ಬೆಂಗಳೂರು: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) 2025-27ರ 27 ಸರಣಿಗಳ ಪೈಕಿ 12 ಈಗಾಗಲೆ ಪೂರ್ಣಗೊಂಡಿದ್ದು, ಇನ್ನೂ 15 ಸರಣಿಗಳು ಬಾಕಿ ಉಳಿದಿವೆ. 4ನೇ ಆವೃತ್ತಿಯ ಫೈನಲ್ ಪ್ರವೇಶಿಸುವ ಪೈಪೋಟಿ ಮುಂದಿನ ಕೆಲ ತಿಂಗಳುಗಳಲ್ಲಿ ಅತ್ಯಂತ ರೋಚಕವಾಗಿ ಸಾಗಲಿವೆ. ಗುರುವಾರ ಆರಂಭಗೊಂಡಿರುವ ಆಸ್ಟ್ರೆಲಿಯಾ-ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯೊಂದಿಗೆ ಫೈನಲ್ಗೇರುವ (
ICC World Test Championship
) ಅಂತಿಮ ಹಂತದ ರೇಸ್ಗೆ ಚಾಲನೆ ಸಿಕ್ಕಿದೆ. ಭಾರತ ಶನಿವಾರ ಆರಂಭವಾಗಲಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಈ ರೇಸ್ ಪ್ರವೇಶಿಸಲಿದೆ.
ಫೈ
ನಲ್ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳುವ ಅವಕಾಶವೂ ಕಾಂಗರೂ ಮುಂದಿದೆ. ಯಾಕೆಂದರೆ 6 ಟೆಸ್ಟ್ಗಳನ್ನು ಬಾಂಗ್ಲಾ (2), ನ್ಯೂಜಿಲೆಂಡ್ (4) ವಿರುದ್ಧ ತವರಿನಲ್ಲೇ ಆಡಲಿದೆ. ದಣ ಆಫ್ರಿಕಾದಲ್ಲಿ ಆಡುವ 3 ಟೆಸ್ಟ್ಗಳೂ ಆಸೀಸ್ ಪಾಲಿಗೆ ನಿರ್ಣಾಯಕ ಎನಿಸಿದೆ. ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಲು ಇನ್ನು 6 ಜಯ, 1 ಡ್ರಾ ಅಗತ್ಯವಿದೆ.
ಫೈ
ನಲ್ ಎದುರಾಳಿ ಆಸೀಸ್ ವಿರುದ್ಧ ನಡೆಯಲಿದೆ. ಬಾಂಗ್ಲಾ (2), ಇಂಗ್ಲೆಂಡ್ (3) ವಿರುದ್ಧವೂ ತವರಿನಲ್ಲೇ ಆಡಲಿದ್ದು, ಶ್ರೀಲಂಕಾದಲ್ಲಿ ಕೊನೇ 2 ಟೆಸ್ಟ್ ಆಡಲಿದೆ. ದಣ ಆಫ್ರಿಕಾ ಶೇ. 60ಕ್ಕಿಂತ ಹೆಚ್ಚಿನ ಅಂಕ ಕಾಯ್ದುಕೊಳ್ಳಲು ಇನ್ನು 5 ಜಯ ಅಗತ್ಯವಿದೆ. 6-7ರಲ್ಲಿ ಗೆದ್ದರೆ ದ. ಆಫ್ರಿಕಾಕ್ಕೆ ಸತತ 2ನೇ ಬಾರಿ
ಫೈ
ನಲ್ ಪ್ರವೇಶಿಸುವುದು ಬಹುತೇಕ ಖಾತ್ರಿಯಾಗಲಿದೆ.
ಫೈ
ನಲ್ಗೇರುವ ಅವಕಾಶ ಹೆಚ್ಚಿಸಿಕೊಳ್ಳಲು ಉಳಿದೆಲ್ಲ ಪಂದ್ಯಗಳಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನಡೆಸಬೇಕಾದ ಸವಾಲು ಇದೆ. ಶ್ರೀಲಂಕಾ, ನ್ಯೂಜಿಲೆಂಡ್ನಲ್ಲಿ ತಲಾ 2 ಪಂದ್ಯ ಆಡಲಿರುವ ಭಾರತ ಬಳಿಕ ಮುಂದಿನ ವರ್ಷಾರಂಭದಲ್ಲಿ ಆಸ್ಟ್ರೆಲಿಯಾ ಎದುರು ತವರಿನಲ್ಲಿ 5 ಟೆಸ್ಟ್ ಆಡಲಿದೆ. ಆಸೀಸ್ ವಿರುದ್ಧದ ಸರಣಿಯವರೆಗೆ
ಫೈ
ನಲ್ ಆಸೆ ಜೀವಂತ ಉಳಿಸಿಕೊಳ್ಳಬೇಕಾದರೆ, ಭಾರತ ಮೊದಲ 2 ವಿದೇಶಿ ಸರಣಿಯಲ್ಲೂ ಉತ್ತಮ ನಿರ್ವಹಣೆ ತೋರುವುದು ಅನಿವಾರ್ಯವೆನಿಸಿದೆ. ಭಾರತ ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸಲು ಬಾಕಿ 9 ಟೆಸ್ಟ್ಗಳಲ್ಲಿ 7 ಜಯ ಕಾಣಬೇಕಿದೆ. 8ರಲ್ಲಿ ಗೆದ್ದರೆ ಭಾರತ ಶೇ.68.52 ಅಂಕದೊಂದಿಗೆ
ಫೈ
ನಲ್ ಪ್ರವೇಶವನ್ನು ಬಹುತೇಕ ಖಾತ್ರಿಪಡಿಸಿಕೊಳ್ಳಬಹುದಾಗಿದೆ.
ಫೈ
ನಲ್ ಹಾದಿ ದುರ್ಗಮವಾಗಿದೆ. ಶ್ರೀಲಂಕಾ ಶೇ.60ಕ್ಕಿಂತ ಹೆಚ್ಚಿನ ಅಂಕ ಗಳಿಸಲು ಉಳಿದ 8ರಲ್ಲಿ 6 ಜಯ ಕಾಣಬೇಕಾಗಿರುವುದರಿಂದ
ಫೈ
ನಲ್ ಕೈಗೆಟಕುವುದು ಕಠಿಣವೆನಿಸಿದೆ. ಇಂಗ್ಲೆಂಡ್ ಇದುವರೆಗೆ ಆಡಿರುವ 13 ಟೆಸ್ಟ್ಗಳಲ್ಲಿ 8ರಲ್ಲಿ ಸೋತಿದ್ದು, ನಿಧಾನಗತಿ ಓವರ್ಗಾಗಿ 14 ಅಂಕ ಕಡಿತ ಶಿಕ್ಷೆಯನ್ನೂ ಎದುರಿಸಿರುವುದರಿಂದ
ಫೈ
ನಲ್ ಬಾಗಿಲು ಬಂದ್ ಆಗಿದೆ. ಉಳಿದ 8ರಲ್ಲಿ ಗೆದ್ದರೂ ಶೇ.55ಕ್ಕಿಂತ ಹೆಚ್ಚು ಅಂಕ ಗಳಿಸಲಾಗದು. ಪಾಕ್ ಕೂಡ ಇದುವರೆಗೆ ಆಡಿರುವ 6 ಟೆಸ್ಟ್ಗಳಲ್ಲಿ 4ರಲ್ಲಿ ಸೋತಿದ್ದು, ಉಳಿದ 7ರಲ್ಲೂ ಗೆದ್ದರಷ್ಟೇ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಬಹುದಾಗಿದೆ. ವಿಂಡೀಸ್ ಇದುವರೆಗೆ 12ರಲ್ಲಿ 8 ಸೋತಿದ್ದು, ಉಳಿದ 2 ಟೆಸ್ಟ್ಗಳು ಕೇವಲ ಔಪಚಾರಿಕವೆನಿಸಿವೆ.