ವಿವಾದಕ್ಕೆ ಗುರಿಯಾದ ಫಿಲ್​ ಸಾಲ್ಟ್ ಹಿಡಿದ ಕ್ಯಾಚ್​  
ಕ್ರಿಕೆಟ್

ಸಾಲ್ಟ್​ ಹಿಡಿದ ಕ್ಯಾಚ್​ ನಾಟ್​ ಔಟ್!​? ಅಷ್ಟಕ್ಕೂ ಬೌಂಡರಿ ಲೈನ್​ನಲ್ಲಿ ಆಗಿದ್ದೇ ಬೇರೆ? ಇಲ್ಲಿದೆ ನೋಡಿ ಅಸಲಿಯತ್ತು

ಪ್ರಮುಖ ಮುಖ್ಯಾಂಶಗಳು

  • ಹೆನ್ರಿಚ್​ ಕ್ಲಾಸೆನ್​ ಕೊಟ್ಟ ಕ್ಯಾಚ್​ ಹಿಡಿದ ಫಿಲ್​ ಸಾಲ್ಟ್​
  • ಬೌಂಡರಿ ಲೈನ್​ನಲ್ಲಿ ಅಮೋಘ ಕ್ಯಾಚ್​
  • ಅಂಪೈರ್​ ಕೊಟ್ಟ ತೀರ್ಪು ತಪ್ಪೆಂದ ಕೆಲ ಕ್ರಿಕೆಟ್​ ಅಭಿಮಾನಿಗಳು
ಬೆಂಗಳೂರು: ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ಮೊದಲ ಐಪಿಎಲ್​ ಪಂದ್ಯ ನಿಜಕ್ಕೂ ರೋಚಕವಾಗಿತ್ತು. ಮೊದಲು ಬ್ಯಾಟ್​ ಮಾಡಿದ ಎಸ್​ಆರ್​​ಎಚ್​, ಆರ್​ಸಿಬಿಗೆ 201 ರನ್​ಗಳ ಗುರಿ ನೀಡಿತು. ಈ ಬೃಹತ್ ಗುರಿಯನ್ನು 15.4 ಓವರ್​ನಲ್ಲೇ ಮುಗಿಸಿದ ಬೆಂಗಳೂರು ಪಡೆಗೆ ವಿರಾಟ್​ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರ ಅದ್ಭುತ ಇನ್ನಿಂಗ್ಸ್ ಗೆಲುವಿಗೆ ದೊಡ್ಡ ಕೊಡುಗೆ ನೀಡಿತು. ಒಂದೆಡೆ ಇದೆಲ್ಲವೂ ಖುಷಿ ನೀಡಿದರೆ, ಕಿಶನ್​ ಪಡೆ ಚೇಸಿಂಗ್​ ಮಾಡುತ್ತಿದ್ದಾಗ ನಡೆದ ಕ್ಯಾಚ್​ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗಿದೆ.
ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ಎಸ್​ಆರ್​ಎಚ್​ ತಂಡದ ಸ್ಟಾರ್​ ಬ್ಯಾಟರ್​ಗಳ ವಿಕೆಟ್​ಗಳನ್ನು ಆರ್​ಸಿಬಿಯ ಫಿಲ್​ ಸಾಲ್ಟ್​ ಅವರೇ ಹಿಡಿದಿದ್ದು ನೋಡುಗರ ಹುಬ್ಬೇರಿಸಿತು. ಬೌಂಡರಿ ಲೈನ್​ನಲ್ಲಿ ನಿಂತು, ಕಣ್ಣು ಮಿಟುಕಿಸುವುದರೊಳಗೆ ಹಿಡಿದ ಕ್ಯಾಚ್​ಗಳು ಸ್ಟೇಡಿಯಂನಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ರೊಮಾರಿಯೊ ಶೆಫರ್ಡ್ ಎಸೆದ ಚೆಂಡನ್ನು ಹೆನ್ರಿಕ್ ಕ್ಲಾಸೆನ್ ಲೆಗ್ ಸೈಡ್ ಕಡೆಗೆ ಬಲವಾಗಿ ಹೊಡೆದರು. ಡೀಪ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಾಲ್ಟ್, ಈ ಕ್ಯಾಚ್ ಅನ್ನು ಜಿಗಿದು ಯಶಸ್ವಿಯಾಗಿ ಹಿಡಿದರು.
ಒಂದು ನಿಮಿಷ ಅದು ಔಟ್​ ಅಲ್ಲ ಎಂದೇ ಎಲ್ಲರೂ ಭಾವಿಸಿದರು. ಆದರೆ, ಥರ್ಢ್​ ಅಂಪೈರ್​ ಬಳಿ ರಿವ್ಯೂವ್​ ಕೇಳಿದ ಹೆನ್ರಿಚ್​ ಕ್ಲಾಸೆನ್​ಗೆ ಸಿಕ್ಕ ಉತ್ತರ ಔಟ್​. ಕ್ರೀಸ್​ನಿಂದ ಪೆವಿಲಿಯನ್‌ಗೆ ಹೋಗುವವರೆಗೂ ಡೌಟ್​ನಲ್ಲೇ ಸಾಗಿದ ಕ್ಲಾಸೆನ್​, ಬೌಂಡರಿಯಲ್ಲಿ ನಿಂತಿದ್ದ ಮತ್ತೊಬ್ಬ ಅಂಪೈರ್​ ಅನ್ನು ಇನ್ನೊಮ್ಮೆ ಕೇಳಿದರು. ಅದು ನಿಜಕ್ಕೂ ಔಟ್​ ಎಂದು. ಅವರು ಹೌದು ಎನ್ನುತ್ತಿದ್ದಂತೆ, ಸೀದಾ ಡ್ರೆಸ್ಸಿಂಗ್ ರೂಮ್​ಗೆ ತೆರಳಿದರು. ಆದರಿದು, ಅಲ್ಲಿಗೆ ಮುಗಿಯಲಿಲ್ಲ. ಎಸ್​ಆರ್​ಎಚ್​ ಅಭಿಮಾನಿಗಳು, ಇದು ಖಂಡಿತ ಔಟ್​ ಅಲ್ಲ. ಸಾಲ್ಟ್​ ಅವರ ಶೂ, ಬೌಂಡರಿ ಲೈನ್​ಗೆ ತಾಕಿದೆ. ಅಂಪೈರ್​ ಎರಡ್ಮೂರು ಬಾರಿ ಸರಿಯಾಗಿ ಪರಿಶೀಲಿಸಬೇಕಿತ್ತು ಎಂದೆಲ್ಲ ಜಾಲತಾಣಗಳಲ್ಲಿ ವಾದಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ವಾಸ್ತವವಾಗಿ, ಕ್ಯಾಚ್ ಹಿಡಿಯುವಾಗ ಫಿಲ್​​ ಸ್ಟಾಲ್ ಜಿಗಿದು, ಬೌಂಡರಿ ಲೈನ್​ ಪಕ್ಕದಲ್ಲೇ ಬಿದ್ದರು. ಮೇಲ್ನೋಟಕ್ಕೆ ನೋಡಿದಾಗ ಅವರು ಲೈನ್​ನ ಮುಟ್ಟಿದಂತೆ ಕಾಣುತ್ತಿತ್ತು. ಆದರೆ, ನೀವು ಅದನ್ನು ಮತ್ತೊಂದು ಕೋನದಿಂದ ಸೂಕ್ಷ್ಮವಾಗಿ ನೋಡಿದರೆ, ಅದು ಸ್ಪಷ್ಟವಾಗಿ ಔಟ್ ಇಲ್ಲ ಎಂದು ತಿಳಿಯುತ್ತದೆ. ಅಲ್ಲೆಲ್ಲಿಯೂ, ಸಾಲ್ಟ್​ ಅವರಿಂದ ಬೌಂಡರಿ ಲೈನ್​ನಲ್ಲಿದ್ದ ಕುಶನ್​ಗಳು ಅಲುಗಾಡಲಿಲ್ಲ. ಹೀಗಾಗಿಯೇ, ಮೂರನೇ ಅಂಪೈರ್ ಅದು ಔಟ್​ ಎಂದೇ ನಿರ್ಧರಿಸಿದರು. ಆದರೆ, ಕ್ರಿಕೆಟ್​ ಅಭಿಮಾನಿಗಳ ಕಣ್ಣಿಗೆ ಇದು ಹೇಗೆ ಬೇಕಾದರೂ ಕಾಣಬಹುದು. ಈ ನಿಟ್ಟಿನಲ್ಲಿ, ಕೆಲವರು ಸುಖಾಸುಮ್ಮನೆ ವಾದಿಸುತ್ತಿರುವುದು ಕೆಲವರ ಚರ್ಚೆಗೆ ಕಾರಣವಾಗುತ್ತಿದೆ,(ಏಜೆನ್ಸೀಸ್).