- ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ
- ಆರ್ಸಿಬಿ ನೀಡಿದ 175 ರನ್ ರಜತ್ ಪಡೆ
- ಕೊನೆ ಓವರ್ನ ಮೂರು ಬಾಲ್ಗಳಲ್ಲಿ ರೋಚಕ ಗೆಲುವು
RCB vs DC: ಇಂದು (ಏ.18) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಡಿಸಿ ರೋಚಕ ಗೆಲುವು ಸಾಧಿಸಿತು.
ಟಾಸ್ ಗೆದ್ದ ಅಕ್ಷರ್ ಪಟೇಲ್, ಆರ್ಸಿಬಿಗೆ ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡ ರಜತ್ ಪಾಟಿದಾರ್ ಪಡೆ 175 ರನ್ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಫಿಲ್ ಸಾಲ್ಟ್ (63 ರನ್, 38 ಎಸೆತ) ಉತ್ತಮ ಓಪನಿಂಗ್ ಪ್ರದರ್ಶನ ನೀಡಿದರು. ಆದರೆ, ವಿರಾಟ್ ಕೊಹ್ಲಿ ಮಾತ್ರ ಕಿಕ್ಕಿರಿದ್ದು ಸೇರಿದ್ದ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದರು. ಅವರ ಬಳಿಕ ಯಾವೊಬ್ಬ ಬ್ಯಾಟರ್ನಿಂದಲೂ ಉತ್ತಮ ಇನ್ನಿಂಗ್ಸ್ ಬರಲಿಲ್ಲ.
ಆರ್ಸಿಬಿ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಪಡೆಗೆ ಆರಂಭಿಕ ಹಂತದಲ್ಲೇ ಪಥಮ್ ನಿಸ್ಸಂಕಾ (1 ರನ್) ಅವರ ವಿಕೆಟ್ ಆಘಾತ ನೀಡಿದರೂ ಕನ್ನಡಿಗ ಕೆ.ಎಲ್. ರಾಹುಲ್ (57 ರನ್, 34 ಎಸೆತ) ಅವರಿಂದ ಬಂದ ಉತ್ತಮ ಇನ್ನಿಂಗ್ಸ್ ಗೆಲುವಿನ ಭರವಸೆಯನ್ನು ನೀಡಿತು. ಪವರ್ಪ್ಲೇಯಲ್ಲಿ ಹೆಚ್ಚುವರಿ ರನ್ಗಳನ್ನು ಕಲೆಹಾಕದಿದ್ದರೂ ನಂತರದಲ್ಲಿ ಸ್ಟಬ್ಸ್ (ಅಜೇಯ 60 ರನ್ 47 ಎಸೆತ), ಕ್ಯಾಪ್ಟನ್ ಅಕ್ಷರ್ ಪಟೇಲ್ (26 ರನ್, 19 ಎಸೆತ) ಮತ್ತು ಸಿಕ್ಸರ್ಗಳನ್ನು ಬಾರಿಸಿದ ಡೇವಿಡ್ ಮಿಲ್ಲರ್ ಅವರ ಅಮೋಘ ಪ್ರದರ್ಶನ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.