ಎದುರಾಳಿ ಮೇಲಿನ ಕೋಪಕ್ಕೆ ಕಾಲಿನಿಂದಲೇ ಬಾಲ್ ಒದ್ದ ದೃಶ್ಯ
- ಶ್ರೀಲಂಕಾ ಕ್ರಿಕೆಟ್ ವಿರುದ್ಧದ ಸರಣಿಗೂ ಮುನ್ನ ಅಭ್ಯಾಸ ಪಂದ್ಯ
- ಪದೇ ಪದೇ ವೈಡ್ನತ್ತ ಬಾಲ್ ಎಸೆಯುತ್ತಿದ್ದ ಬೌಲರ್ ವಿರುದ್ಧ ಪಂತ್ ಸಿಟ್ಟು
- ಬ್ಯಾಟ್ ಬದಲಿಗೆ ಕಾಲಿನಿಂದಲೇ ಬಾಲ್ ಕಿಕ್ ಮಾಡಿದ ಟೀಮ್ ಇಂಡಿಯಾ ಬ್ಯಾಟರ್
Rishabh Pant: ತಮ್ಮ ವಿಭಿನ್ನ ಬ್ಯಾಟಿಂಗ್ ಶೈಲಿ ಹಾಗೂ ಮೈದಾನದಲ್ಲಿ ಆಗಾಗ್ಗೆ ಮಾಡುವ ತಮಾಷೆಗಳಿಂದಲೇ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುವ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ರಿಷಭ್ ಪಂತ್, ಈ ಬಾರಿ ಬೇರೆ ರೀತಿಯಲ್ಲೇ ನೋಡುಗರ ಗಮನ ಸೆಳೆದಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ವಿರುದ್ಧದ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದ 3ನೇ ದಿನದಾಟದಲ್ಲಿ, ಪಂತ್ ತಮ್ಮ ಬ್ಯಾಟಿಂಗ್ ಜತೆಗೆ ಫುಟ್‌ಬಾಲ್ ಸ್ಕಿಲ್ ತೋರಿಸಿರುವುದು ಸದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತು. ಬೌಲರ್ ಪದೇ ಪದೇ ವೈಡ್ ಎಸೆಯುತ್ತಿದ್ದಕ್ಕೆ ಸಿಟ್ಟಿಗೆದ್ದ ಪಂತ್, ಮತ್ತದೇ ವೈಡ್ ಬಂದ ಬಾಲ್ ಅನ್ನು ಕಾಲಿನಿಂದ ಕಿಕ್ ಹೊಡೆದಿದ್ದಾರೆ. ಇದು ಕೆಲವರಿಗೆ ಹಾಸ್ಯಸ್ಪದ ಎನಿಸಿದರೆ, ಇನ್ನೂ ಕೆಲವರಿಗೆ ಏಕಿಷ್ಟು ಸಿಟ್ಟು ಎಂದು ಪ್ರಶ್ನಿಸುವಂತೆ ಮಾಡಿದೆ.
ಶ್ರೀಲಂಕಾ ಬೌಲರ್ ಕೇಶರ ನುವಾಂತ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ ಅವರು, ಆ ಬಳಿಕ ಸ್ಪಿನ್ನರ್ ದಿಲುಮ್ ಸುದೀರ ಅವರ ಎರಡನೇ ಎಸೆತವನ್ನೂ ಗ್ಯಾಲರಿಯತ್ತ ಬಾರಿಸಿದರು. ಆದ್ರೆ, ಅದೇ ಸುದೀರ, ಪಂತ್ ರನ್ ಗಳಿಸದಂತೆ ತಡೆಯಲು ಪದೇ ಪದೇ ಲೆಗ್ ಸ್ಟಂಪ್‌ನಿಂದ ಆಚೆಗೆ ಬಾಲ್ ಹಾಕಿದ್ದಕ್ಕೆ ಕೋಪಗೊಂಡು, ಬ್ಯಾಟ್ ಬದಲಿಗೆ ಕಾಲಿನಿಂದಲೇ ಒದ್ದು ಹೊರಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).