RCB vs LSG: ಇಂದು (ಮೇ.07) ಏಕಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಮಳೆಯಿಂದ 19ಕ್ಕೆ ಓವರ್ಗೆ ಪಂದ್ಯ
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್ಸಿಬಿ ಬೌಲರ್ಗಳು ಕಮಾಲ್ ಮಾಡುವಲ್ಲಿ ಸಂಪೂರ್ಣ ಎಡವಿದರು. ಮಿಚೆಲ್ ಮಾರ್ಶ್ ಅವರ (56 ಎಸೆತಗಳಲ್ಲಿ 111 ರನ್, 9 ಬೌಂಡರಿ, 9 ಸಿಕ್ಸರ್) ಸ್ಫೋಟಕ ಶತಕದಾಟ ತಂಡದ ಮೊತ್ತವನ್ನು 150ರ ಗಡಿದಾಟಿಸಲು ದೊಡ್ಡ ಕೊಡುಗೆ ನೀಡಿತು. ಉಳಿದಂತೆ, ಅರ್ಶಿನ್ ಕುಲಕರ್ಣಿ (24 ಎಸೆತ, 17 ರನ್), ರಿಷಭ್ ಪಂತ್ (32 ರನ್), ನಿಕೋಲಸ್ ಪೂರನ್ (38 ರನ್) ಅವರ ಸಹಾಯದಿಂದ ತಂಡವು 3 ವಿಕೆಟ್ ನಷ್ಟಕ್ಕೆ 209 ರನ್ಗಳನ್ನು ಕಲೆಹಾಕಿತು. ಇದರಲ್ಲಿ ಮಳೆ ಬಂದ ಕಾರಣ, DLS ನಿಯಮ ಬಳಸಿ 213 ರನ್ಗಳನ್ನು ಟಾರ್ಗೆಟ್ ಆಗಿ ನೀಡಲಾಗಿದೆ.
ಕ್ಯಾಚ್ಗಳು ಡ್ರಾಪ್
ಇನ್ನು ಬೌಲಿಂಗ್ ವಿಭಾಗದಲ್ಲಿ ಆರ್ಸಿಬಿ ಪರ ಜೋಶ್ ಹೇಜಲ್ವುಡ್ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದಿದ್ದು ಬಿಟ್ಟರೆ ಭುವನೇಶ್ವರ್ ಕುಮಾರ್, ರೊಮಾರಿಯೊ ಶೆಫರ್ಡ್, ಸುಯಾಶ್ ಶರ್ಮರಂತಹ ಬೌಲರ್ಗಳಿಂದ ಕಮಾಲ್ ಪ್ರದರ್ಶನ ಬರಲಿಲ್ಲ. ಇದರೊಟ್ಟಿಗೆ ಹಲವು ಕ್ಯಾಚ್ಗಳನ್ನು ಕೈಬಿಟ್ಟಿದ್ದು, ಎಲ್ಎಸ್ಜಿ ಬ್ಯಾಟರ್ಗಳ ರನ್ ಮಳೆಗೆ ಕಾರಣವಾಯಿತು.