RCB Celebration (ಚಿತ್ರ X)
- ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಧೂಳೀಪಟ ಮಾಡಿದ ಆರ್‌ಸಿಬಿ
- ಟ್ರೋಫಿ ತಲೆಮೇಲೆ ಹೊತ್ತು ಭಾಂಗ್ರಾ ನೃತ್ಯ ಮಾಡಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ
- ಕೃನಾಲ್ ನೃತ್ಯಕ್ಕೆ ಸಾಥ್ ನೀಡಿದ ಕೊಹ್ಲಿ, ಇತಿಹಾಸದಲ್ಲೇ ಅತ್ಯಂತ ಮರೆಯಲಾಗದ ಕ್ಷಣ ಎಂದ ನೆಟ್ಟಿಗರು
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜುರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಪಡೆದ ತಂಡವಾಗಿ ಹೊರಹೊಮ್ಮಿದೆ. ಆದಾಗ್ಯೂ, ಈ ವಿಜಯದ ನಂತರ ತಂಡದ ಹಿರಿಯ ನಾಯಕ ಕಿಂಗ್ ವಿರಾಟ್ ಕೊಹ್ಲಿ ಮತ್ತು ಆಲ್‌ರೌಂಡರ್ ಕೃನಾಲ್ ಪಾಂಡ್ಯ ಹೋಟೆಲ್ ಆವರಣದಲ್ಲಿ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿಡಿಯೋದಲ್ಲೇನಿದೆ?
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಂಚಿಕೊಂಡಿರುವ ಈ ವೀಡಿಯೊದಲ್ಲಿನ ಕೃನಾಲ್ ಪಾಂಡ್ಯ ಟ್ರೋಫಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಟೆಲ್ ಲಾಬಿಯಲ್ಲಿದ್ದ ಢೋಲ್-ನಗಾರಿಗಳ ತಾಳಕ್ಕೆ ತಕ್ಕಂತೆ ಭಾಂಗ್ರಾ ನೃತ್ಯ ಮಾಡುವುದನ್ನು ತೋರಿಸಲಾಗಿದೆ. ಆದಾಗ್ಯೂ, ಈ ವೇಳೆ ಕೊಹ್ಲಿ ಕೂಡಾ ಕೃನಾಲ್ ಜೊತೆ ಹೆಜ್ಜೆ ಹಾಕಲು ಪ್ರಾರಂಭಿಸಿದ್ದು, ಅವರಿಬ್ಬರ ಜುಗಲ್ನಬಂದಿ ಆರ್‌ಸಿಬಿ ಇತಿಹಾಸದಲ್ಲೇ ಅತ್ಯಂತ ಮರೆಯಲಾಗದ ಸುಂದರ ಕ್ಷಣವಾಗಿ ಹೊರಹೊಮ್ಮಿತು.
ಸಂಭ್ರಮದ ಕ್ಷಣದಲ್ಲಿ ವಿರಾಟ್ ಹೇಳಿದ್ದೇನು?
ಇದು ನಿಜಕ್ಕೂ ನಮಗೆ ಒಂದು ಕನಸಿನ ದಿನ. ನಾನು ಪಂದ್ಯ ಮುಗಿದ ತಕ್ಷಣವೇ ಹೇಳಿದಂತೆ, ಇಂದು ನಾವು ಮೈದಾನಕ್ಕೆ ಇಳಿಯುವಾಗ ಯಾವುದೇ ಒತ್ತಡವಿಲ್ಲದೆ ನಿಜವಾಗಿಯೂ ಅತ್ಯಂತ ನಿರಾಳವಾಗಿದ್ದೆವು. ನಮ್ಮ ಆಟವನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ಯಬೇಕು ಮತ್ತು ನಮ್ಮಲ್ಲಿ ಯಾವ ರೀತಿಯ ಬಲಿಷ್ಠ ತಂಡವಿದೆ ಎಂಬುದರ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿತ್ತು. ಇಂತಹ ನಂಬಿಕೆಯೇ ಮೈದಾನದಲ್ಲಿ ಎದುರಾಗುವ ಯಾವುದೇ ರೀತಿಯ ಕಠಿಣ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಕೊಹ್ಲಿ ಪಂದ್ಯದ ಪ್ರಸ್ತುತಿ ಸಮಯದಲ್ಲಿ ಹೇಳಿದರು.
ಆರ್‌ಸಿಬಿಗೆ ಮತ್ತೊಂದು ಮೈಲಿಗಲ್ಲು!
ಐಪಿಎಲ್ ಇತಿಹಾಸದಲ್ಲಿ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೂರನೇ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಚೆನ್ನೈ ಸೂಪರ್ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಜೊತೆಗೆ ಗಣ್ಯರ ಪಟ್ಟಿಗೆ ಸೇರಿತು. ಆದಾಗ್ಯೂ, ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಗುಜರಾತ್ ಟೈಟಾನ್ಸ್ ಅನ್ನು 155/8ಕ್ಕೆ ಸೀಮಿತಗೊಳಿಸಿತು.
156 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ಯಾವುದೇ ಹಂತದಲ್ಲೂ ಪೆವಿಲಿಯನ್ ಒತ್ತಡಕ್ಕೆ ಸಿಲುಕಲಿಲ್ಲ. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಬೆಂಗಳೂರು ಪಡೆ, ಇನ್ನು ಎರಡು ಓವರ್‌ಗಳು ಬಾಕಿ ಇರುವಂತೆಯೇ 5 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿ ವಿಜಯೋತ್ಸವ ಆಚರಿಸಿತು (ಏಜೆನ್ಸೀಸ್).