ಆ ಟೈಮ್ನಲ್ಲಿ ಈ ಮಿಸ್ಟೇಕ್ ಮಾಡಬಾರದಿತ್ತು...ಪಾಟೀದಾರ್ ತೆಗೆದುಕೊಂಡು ಈ ನಿರ್ಧಾರವೇ RCB ಸೋಲಿಗೆ ಕಾರಣವಾಯ್ತು! Rajat Patidar
- ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2ನೇ ಸೋಲು ಅನುಭವಿಸಿದೆ.
- ಶನಿವಾರ (ಏಪ್ರಿಲ್ 18) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ಕಹಿ ಅನುಭವಿಸಿತು
- ನಾಯಕ ರಜತ್ ಪಾಟೀದಾರ್ ತೆಗೆದುಕೊಂಡು ನಿರ್ಧಾರವೇ ಸೋಲಿಗೆ ಕಾರಣ ಎನ್ನಲಾಗುತ್ತಿದೆ
Rajat Patidar : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಎರಡನೇ ಸೋಲು ಅನುಭವಿಸಿದೆ. ಶನಿವಾರ (ಏಪ್ರಿಲ್ 18) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ಕಹಿ ಅನುಭವಿಸಿತು. ಈ ಪಂದ್ಯದಲ್ಲಿ ನಾಯಕ ರಜತ್ ಪಾಟೀದಾರ್ ತೆಗೆದುಕೊಂಡು ನಿರ್ಧಾರವೇ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 15 ಓವರ್‌ಗಳ ಅಂತ್ಯದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 130 ರನ್ ಗಳಿಸಿತು. ಈ ಸಮಯದಲ್ಲಿ ನಾಯಕ ಅಕ್ಷರ್ ಪಟೇಲ್ ಸ್ನಾಯು ಸೆಳೆತದಿಂದ ಗಾಯಗೊಂಡು ನಿವೃತ್ತರಾದರು. ಅಕ್ಷರ್ ಬದಲು ಡೇವಿಡ್ ಮಿಲ್ಲರ್ ಕ್ರೀಸ್ಗೆ ಬಂದರು.
ಇನ್ನು ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಆರ್‌ಸಿಬಿಯ ಪ್ರಮುಖ ಬೌಲರ್‌ಗಳು. ಪಂದ್ಯ ಗೆಲುವಿನ ಹಂತದಲ್ಲಿದ್ದಾಗ, ಕೊನೆಯ ಓವರ್‌ಗಳಲ್ಲಿ ಪ್ರಮುಖ ಬೌಲರ್‌ಗಳಿಂದ ಬೌಲಿಂಗ್ ಮಾಡಿಸಬೇಕು. ಆದರೆ, ಇಲ್ಲಿ ಪಾಟೀದಾರ್ ಒಂದು ಎಡವಟ್ಟು ಮಾಡಿದರು. ಮಧ್ಯದಲ್ಲೇ ಪ್ರಮುಖ ಬೌಲರ್‌ಗಳಿಂದ ಬೌಲಿಂಗ್ ಮಾಡಿಸಿ, ಅವರ ಕೋಟಾವನ್ನು ಮುಗಿಸಿದರು.
ನಿನ್ನೆಯ ಪಂದ್ಯದಲ್ಲಿ ಭುವನೇಶ್ವರ್ ಅದ್ಭುತವಾಗಿ ಬೌಲಿಂಗ್ ಮಾಡಿದರು. 4 ಓವರ್‌ಗಳಲ್ಲಿ ಕೇವಲ 26 ರನ್ ನೀಡಿ 3 ಪ್ರಮುಖ ವಿಕೆಟ್‌ಗಳನ್ನು ಪಡೆದರು. ಮತ್ತೊಂದೆಡೆ, ಹ್ಯಾಜಲ್‌ವುಡ್ ಯಾವುದೇ ವಿಕೆಟ್‌ಗಳನ್ನು ಪಡೆಯಲಿಲ್ಲ, ಆದರೆ ಅವರ ಎಕಾನಮಿ ರೇಟ್ 4 ಓವರ್‌ಗಳಿಗೆ ಉತ್ತಮವಾಗಿತ್ತು. ಪಾಟೀದಾರ್ ಅವರು ಡೆತ್ ಓವರ್‌ಗಳವರೆಗೆ ಭುವಿ ಮತ್ತು ಹ್ಯಾಜಲ್‌ವುಡ್ ಅವರನ್ನು ಉಳಿಸಿಕೊಳ್ಳಬೇಕಿತ್ತು. ಆದರೆ, ಪಂದ್ಯದ ಮಧ್ಯದಲ್ಲೇ ಅವರ ಕೋಟಾವನ್ನು ಪೂರ್ಣಗೊಳಿಸಿದರು. ಇದು ಆರ್‌ಸಿಬಿಗೆ ಪರಿಣಾಮ ಬೀರಿದೆಎಂದು ಹೇಳಬಹುದು.
ಭುವನೇಶ್ವರ್ ಮತ್ತು ಹ್ಯಾಜಲ್‌ವುಡ್ ತಮ್ಮ ಕೋಟಾವನ್ನು ಪೂರ್ಣಗೊಳಿಸಿದ ನಂತರ ಮತ್ತು ಸುಯಾಶ್ ಶರ್ಮಾ ಯಾವುದೇ ಪರಿಣಾಮ ಬೀರದ ಕಾರಣ ರಜತ್ ಪಾಟೀದಾರ್ ಅವರು ಚೆಂಡನ್ನು ರಸಿಕ್ ಸಲಾಂ ಅವರ ಕೈಗೆ ನೀಡಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ರಸಿಕ್ ಸಲಾಂ ನಿನ್ನೆಯ ಪಂದ್ಯದಲ್ಲಿ ಸಂಪೂರ್ಣವಾಗಿ ಕಳಪೆ ಪ್ರದರ್ಶನ ನೀಡಿದರು. ಅವರು 4 ಓವರ್ ಬೌಲಿಂಗ್ ಮಾಡಿ ವಿಕೆಟ್ ಪಡೆಯದೆ 40 ರನ್ ಬಿಟ್ಟುಕೊಟ್ಟರು.
ಕೊನೆಯ ಓವರ್ ಬೌಲಿಂಗ್ ಮಾಡಿದ ಶೆಫರ್ಡ್ ಒತ್ತಡದಲ್ಲಿ ಸರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗದೆ 17 ರನ್ ಬಿಟ್ಟುಕೊಟ್ಟರು, ಇದರಿಂದಾಗಿ ಆರ್‌ಸಿಬಿ ಸೋಲುಂಡಿತು. ಭುವನೇಶ್ವರ್ ಅಥವಾ ಹ್ಯಾಜಲ್‌ವುಡ್ ಕೊನೆಯ ಓವರ್ ಬೌಲಿಂಗ್ ಮಾಡಿದ್ದರೆ ಆರ್‌ಸಿಬಿ ಗೆಲ್ಲುವ ಅವಕಾಶ ಇತ್ತು. ಆದರೆ, ಪಾಟೀದಾರ್ ತೆಗೆದುಕೊಂಡ ನಿರ್ಧಾರದಿಂದ ಆರ್‌ಸಿಬಿ ಸೋಲಿಗೆ ಶರಣಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿತು. ನಂತರ ಡೆಲ್ಲಿ ಕ್ಯಾಪಿಟಲ್ಸ್ 19.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು, (ಏಜೆನ್ಸೀಸ್).