ಬಿಸಿಬಿ ನಿರ್ಧಾರದ ಹಿಂದೆ ಪಾಕ್​ ಕೈವಾಡ ಆರೋಪ 
ಕ್ರಿಕೆಟ್

ಬಿಸಿಬಿ ಹಿಂದಿದೆ ಪಿಸಿಬಿ! ಬಾಂಗ್ಲಾ ನಿರ್ಧಾರಕ್ಕೆ ಪಾಕಿಸ್ತಾನವೇ​ ಕಾರಣ: ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್

ಪ್ರಮುಖ ಮುಖ್ಯಾಂಶಗಳು

  • ಐಸಿಸಿ ತಮ್ಮ ಮನವಿ ತಿರಸ್ಕರಿಸಿದ್ದಕ್ಕೆ ಬಿಸಿಬಿ ಕಟು ನಿರ್ಧಾರ
  • ಕಡೆಗೂ ನಾವು ಟೂರ್ನಿಯಲ್ಲಿ ಆಡುವುದಿಲ್ಲ ಎಂಬ ನಿಲುವು
  • ಬಿಸಿಬಿ ನಿರ್ಧಾರದ ಹಿಂದೆ ಪಾಕ್​ ಕೈವಾಡ ಎಂದ ಮಾಜಿ ಕ್ರಿಕೆಟಿಗ
ನವದೆಹಲಿ: ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ಕಡೆಗೂ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ (ಬಿಸಿಬಿ) ಸ್ಪಷ್ಟಪಡಿಸಿರುವುದು ಇದೀಗ ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ. 
ತನ್ನ ಮನವಿಗೆ ಐಸಿಸಿ ಸ್ಪಂದಿಸಲಿದೆ ಎಂದು ಅಪಾರ ನಿರೀಕ್ಷೆಯಲ್ಲಿದ್ದ ಬಿಸಿಬಿಗೆ ಭಾರೀ ಮುಖಭಂಗವೇ ಉಂಟಾಯಿತು. ಹೀಗಾಗಿಯೇ, ಭಾರತಕ್ಕೆ ನಾವು ಪ್ರವಾಸ ಮಾಡಲ್ಲ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದಿತು. ಈ ನಿರ್ಧಾರದ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಮಾಜಿ ಕ್ರಿಕೆಟಿಗ ಆರೋಪಿಸಿದ್ದಾರೆ.      
ಈ ವಿಚಾರದಲ್ಲಿ ಪಾಕಿಸ್ತಾನವನ್ನು ದೂಷಿಸಿರುವ ಮಾಜಿ ಕ್ರಿಕೆಟಿಗ ಮದನ್ ಲಾಲ್, "ಎರಡೂ ದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನವನ್ನು ಉರುಳಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಟಿ20 ಟೂರ್ನಿಯಿಂದ ಹೊರಗುಳಿಯುವ ಮೂಲಕ ಬಿಸಿಬಿ ಮೂರ್ಖತನದ ನಿರ್ಧಾರ ಕೈಗೊಂಡಿದೆ" ಎಂದರು.
"ಅಷ್ಟಕ್ಕೂ, ಬಾಂಗ್ಲಾದೇಶದ ನಿಲುವಿನಲ್ಲಿ ಪಾಕ್​ ಪ್ರಮುಖ ಪಾತ್ರ ವಹಿಸಿದೆ. ಈ ನಿಲುವು ಬಾಂಗ್ಲಾ ಮೇಲೆ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಬೀರಲಿದೆ. ಟಿ20 ವಿಶ್ವಕಪ್ ಟೂರ್ನಿ​ಯಿಂದ ಹೊರಗುಳಿದಿರುವ ಬಾಂಗ್ಲಾದೇಶ ಸ್ಥಾನಕ್ಕೆ ಜಿಂಬಾಬ್ವೆ ಅಥವಾ ಸ್ಕಾಟ್​ಲ್ಯಾಂಡ್​ ಆಡುವ ಸಾಧ್ಯತೆಗಳಿವೆ" ಎಂದು ಮದನ್​ ಲಾಲ್​ ಹೇಳಿದ್ದಾರೆ,(ಏಜೆನ್ಸೀಸ್).