IND vs SA  
ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡ ಸಾಧಿಸದ ದಾಖಲೆ ಬರೆದ ಹರಿಣರ ಪಡೆ! ಗೌತಿ ಪಾಲಿಗೆ ಕೆಟ್ಟ​ ರೆಕಾರ್ಡ್​ | IND vs SA

ಪ್ರಮುಖ ಮುಖ್ಯಾಂಶಗಳು

  • ಹರಿಣರ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್ ಗಳಿಸಿತು
  • ವಿಶ್ವ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನು ಹರಿಣರ ಪಡೆ ಸಾಧಿಸಲಿದೆ
  • ಸೋತರೆ ಗಂಭೀರ್ ಪಾಲಿಗೆ ಕೆಟ್ಟ ರೆಕಾರ್ಡ್​
IND vs SA: ಪ್ರಸಕ್ತ, ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತನ್ನ ಹಿಡಿತವನ್ನು ಪ್ರಬಲವಾಗಿಸಿದೆ. ಹರಿಣರ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್ ಗಳಿಸಿತು. ಅದಾದ ಬಳಿಕ, ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು 201 ರನ್‌ಗೆ ಆಲೌಟ್ ಮಾಡಿತು. ಇದು ದಕ್ಷಿಣ ಆಫ್ರಿಕಾಕ್ಕೆ 288 ರನ್‌ಗಳ ಮುನ್ನಡೆ ನೀಡಿತು. ಇನ್ನೂ ಎರಡು ದಿನಗಳ ಆಟ ಬಾಕಿ ಇರುವಾಗ, ಭಾರತ ಈ ಪಂದ್ಯವನ್ನು ಗೆಲ್ಲುವುದು ಬಹುತೇಕ ಅಸಾಧ್ಯವಾಗಿದೆ.
ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆದ್ದರೆ, ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ತಂಡವು ಸಾಧಿಸಲಾಗದ ದಾಖಲೆಯನ್ನು ಸಾಧಿಸಲಿದೆ. ಟೀಮ್ ಇಂಡಿಯಾವನ್ನು ಎರಡು ಬಾರಿ ತವರಿನಲ್ಲೇ ವೈಟ್‌ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಹಾಗೂ ಇತಿಹಾಸವನ್ನು ಹರಿಣರ ಪಡೆ ಸೃಷ್ಟಿಸುತ್ತದೆ. ಇದುವರೆಗೆ ಟೆಸ್ಟ್‌ನಲ್ಲಿ, ಎದುರಾಳಿ ತಂಡಗಳು ಟೀಮ್ ಇಂಡಿಯಾವನ್ನು ತವರಿನಲ್ಲಿ ಕೇವಲ ಎರಡು ಬಾರಿ ಮಾತ್ರ ವೈಟ್‌ವಾಶ್ ಮಾಡಿವೆ.
2000ದಲ್ಲಿ, ಹ್ಯಾನ್ಸಿ ಕ್ರಾಹ್ನ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಕಳೆದ ವರ್ಷ, ಟಾಪ್ ಲ್ಯಾಥಮ್ ಕ್ಯಾಪ್ಟನ್ಸಿಯ ನ್ಯೂಜಿಲೆಂಡ್ ತಂಡ ಭಾರತವನ್ನು 3-0 ಅಂತರದಿಂದ ಮಣಿಸಿತು. 1980ರಲ್ಲಿ, ಬಿಸಿಸಿಐ 50 ವರ್ಷಗಳನ್ನು ಪೂರೈಸಿದಾಗ, ಮುಂಬೈ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಕೇವಲ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿತು. ಆ ಪಂದ್ಯವನ್ನು ಭಾರತ 10 ವಿಕೆಟ್‌ಗಳಿಂದ ಸೋತಿತು. ಆದರೆ, ಒಂದೇ ಪಂದ್ಯ ಆಡುವುದನ್ನು ಸರಣಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದು ಪರಿಗಣನೆಗೆ ಬರಲಿಲ್ಲ.

ಗಂಭೀರ್ ಪಾಲಿಗೆ ಕೆಟ್ಟ ರೆಕಾರ್ಡ್​

ಪ್ರಸ್ತುತ ಗುವಾಹಟಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಡ್ರಾ ಕಾಣದೆ ಸೋತರೆ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಪಾಲಿಗೆ ಇದು ಕೆಟ್ಟ ದಾಖಲೆಯಾಗಿ ಉಳಿಯಲಿದೆ. ಎರಡು ವಿದೇಶಿ ತಂಡಗಳ ಎದುರು ತವರಿನಲ್ಲಿ ಎರಡು ವೈಟ್‌ವಾಶ್‌ಗಳನ್ನು ಎದುರಿಸಿದ ಮೊದಲ ಸೋಲಿನ ದಾಖಲೆ ಕೋಚ್​ ಗಂಭೀರ್​ ಹೆಸರಿಗೆ ಸೇರಲಿದೆ. ಕಳೆದ ವರ್ಷ (2024ರಲ್ಲಿ) ಕಿವೀಸ್ ಭಾರತವನ್ನು ವೈಟ್‌ವಾಶ್ ಮಾಡಿದಾಗ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಕೂಡ ಆಗಿದ್ದರು. ಈಗ ದಕ್ಷಿಣ ಆಫ್ರಿಕಾ ಮಣಿಸಿದರೆ, ತವರಿನಲ್ಲೇ ಎರಡನೇ ಕ್ಲೀನ್ ಸ್ವೀಪ್​ ಇದಾಗಲಿದೆ,(ಏಜೆನ್ಸೀಸ್).