- ಇಂದು ದುಬೈನ ಅಬುಧಾಬಿಯಲ್ಲಿ ಐಪಿಎಲ್ ಮಿನಿ ಹರಾಜು
- ಒಟ್ಟು 359 ಆಟಗಾರರು ಆಕ್ಷನ್ನಲ್ಲಿ ಭಾಗಿ
- ಈ ಐವರು ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು
ನವದೆಹಲಿ: ಐಪಿಎಲ್ ಮಿನಿ ಹರಾಜಿಗೆ ಕೆಲವೇ ಕ್ಷಣಗಳು ಬಾಕಿಯಿದ್ದು, ಇಂದು (ಡಿ.16) ದುಬೈನಲ್ಲಿ ಆಕ್ಷನ್ ಪ್ರಕ್ರಿಯೆ ನಡೆಯಲಿದೆ. ಹರಾಜಿನಲ್ಲಿ ಎಷ್ಟು ಭಾರತೀಯ ಮತ್ತು ವಿದೇಶಿ ಆಟಗಾರರು ಇರಲಿದ್ದಾರೆ ಎಂಬುದರ ಪಟ್ಟಿ ಈಗಾಗಲೇ ಹೊರಬಿದ್ದಿದೆ. ಫ್ರಾಂಚೈಸಿಗಳ ಜೇಬು ಸ್ವಲ್ಪ ಭಾರವಾಗಿದ್ದೇ ಆದರೂ ಅತ್ಯುತ್ತಮ ಮತ್ತು ಪ್ರತಿಭಾವಂತ ಆಟಗಾರರಿಗೆ ಮಣೆ ಹಾಕುವ ಪೈಪೋಟಿ ಖಂಡಿತ ಜೋರಾಗಿರಲಿದೆ. ಈ ಮಧ್ಯೆ, ಐವರು ಸ್ಟಾರ್ ಆಟಗಾರರ ಮೇಲೆ 10 ತಂಡಗಳ ಚಿತ್ತ ಮೂಡಿದೆ.
ದುಬೈನ ಅಬು ಧಾಬಿಯಲ್ಲಿ ನಡೆಯಲಿರುವ ಐಪಿಎಲ್ 2026ರ ಮಿನಿ ಹರಾಜಿನಲ್ಲಿ 10 ಬಲಿಷ್ಠ ಫ್ರಾಂಚೈಸಿಗಳು ಭಾಗಿಯಾಗಲಿದ್ದು, ಬಿಸಿಸಿಐ ಕೊಟ್ಟಿರುವ ನಿಯಮಾನುಸಾರ ಪ್ರಕ್ರಿಯೆ ನಡೆಯಲಿದೆ. ಪಟ್ಟಿ ಹೊರಬಿಟ್ಟಿರುವ ಕ್ರಿಕೆಟ್ ಮಂಡಳಿ, ಆರಂಭದಲ್ಲಿ 350 ಆಟಗಾರರು ಹರಾಜಿಗೆ ಬರಲಿದ್ದಾರೆ ಎಂದು ತಿಳಿಸಿತ್ತು. ಆದರೆ, ನಂತರದಲ್ಲಿ ಇದನ್ನು ಕೊಂಚ ಬದಲಿಸಿ, ಹೆಚ್ಚುವರಿ 9 ಕ್ರಿಕೆಟಿಗರನ್ನು ಪಟ್ಟಿಗೆ ಸೇರಿಸಿತು. ಈ ಮೂಲಕ ಒಟ್ಟು 359 ಆಟಗಾರರು ಆಕ್ಷನ್ನಲ್ಲಿ ಇರಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಬಿಡ್ಡಿಂಗ್‌ಗೆ ಲಭ್ಯವಿರುವ ಒಟ್ಟು ಆಟಗಾರರಲ್ಲಿ 244 ಭಾರತೀಯರು, 115 ಮಂದಿ ಓವರ್ಸೀಸ್ ಪ್ಲೇಯರ್ಗಳಿದ್ದಾರೆ. ಹರಾಜು ಎಂಟು ವಿಭಿನ್ನ ಮೂಲ ಬೆಲೆ ಸ್ಲ್ಯಾಬ್‌ಗಳನ್ನು ಫಾಲೋ ಮಾಡಲಿದೆ. ಫ್ರಾಂಚೈಸಿಗಳು ಗರಿಷ್ಠ 77 ಸ್ಥಾನಗಳನ್ನು ಭರ್ತಿ ಮಾಡುವುದು ಅಗತ್ಯತೆ. ಇದರಲ್ಲಿ ಕೇವಲ 31 ವಿದೇಶಿ ಆಟಗಾರರಿಗೆ ಸ್ಥಾನ ಮೀಸಲಿಡಲಾಗಿದೆ. ವರದಿಗಳ ಪ್ರಕಾರ, ಈ ಬಾರಿಯ ಹರಾಜಿನಲ್ಲಿ ಐವರು ಸ್ಟಾರ್ ಆಲ್ರೌಂಡ್ ಕ್ರಿಕೆಟಿಗರ ಮೇಲೆ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಅಸಲಿಗೆ, ಈ ಐವರನ್ನು ದುಬಾರಿ ಮೊತ್ತಕ್ಕೆ ಬಿಡ್ ಮಾಡುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ವರದಿಗಳು ತಿಳಿಸಿವೆ.
ಇಲ್ಲಿದೆ ನೋಡಿ ಪಟ್ಟಿ
- ಕ್ಯಾಮರಾನ್ ಗ್ರೀನ್ (ಓವರ್ಸೀಸ್ ಪ್ಲೇಯರ್)
- ರವಿ ಬಿಷ್ಣೋಯಿ (ಭಾರತೀಯ ಪ್ಲೇಯರ್)
- ಮತೀಶಾ ಪತಿರಾಣ (ಓವರ್ಸೀಸ್ ಪ್ಲೇಯರ್)
- ಲಿಯಾಮ್ ಲಿವಿಂಗ್ಸ್ಟೋನ್ (ಓವರ್ಸೀಸ್ ಪ್ಲೇಯರ್)
- ವೆಂಕಟೇಶ್ ಅಯ್ಯರ್ (ಭಾರತೀಯ ಪ್ಲೇಯರ್)