- ರಾಜಸ್ಥಾನ ರಾಯಲ್ಸ್ ಖರೀದಿಯಿಂದ ಹಿಂದೆ ಸರಿದ ಕಲ್ ಸೋಮಾನಿ
- ಸೋಮಾನಿ ಕೈಬಿಟ್ಟ ಬೆನ್ನಲ್ಲೇ 16,500 ಕೋಟಿ ರೂ.ಗೆ ಮಿತ್ತಲ್ ಕುಟುಂಬ ಖರೀದಿ
Rajasthan Royals: ಐಪಿಎಲ್ನ ಬಲಿಷ್ಠ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯನ್ನು ಉದ್ಯಮಿ ಕಲ್ ಸೋಮಾನಿ ಖರೀದಿಸಲು ಮುಂದಾಗಿದ್ದರು. ಆದರೆ, ಡೀಲ್ ವರ್ಕ್ಔಟ್ ಆಗದ ಹಿನ್ನಲೆ ಇದೀಗ ಖ್ಯಾತ ಕೈಗಾರಿಕೋದ್ಯಮಿ ಲಕ್ಷ್ಮಿ ಎನ್. ಮಿತ್ತಲ್ ಅವರ ಕುಟುಂಬಕ್ಕೆ ಬರೋಬ್ಬರಿ 15,600 ಕೋಟಿ ರೂ.ಗೆ ಸೇಲ್ ಆಗಿದೆ.
ಲಕ್ಷ್ಮಿ ಎನ್. ಮಿತ್ತಲ್ ಮತ್ತು ಅವರ ಪುತ್ರ ಆದಿತ್ಯ ಮಿತ್ತಲ್ ಹಾಗೂ ಅದರ್ ಪೂನವಲ್ಲಾ ಅವರಿಗೆ ರಾಜಸ್ಥಾನ್ ರಾಯಲ್ಸ್‌ನಲ್ಲಿ ಶೇರ್ ಸಿಕ್ಕಿದೆ. 1.65 ಬಿಲಿಯನ್ ಯುಎಸ್ ಡಾಲರ್ (ಅಂದರೆ ಸುಮಾರು 15,600 ಕೋಟಿ ರೂ.) ಬಿಡ್‌ನೊಂದಿಗೆ ಫ್ರಾಂಚೈಸಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಒಪ್ಪಂದವು 2026ರ ಮೂರನೇ ತ್ರೈಮಾಸಿಕದಲ್ಲಿ (Q3) ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಈ ಮೊದಲು, ಅಮೆರಿಕ ಮೂಲದ ಉದ್ಯಮಿ ಕಲ್ ಸೋಮಾನಿ ನೇತೃತ್ವದ ಒಕ್ಕೂಟವು ತಂಡವನ್ನು ಭಾರೀ ಮೊತ್ತಕ್ಕೆ ಖರೀದಿಗೆ ಬಿಡ್ ಸಲ್ಲಿಸಿತು. 1.63 ಬಿಲಿಯನ್ ಡಾಲರ್‌ಗಳು ಅಂದರೆ ಬರೋಬ್ಬರಿ 15,300 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ಸೇಲ್ ಆಗಲಿದೆ ಎಂಬ ಸುದ್ದಿ ಹೊರಬಿದ್ದಿತು. ಆದರೆ, ಅಂತಿಮವಾಗಿ ಡೀಲ್ನಿಂದ ಹಿಂದೆ ಸರಿಯುವ ಮೂಲಕ ಒಕ್ಕೂಟವು ಫ್ರಾಂಚೈಸಿಯನ್ನು ಮತ್ತೊಬ್ಬರಿಗೆ ಸುಲಭವಾಗಿ ಬಿಟ್ಟುಕೊಟ್ಟಿದೆ.
ಕಲ್ ಸೋಮಾನಿ ನೇತೃತ್ವದ ಒಕ್ಕೂಟವು ವಾಲ್ಮಾರ್ಟ್ ಕುಟುಂಬದ ಅಮೇರಿಕನ್ ಉದ್ಯಮಿ ರಾಬ್ ವಾಲ್ಟನ್ ಮತ್ತು ಎನ್ಎಫ್ಎಲ್ ತಂಡ ಡೆಟ್ರಾಯಿಟ್ ಲಯನ್ಸ್‌ನಲ್ಲಿ ಬಹುಪಾಲು ಪಾಲನ್ನು ಹೊಂದಿರುವ ಹ್ಯಾಂಪ್ ಕುಟುಂಬದಿಂದ ಫ್ರಾಂಚೈಸಿಗೆ ಆರ್ಥಿಕ ಬೆಂಬಲ ಸಿಗಲಿದೆ. 19ನೇ ಆವೃತ್ತಿ ಮುಗಿದ ಬೆನ್ನಲ್ಲೇ ಹೊಸ ಮಾಲೀಕತ್ವವು ಅಧಿಕಾರ ವಹಿಸಿಕೊಳ್ಳಲಿದೆ ಎಂದೇ ಸುದ್ದಿಯಾಗಿತ್ತು. ಆದರೀಗ, ಮಿತ್ತಲ್ ಕುಟುಂಬವು ಫ್ರಾಂಚೈಸಿಯ ಶೇ.75ರಷ್ಟು ಪಾಲನ್ನು ಹೊಂದಿದ್ದು, ಅದರ್ ಪೂನವಲ್ಲಾ ಶೇ.18ರಷ್ಟು ಶೇರ್ ಅನ್ನು ಹೊಂದಿದ್ದಾರೆ.