RCB vs MI ಪಂದ್ಯ 
ಕ್ರಿಕೆಟ್

ಭುವಿ 6 ಮ್ಯಾಜಿಕ್​! ಕಡೆಗೂ ಫಲಿಸಿತು ಕೃನಾಲ್​ ಏಕಾಂಗಿ ಹೋರಾಟ; ಸೂರ್ಯ ಪಡೆ ಲೀಗ್​ನಿಂದ ಔಟ್​ | RCB vs MI

RCB vs MI: ರಾಯ್​ಪುರದಲ್ಲಿ ನಡೆದ ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ರಜತ್​ ಪಾಟೀದಾರ್​​ ಪಡೆ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು.
ಟಾಸ್​ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ, ಬ್ಯಾಟಿಂಗ್​ ಮಾಡಿದ ಮುಂಬೈ ಪಡೆಗೆ ಆರಂಭಿಕರಾದ ರೋಹಿತ್ ಶರ್ಮಾ (22 ರನ್​) ಮತ್ತು ರಿಕಲ್ಟನ್​ (2) ಉತ್ತಮ ಓಪನಿಂಗ್​ ನೀಡಲು ವಿಫಲರಾದರು. ಇನ್ನು ಶೂನ್ಯಕ್ಕೆ ಔಟ್​ ಆದ ಸೂರ್ಯಕುಮಾರ್​ ಯಾದವ್ (0) ಎಂದಿನಂತೆ ಕಳಪೆ ಪ್ರದರ್ಶನ ತೋರಿದರು. ಅವರ ಬಳಿಕ ಕ್ರೀಸ್​ಗೆ ಬಂದ ನಮನ್​ ಧಿರ್​ (47 ರನ್​) ತಿಲಕ್​ ವರ್ಮಾ (ಅಜೇಯ 57 ರನ್​) ಅವರ ಅದ್ಭುತ ಇನ್ನಿಂಗ್ಸ್ ಸಹಾಯದಿಂದ ಎಂಐ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 166 ರನ್​ ಕಲೆಹಾಕಲಷ್ಟೇ ಶಕ್ತವಾಯಿತು.
ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಆರ್​ಸಿಬಿಗೆ​ ವಿರಾಟ್​ ಕೊಹ್ಲಿ ಅವರ ಡಕ್​ಔಡ್​ ದೊಡ್ಡ ಆಘಾತ ನೀಡಿತು. ಇದು ತಂಡದ ಗೆಲುವಿನ ಭರವಸೆಯನ್ನು ಕೊಂಚ ದೂರ ತಳ್ಳಿತು. ಅವರ ನಂತರದಲ್ಲಿ ಆಡಿದ ಜಾಕೆಬ್​ ಬೆಥಲ್ (27)​, ದೇವದತ್ತ ಪಡಿಕ್ಕಲ್ (12), ರಜತ್​ ಪಾಟೀದಾರ್ (8)​, ಜಿತೇಶ್​ ಶರ್ಮ (18), ಟಿಮ್ ಡೇವಿಡ್ (0)​ ಅವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಈ ಮಧ್ಯೆ, ಕ್ರೀಸ್​ಗೆ ಅಂಟಿ ನಿಂತ ಕೃನಾಲ್​ ಪಾಂಡ್ಯ 73 ರನ್​ಗಳನ್ನು ಬಾರಿಸುವ ಮೂಲಕ ನಡೆಸಿದ ಏಕಾಂಗಿ ಹೋರಾಟ ಕಡೆಗೂ ಫಲಿಸಿತು. ಆರ್​ಸಿಬಿ ಎದುರು ಸೋತ ಬೆನ್ನಲ್ಲೇ ಮುಂಬೈ ಪ್ಲೇಆಫ್​ ರೇಸ್​ನಿಂದ ಮಾತ್ರವಲ್ಲ, ಲೀಗ್​ನಿಂದಲೇ ಹೊರಬಿದ್ದಿದೆ. ಇದು ಎಂಐ ಅಭಿಮಾನಿಗಳನ್ನು ಭಾರೀ ನಿರಾಶೆಗೊಳಿಸಿದೆ.