RCB vs MI: ರಾಯ್ಪುರದಲ್ಲಿ ನಡೆಯುತ್ತಿರುವ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ 19ನೇ ಆವೃತ್ತಿಯ ಐಪಿಎಲ್ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ, ಬ್ಯಾಟಿಂಗ್ ಮಾಡಿದ ಮುಂಬೈ ಪಡೆಗೆ ಆರಂಭಿಕರಾದ ರೋಹಿತ್ ಶರ್ಮಾ (22 ರನ್) ಮತ್ತು ರಿಕಲ್ಟನ್ (2) ಉತ್ತಮ ಓಪನಿಂಗ್ ನೀಡಲು ವಿಫಲರಾದರು. ಇನ್ನು ಶೂನ್ಯಕ್ಕೆ ಔಟ್ ಆದ ಸೂರ್ಯಕುಮಾರ್ ಯಾದವ್ (0) ಎಂದಿನಂತೆ ಕಳಪೆ ಪ್ರದರ್ಶನ ತೋರಿದರು. ಅವರ ಬಳಿಕ ಕ್ರೀಸ್ಗೆ ಬಂದ ನಮನ್ ಧಿರ್ (47 ರನ್) ತಿಲಕ್ ವರ್ಮಾ (ಅಜೇಯ 57 ರನ್) ಅವರ ಅದ್ಭುತ ಇನ್ನಿಂಗ್ಸ್ ಸಹಾಯದಿಂದ ಎಂಐ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಇನ್ನು ಆರ್ಸಿಬಿ ಪರ ಅದ್ಭುತ ಬೌಲಿಂಗ್ ಮಾಡಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 4 ವಿಕೆಟ್ಗಳನ್ನು ಕಬಳಿಸಿದರೆ, ರಾಸಿಕ್ ಸಲಾಮ್, ಜೋಶ್ ಹೇಜಲ್ವುಡ್ ಮತ್ತು ರೊಮಾರಿಯಾ ಶೆಫರ್ಡ್ ತಲಾ 1 ವಿಕೆಟ್ ಪಡೆದರು. ಅತಿ ದೊಡ್ಡ ಸ್ಟೇಡಿಯಂನಲ್ಲಿ ಎಂಐ ನೀಡಿರುವ 167 ರನ್ಗಳ ಗುರಿಯನ್ನು ರಜತ್ ಪಡೆ ಸುಲಭವಾಗಿ ಚೇಸ್ ಮಾಡಲಿದೆಯಾ ಅಥವಾ ವಿಕೆಟ್ಗಳನ್ನು ಕಳೆದುಕೊಂಡು ಮತ್ತೊಂದು ಸೋಲು ಅನುಭವಿಸಲಿದ್ಯಾ? ಎಂಬುದನ್ನು ಸೆಕೆಂಡ್ ಇನ್ನಿಂಗ್ಸ್ನಲ್ಲಿ ಕಾದು ತಿಳಿಯಬೇಕಿದೆ.