ಆರ್​. ಅಶ್ವಿನ್​  
ಕ್ರಿಕೆಟ್

ಆರ್‌ಸಿಬಿಯೇ ಆ ಪಂದ್ಯವನ್ನು ಗೆಲ್ಲಬೇಕೆಂದು ನಾನು ಬಯಸಿದ್ದೆ! ಕಾರಣ... ಆರ್​. ಅಶ್ವಿನ್​ ಅಚ್ಚರಿ ಹೇಳಿಕೆ

Ravichandran Ashwin: ಇಂಡಿಯನ್​ ಪ್ರೀಮಿಯರ್​ ಲೀಗ್​ (IPL ) ನಲ್ಲಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯಲ್ಲಿ ಅತ್ಯಂತ ಕೆಟ್ಟ ಕಳಪೆ ಪ್ರದರ್ಶನವನ್ನು ತೋರಿದೆ. ಈವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಮೂರರಲ್ಲೂ ಸೋಲುಂಡಿರುವ ಸಿಎಸ್​ಕೆ, ಉತ್ತಮ ಆಟಗಾರರನ್ನು ತನ್ನ ತಂಡಕ್ಕೆ ಖರೀದಿ ಮಾಡಿದ್ದೇ ಆದರೂ ಗೆಲುವಿನ ಲಯಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಇದನ್ನೇ ಟೀಕಿಸಿರುವ ಮಾಜಿ ಸಿಎಸ್​ಕೆ ಆಟಗಾರ ಆರ್​. ಆಶ್ವಿನ್​, ಚೆನ್ನೈ ಪಡೆ ವಿರುದ್ಧವೇ ಅಚ್ಚರಿ ಹೇಳಿಕೆ ನೀಡಿದ್ದಾರೆ.
ತಮ್ಮ ಯೂಟ್ಯೂಬ್ ಶೋ 'ಆ್ಯಶ್ ಕಿ ಬಾತ್'ನಲ್ಲಿ ಮಾತನಾಡಿದ ಅವರು, ಫ್ರಾಂಚೈಸಿಯು ತನ್ನ ಭವಿಷ್ಯದ ಬಗ್ಗೆ ಗೊಂದಲಕ್ಕೊಳಗಾಗಬಾರದು ಎಂಬ ಕಾರಣಕ್ಕೆ ತಾವೇ ಸ್ವತಃ ಹೊರಬರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ವೈಯಕ್ತಿಕವಾಗಿ ಮತ್ತಷ್ಟು ಕಾಲ ಆಡುವ ಸಾಮರ್ಥ್ಯವಿದ್ದರೂ, ಮಾನಸಿಕವಾಗಿ ಆಟದ ಕಡೆಗೆ ಗಮನಹರಿಸಲು ಸಾಧ್ಯವಾಗದ ಕಾರಣ ನಿವೃತ್ತಿ ಎಂಬ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಗಿ ಅಶ್ವಿನ್​ ಹೇಳಿದ್ದಾರೆ. ಮತ್ತೊಂದೆಡೆ, ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ನನಗೆ ರಜತ್ ಪಾಟಿದಾರ್​ ಪಡೆಯೇ ಗೆಲ್ಲಬೇಕು ಅಂತಿತ್ತು ಎಂದಿದ್ದಾರೆ.
"ನನಗೆ ನಿರೀಕ್ಷೆಗಳಿದ್ದವು. ನಾನು ಆರ್​ಸಿಬಿ ಗೆಲ್ಲಬೇಕೆಂದು ಆಯ್ಕೆ ಮಾಡಿದ್ದೆ. ಕಾರಣ, ಆ ತಂಡದಲ್ಲಿ ಹೆಚ್ಚಿನ ಸಾಮರ್ಥ್ಯವಿದೆ. ಆದರೆ, ಕಳೆದ ಪಂದ್ಯದಲ್ಲಿ ಸಿಎಸ್​ಕೆ ತೋರಿದ್ದ ಸುಧಾರಣೆಯ ಮೇಲೆ ನಾನು ನಂಬಿಕೆ ಇಟ್ಟಿದ್ದೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಡೆ ಆಡಿದ ರೀತಿ, ನಿಜಕ್ಕೂ ಉಳಿದ ತಂಡಗಳಿಗೆ ವಾರ್ನಿಂಗ್​ ನೀಡಿದಂತಿತ್ತು" ಎಂದು ಮೆಚ್ಚಿ ಮಾತನಾಡಿದರು.
"ಸಿಎಸ್​ಕೆ ಖರೀದಿಸಿರುವ ಯುವ ಆಟಗಾರರಿಗೆ ಹಚ್ಚಿನ ತರಬೇತಿ ಕೊಡಬೇಕು. ಪಂದ್ಯದ ಒತ್ತಡ ಹೇಗಿರುತ್ತೆ ಎಂಬುದನ್ನು ಅರ್ಥ ಮಾಡಿಸಬೇಕು. ಅನ್ಶುಲ್ ಕಾಂಬೋಜ್ ಮತ್ತು ಜೇಮಿ ಓವರ್ಟನ್ ತಮ್ಮ ಬೌಲಿಂಗ್​ಗಳ ಮೇಲೆ ಹೆಚ್ಚು ಗಮನ ಹರಿಸಬೇಕು" ಎಂದು ಹೇಳಿದ್ದಾರೆ,(ಏಜೆನ್ಸೀಸ್).