ಆರ್ಸಿಬಿ ತಂಡದ ಆಟಗಾರ್ತಿಯರು
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪೋಸ್ಟ್
- ವೈರಲ್ ಪೋಸ್ಟ್‌ಗಳು ಹೇಳುತ್ತಿವೆ ಈ ಬಾರಿ ಆರ್ಸಿಬಿ ತಂಡದಲ್ಲಿದ್ದಾರೆ ಸುಂದರಿಯರ ದಂಡು
- ಟ್ರೋಫಿ ಮೇಲೆ ಗಮನ ಹರಿಸುವ ಬದಲು ಸುಂದರ ಹುಡುಗಿಯರ ಮೇಲೆ ಗಮನ ಹರಿಸುತ್ತಿದೆಯಂತೆ ಆರ್ಸಿಬಿ
RCB : ಮಹಿಳಾ ಪ್ರೀಮಿಯರ್ ಲೀಗ್-2026ರ ಆವೃತ್ತಿಗಾಗಿ ಗುರುವಾರ (ನ.27) ಮೆಗಾ ಹರಾಜು ನಡೆಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಈ ಹರಾಜಿನಲ್ಲಿ ಒಟ್ಟು 277 ಕ್ರಿಕೆಟಿಗರು ಭಾಗವಹಿಸಿದರು. ಆದರೆ, 73 ಆಟಗಾರರನ್ನು ಖರೀದಿಸಲು ಮಾತ್ರ ಅವಕಾಶವಿತ್ತು. ಈ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ದಾಖಲೆ ಟೀಮ್ ಇಂಡಿಯಾದ ದೀಪ್ತಿ ಶರ್ಮಾರ ಪಾಲಾಯಿತು. ದೀಪ್ತಿ ಅವರು ಬರೋಬ್ಬರಿ 3.2 ಕೋಟಿ ರೂ.ಗೆ ಯುಪಿ ವಾರಿಯರ್ ತಂಡದ ಪಾಲಾದರು.
ಹರಾಜಿನ ನಡುವೆ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಈ ಬಾರಿ ಆರ್ಸಿಬಿ ತಂಡದಲ್ಲಿ ಸುಂದರಿಯರ ದಂಡೇ ಇದೆ ಎಂದು ವೈರಲ್ ಪೋಸ್ಟ್‌ಗಳು ಹೇಳುತ್ತಿವೆ.
ಮಹಿಳಾ ಪ್ರೀಮಿಯರ್ ಲೀಗ್-2026 ಮೆಗಾ ಟೂರ್ನಮೆಂಟ್‌ನಲ್ಲಿ ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಸ್ಮೃತಿ ಮಂಧಾನ ಆರ್ಸಿಬಿ ತಂಡದ ನಾಯಕಿಯಾಗಲಿದ್ದಾರೆ. ಅವರೊಂದಿಗೆ ಎಲಿಸ್ಸಾ ಪೆರ್ರಿ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್, ನಾಡಿನ್ ಡಿ ಕ್ಲರ್ಕ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್, ಅರುಂಧತಿ ರೆಡ್ಡಿ ಮತ್ತು ಲುರೆನ್ ಬೆಲ್ ಅವರಂತಹ ಪ್ರಮುಖ ಆಟಗಾರ್ತಿಯರು ಇದ್ದಾರೆ. ಆದಾಗ್ಯೂ, ಈ ತಂಡದಲ್ಲಿ ಲುರೆನ್ ಬೆಲ್, ಪೆರ್ರಿ ಮತ್ತು ಸ್ಮೃತಿ ಮಂಧಾನ ಅವರಂತಹ ಸುಂದರ ಆಟಗಾರ್ತಿಯರು ಇದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹರಿಬಿಡಲಾಗುತ್ತಿದೆ.
ಬೆಂಗಳೂರು ತಂಡದ ಆಡಳಿತ ಮಂಡಳಿಯು ಟ್ರೋಫಿ ಮೇಲೆ ಗಮನ ಹರಿಸುವ ಬದಲು ಸುಂದರ ಹುಡುಗಿಯರ ಮೇಲೆ ಗಮನ ಹರಿಸುತ್ತಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ನಮಗೆ ಈ ಬಾರಿ ಟ್ರೋಫಿ ಸಿಗದಿದ್ದರೂ ಪರವಾಗಿಲ್ಲ, ನಮ್ಮ ತಂಡದಲ್ಲಿ ಹೀರೋಯಿನ್‌ಗಳಂತಹ ಕ್ರಿಕೆಟಿಗರನ್ನು ಹೊಂದಿರುವುದಾಗಿ ಸಂತೋಷಪಡುತ್ತಿದ್ದಾರೆ.
ಡಬ್ಲ್ಯುಪಿಎಲ್ 2026 ಗಾಗಿ RCBಯ ಪೂರ್ಣ ತಂಡ
ಸ್ಮೃತಿ ಮಂಧಾನ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಎಲಿಸ್ಸಾ ಪೆರ್ರಿ, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪ್ರೇಮಾ ರಾವತ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್ ಹಾಗೂ ದಯಾಳನ್ ಹೇಮಲತಾ.
ಆಡುವ ಹನ್ನೊಂದರ ಬಳಗ (ಅಂದಾಜು)
ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ಎಲಿಸ್ಸಾ ಪೆರ್ರಿ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್ (ವಿಕೆಟ್ ಕೀಪರ್), ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್, ಅರುಂಧತಿ ರೆಡ್ಡಿ ಹಾಗೂ ಲಾರೆನ್ ಬೆಲ್, (ಏಜೆನ್ಸೀಸ್).