MI vs PBKS ಪಂದ್ಯದಲ್ಲಿ ಕ್ವಿಂಟನ್​ ಡಿಕಾಕ್​ ಶತಕ  
ಕ್ರಿಕೆಟ್

'ಕ್ಯಾಪ್ಟನ್​ ಕೂಲ್'​ ದಾಖಲೆ ಹಿಂದಿಕ್ಕಿದ ಕ್ವಿಂಟನ್ ಸ್ಫೋಟಕ ಇನ್ನಿಂಗ್ಸ್​! ಪಂಜಾಬ್​ ಕಿಂಗ್ಸ್​ಗೆ 196 ರನ್​ಗಳ ಗುರಿ

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶ್ರೇಯಸ್​ ಅಯ್ಯರ್​ ಪಡೆ, ಎಂ ತಂಡಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್​ ಮಾಡಿದ ಮುಂಬೈ ಇಂಡಿಯನ್ಸ್​ಗೆ ರೋಹಿತ್ ಶರ್ಮ ಅವರ ಅನುಪಸ್ಥಿತಿ ಕಾಡಿತು. ಕ್ವಿಂಟನ್​ ಡಿಕಾಕ್​ (ಅಜೇಯ 59 ಎಸೆತ, 112 ರನ್​) ಮತ್ತು ನಮನ್​ ಧಿರ್​ (31 ಎಸೆತ, 50 ರನ್​) ಅವರ ಭರ್ಜರಿ ಇನ್ನಿಂಗ್ಸ್ ಬಿಟ್ಟರೆ ಇನ್ಯಾರಿಂದಲೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಬರಲಿಲ್ಲ. 
ವಿಕೆಟ್​ ಕೀಪರ್​ ಆಗಿ ಐಪಿಎಲ್​ನಲ್ಲಿ ಅತಿ ಹೆಚ್ಚಿನ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಈಗ ಸಿಎಸ್​ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಕ್ವಿಂಟನ್​ ಹಿಂದಿಕ್ಕಿದ್ದಾರೆ. ಇನ್ನು ಪಂಜಾಬ್ ಪರ ಅರ್ಷದೀಪ್​ ಸಿಂಗ್ ಆರಂಭದಲ್ಲಿ ಎರಡು ಬಹುಮುಖ್ಯ ವಿಕೆಟ್​ಗಳನ್ನು ಬ್ಯಾಕ್ ಟು ಬ್ಯಾಕ್ ಪಡೆದರೆ, ಮ್ಯಾಕ್ರೋ ಜೆನ್ಸನ್ ಮತ್ತು ಶಶಾಂಕ್ ಸಿಂಗ್ ತಲಾ ಒಂದು ವಿಕೆಟ್​ ಪಡೆದು ತಂಡದ ಪರ ಮಿಂಚಿದರು. ​