ಭಾರತ-ಲಂಕಾ ಟೆಸ್ಟ್​ ಸರಣಿಯಲ್ಲಿ ಅಜಿಂಕ್ಯ ರಹಾನೆ ಕಾಮೆಂಟರಿ 
ಕ್ರಿಕೆಟ್

ಭಾರತ-ಲಂಕಾ ಟೆಸ್ಟ್​ ಸರಣಿಯಲ್ಲಿ ಅಜಿಂಕ್ಯ ರಹಾನೆ ಕಾಮೆಂಟರಿ

ಬೆಂಗಳೂರು: ಭಾರತ ಪರ 85 ಟೆಸ್ಟ್​ ಪಂದ್ಯಗಳನ್ನು ಆಡಿ 12 ಶತಕಗಳ ಸಹಿತ 5 ಸಾವಿರಕ್ಕೂ ಅಧಿಕ ರನ್​ ಬಾರಿಸಿರುವ ಮಾಜಿ ಬ್ಯಾಟರ್​ ಅಜಿಂಕ್ಯ ರಹಾನೆ (

Ajinkya Rahane

) ಇದೀಗ ಹೊಸ ಪಾತ್ರದೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಮರಳುತ್ತಿದ್ದಾರೆ.

ಆ.15ರಿಂದ ಗಾಲೆಯಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ ನಡುವಿನ ಟೆಸ್ಟ್​ ಸರಣಿಯಲ್ಲಿ ಅವರು ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ನಲ್ಲಿ (

Sony Sports Network

) ವೀಕ್ಷಕ ವಿವರಣೆಕಾರರಾಗಿ ಕಾಣಿಸಿಕೊಳ್ಳಲಿದ್ದಾರೆ.


ಇತ್ತೀಚೆಗಷ್ಟೇ ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿರುವ 37 ವರ್ಷದ ರಹಾನೆ ಈಗಾಗಲೆ ಇಂಗ್ಲೆಂಡ್​ನ ದಿ ಹಂಡ್ರೆಡ್​ ಲೀಗ್​ ಮೂಲಕ ವೀಕ್ಷಕ ವಿವರಣೆಕಾರರಾಗಿ ಪದಾರ್ಪಣೆ ಮಾಡಿದ್ದಾರೆ.

"ಟೆಸ್ಟ್​ ಕ್ರಿಕೆಟ್​ ನಮ್ಮ ಆಟದ ಉತ್ತುಂಗದ ಪ್ರಕಾರವಾಗಿದೆ. ಇದರಲ್ಲಿ ಭಾರತವನ್ನು ಹಲವು ವರ್ಷಗಳ ಕಾಲ ಪ್ರತಿನಿಧಿಸುವ ಸೌಭಾಗ್ಯ ನನ್ನದಾಗಿತ್ತು. ಈಗ ಇದೇ ಆಟವನ್ನು ಭಿನ್ನವಾದ ದೃಷ್ಟಿಕೋನದಿಂದ ನೋಡಲಿದ್ದೇನೆ. ನನ್ನ ಅನುಭವ ಹಂಚಿಕೊಳ್ಳಲು ಕಾತರಗೊಂಡಿದ್ದೇನೆ' ಎಂದು ರಹಾನೆ ತಿಳಿಸಿದ್ದಾರೆ.