IPL 2026 ವಿರಾಟ್ ಕೊಹ್ಲಿ (ಚಿತ್ರ X)
ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಹದಿನೆಂಟು ಸುದೀರ್ಘ ವರ್ಷಗಳು ಕಳೆದಿವೆ. ವಯಸ್ಸು ಹೆಚ್ಚಾದಂತೆ (IPL 2026) ಕ್ರೀಡಾಪಟುಗಳ ವೇಗ ಮತ್ತು ಹಸಿವು ಕಡಿಮೆಯಾಗುವುದು ಸಹಜ. ಆದರೆ, ವಿರಾಟ್ ಕೊಹ್ಲಿ ವಿಷಯದಲ್ಲಿ ಇದು ಸುಳ್ಳಾಗಿದೆ.
ಕಳೆದ 18 ಐಪಿಎಲ್ ಆವೃತ್ತಿಗಳಲ್ಲಿ ಕೊಹ್ಲಿಯವರ "ಉತ್ಸಾಹ ಮತ್ತು ರನ್ ಹಸಿವಿನ" ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ, ಬದಲಾಗಿ ಅವರು ಇಂದಿಗೂ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಶ್ಲಾಘಿಸಿದ್ದಾರೆ.
ನಾನು ಕೊಹ್ಲಿ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವುದನ್ನು ತುಂಬಾ ಹತ್ತಿರದಿಂದ ಗಮನಿಸಿದ್ದೇನೆ. ಅವರು ಆಟದ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿದ್ದಾರೆ. ಆದಾಗ್ಯೂ, ಕಳೆದ ದಿನ ಅವರು ಮೈದಾನದಲ್ಲಿ ಶಟಲ್ ಆಡುವುದನ್ನು ನೋಡಿದ್ದೇನೆ. ಅತ್ಯಂತ ಹಗುರವಾಗಿ ಮತ್ತು ಫಿಟ್ ಆಗಿ ಕಾಣುತ್ತಾರೆ. ಅಷ್ಟೇ ಅಲ್ಲದೆ, ಅವರು ತುಂಬಾ ತೆಳ್ಳಗಿದ್ದಾರೆ. ಹಾಗೆಯೇ ಉತ್ತಮ ರನ್ಗಳಿಸಲು ಮೊದಲಿನಂತೆಯೇ ಹಸಿದಿದ್ದಾರೆ ಎಂದು ಆಂಡಿ ಬಣ್ಣಿಸಿದ್ದಾರೆ.
ಕೊಹ್ಲಿ ಅವರ ಯಶಸ್ಸಿನ ಹಿಂದೆ ಅವರ ಮಾನಸಿಕ ದೃಢತೆ ಪ್ರಮುಖ ಪಾತ್ರ ವಹಿಸಿದೆ. ಅವರು ಯಾವಾಗಲೂ ಹಸಿದಿರುತ್ತಾರೆ ಮತ್ತು ದೃಢ ನಿಶ್ಚಯವನ್ನು ಹೊಂದಿರುತ್ತಾರೆ. ಪ್ರಸ್ತುತ ಅವರ ಇರುವ ಮಾನಸಿಕ ಮತ್ತು ಭಾವನಾತ್ಮಕ ಸ್ಥಳ ಎಂದು ನಾನು ಭಾವಿಸುತ್ತೇನೆ . ಅವರು ಒಬ್ಬ ವ್ಯಕ್ತಿಯಾಗಿ ತಮ್ಮೊಂದಿಗೆ ತುಂಬಾ ಆರಾಮದಾಯಕವಾಗಿದ್ದಾರೆ. ಜೊತೆಗೆ ವೃತ್ತಿಪರ ಕ್ರೀಡಾಪಟುವಾಗಿ ತಮ್ಮನ್ನು ತಾವು ಮುನ್ನೆಡೆಸಿಕೊಳ್ಳಲು ಇಂದಿಗೂ ಅಷ್ಟೇ ಹಸಿದಿದ್ದಾರೆ ಎಂದಿದ್ದಾರೆ.
ನಾನು ಆಟಗಾರನಾಗಿದ್ದಾಗ, ಸಚಿನ್ ತೆಂಡೂಲ್ಕರ್ ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡುವುದನ್ನು ನೋಡುವುದನ್ನು ತುಂಬಾನೇ ಆನಂದಿಸುತ್ತಿದ್ದೆ. ಈಗ ವಿರಾಟ್ ಕೊಹ್ಲಿ ವಿಷಯದಲ್ಲೂ ಅದೇ ಆಗುತ್ತಿದೆ. ನಾನು ಇಲ್ಲಿ ಕೋಚ್ ಆಗಿದ್ದರೂ ಸಹ, ನಮ್ಮ ಕಲೆಯ ಮಾಸ್ಟರ್ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದನ್ನು ನೋಡುವುದು ನನಗೆ ನಿಜವಾಗಿಯೂ ಸಂತೋಷ ನೀಡುತ್ತದೆ ಎಂದರು.
ದೀರ್ಘ ವಿರಾಮದ ನಂತರ ಮೈದಾನಕ್ಕೆ
ಕುತೂಹಲಕಾರಿ ಸಂಗತಿಯೆಂದರೆ, ವಿರಾಟ್ ಕೊಹ್ಲಿ ಅವರು ಕಳೆದ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯ ನಂತರ ಆಡುತ್ತಿರುವ ಮೊದಲ ಪಂದ್ಯಾವಳಿ ಇದಾಗಿದೆ. ಈ ದೀರ್ಘ ವಿರಾಮದ ನಂತರ ಅವರು ಮೈದಾನಕ್ಕೆ ಮರುಳುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗೆ ಕಾರಣವಾಗಿದೆ (ಏಜೆನ್ಸೀಸ್).