದುಕೊಂಡಿದ್ದು ಇಷ್ಟು
ಶನಿವಾರ 12:46 ಕ್ಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮನವಿ ಮಾಡಿಕೊಂಡಿದ್ದು ಹೀಗೆ, 'ಹೆಲೋ ಸರ್ ಹೇಗಿದ್ದೀರಿ. ನನ್ನ ಹುಟ್ಟೂರು ಉತ್ತರಾಖಂಡವಾಗಿರುವುದರಿಂದ ದೆಹಲಿಯಿಂದ ನನ್ನ ನೆಲೆಯನ್ನು ಬದಲಾಯಿಸಲು ನಿರ್ಧರಿಸಿದ್ದೇನೆ.
ನಾನು ಜಮೀನು ಖರೀದಿಸಲು ಪ್ರಯತ್ನಿಸುತ್ತಿದ್ದೇನೆ. ಇಲ್ಲಿ ವಾಸಿಸಲು ದೊಡ್ಡದಾದ ಹಾಗೂ ಅನುಕೂಲಕರವಾದ ಯಾವುದೇ ಸ್ಥಳ ಸಿಗುತ್ತಿಲ್ಲ. ನನಗೆ ನನ್ನ ಉತ್ತರಾಖಂಡವೆಂದರೆ ತುಂಬಾ ಪ್ರೀತಿ. ನನ್ನ ವಿನಂತಿಯೇನೆಂದರೆ, ದಯವಿಟ್ಟು ಜಮೀನು ಸ್ವಾಧೀನಪಡಿಸಿಕೊಳ್ಳಲು ನನಗೆ ಸಹಾಯ ಮಾಡಿ. 3 ವರ್ಷಗಳಾಗಿವೆ ಯಾವುದೇ ಜಮೀನು ಸಿಕ್ಕಿಲ್ಲ, ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು, 'ಅಂತರರಾಷ್ಟ್ರೀಯ ಮಟ್ಟದ ಉನ್ನತ ವೇದಿಕೆಗಳಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದಕ್ಕಾಗಿ ಉಡುಗೊರೆ ಸಿಗುವುದು ತುಂಬಾ ಖುಷಿಯ ಸಂಗತಿಯಾಗುತ್ತದೆ. ಆದರೆ ನೀವು ಅನುಮತಿಸಿದರೆ ನಾನುಸರ್ಕಾರದ ಮೂಲಕ ಮತ್ತು ಅವರ ಅಧಿಕೃತ ದರದಲ್ಲೇ ಖರೀದಿಸಲು ಬಯಸುತ್ತೇನೆ. ಕನಿಷ್ಠ ಪಕ್ಷ ನನ್ನ ಸ್ವಂತ ರಾಜ್ಯದಲ್ಲಿ ನನ್ನ ಮೊದಲ ಮನೆ ನಿರ್ಮಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ' ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರಿಂದ ಭಾರೀ ಟೀಕೆ
ಅವರು ಕುಡಿದಿದ್ದಾರಾ? ರಾತ್ರಿ 1 ಗಂಟೆಗೆ ಬರೆದುಕೊಂಡಿರುವ ಈ ಪೋಸ್ಟ್ನಲ್ಲಿ ಇಷ್ಟೊಂದು ದೋಷ, ವ್ಯಾಕರಣ ತಪ್ಪು ಮತ್ತು ಅರ್ಥಹೀನವಾಗಿ ಮಾತನಾಡುತ್ತಿದ್ದಾನೆ. ಅವರು ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇನೆ. ಭಾರತ ಟೆಸ್ಟ್ ಪಂದ್ಯವನ್ನು ಆಡುತ್ತಿದೆ, ಮತ್ತು ಈ ಸಮಯದಲ್ಲಿ ಇಂತಹ ವಿಷಯಗಳಲ್ಲಿ ನಿರತರಾಗಿದ್ದಾರಾ ಎಂದು ಎಕ್ಸ್ ಖಾತೆ ಬಳಕೆದಾರರೊಬ್ಬರು ಟೀಕೆ ಮಾಡಿದ್ದಾರೆ.
ಸಹೋದರ, ಅವರು ಈ ನಾಡಿನ ಮುಖ್ಯಮಂತ್ರಿ, ನಿಮ್ಮ ವೈಯಕ್ತಿಕ ದಲ್ಲಾಳಿ ಅಲ್ಲ ಎಂದ ಒಬ್ಬರು ಟೀಕೆ ಮಾಡಿದ್ದರೆ, ಮತ್ತೊಬ್ಬರು ಪುಷ್ಕರ್ ಸಿಂಗ್ ಧಾಮಿ ಸಿಎಂ ಅಲ್ಲ ಸೈಟ್ ಡೀಲರ್ ಎನ್ನುವ ಮೀಮ್ಗಳನ್ನು ಕ್ರಿಯೇಟ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಉಚಿತವಾಗಿ ಜಮೀನು ಬೇಕಾ?
ನೀವು ಅರ್ಧ ಬಾಟಲಿ ಕುಡಿದ ನಂತರ ಈ ರೀತಿಯ ಟ್ವೀಟ್ ಮಾಡುತ್ತಿದ್ದೀರಿ. ಅವರು ಜಮೀನನ್ನು ಉಡುಗೊರೆಯಾಗಿ ಕೊಡಬೇಕು ಎಂದು ನಿರೀಕ್ಷಿಸುತ್ತಿದ್ದಾರೆ. ಯಾವುದೇ ಸಮಸ್ಯೆಯ ವಿರುದ್ಧ ಧ್ವನಿ ಎತ್ತದ ಇವರು, ಪುಕ್ಸಟ್ಟೆಯಲ್ಲಿ ಜಮೀನು ಪಡೆಯಲು ನಿರೀಕ್ಷಿಸುವ ಈ ಕ್ರಿಕೆಟಿಗರ ಬಗ್ಗೆ ನನಗೆ ಎಳ್ಳಷ್ಟೂ ಸಹಾನುಭೂತಿಯಿಲ್ಲ. ಏಕೆಂದರೆ ಅವನು ಒಬ್ಬ ಕ್ರಿಕೆಟಿಗ. ಏನು ಒಂದು ಹಾಸ್ಯಾಸ್ಪದ ಸಂಗತಿ.
ವಾಸ್ತವಿಕವಾಗಿ ಯೋಚಿಸಿ. ಮತ್ತು ಬೇಗ ಗುಣಮುಖರಾಗಿ ಎಂದು ಮತ್ತೊಬ್ಬರು ಲೇವಡಿ ಮಾಡಿದ್ದಾರೆ.
ಅತಿ ಹೆಚ್ಚು ತೆರಿಗೆ ಪಾವತಿಸುವ ವ್ಯಕ್ತಿ
2025-26ನೇ ಹಣಕಾಸು ವರ್ಷಕ್ಕೆ ಉತ್ತರಾಖಂಡದಿಂದ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿ ಎಂಬುದು ಬಹಿರಂಗಗೊಂಡಿದ್ದು, ಅವರು ಬರೋಬ್ಬರಿ 23.84 ಕೋಟಿ ರೂಪಾಯಿಗಳನ್ನು ತೆರಿಗೆಯಾಗಿ ಪಾವತಿಸಿದ್ದಾರೆ. ಕಳೆದ ವರ್ಷವೂ ಅವರು 10.5 ಕೋಟಿ ರೂ. ತೆರಿಗೆ ಪಾವತಿಸಿದ್ದರು, (ಏಜೆನ್ಸೀಸ್).