ಪ್ರಮುಖ ಮುಖ್ಯಾಂಶಗಳು
ಕೊಲೊಂಬೊ:ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಸಮರದಲ್ಲಿಭಾರತ ಭರ್ಜರಿ ಜಯ ದಾಖಲಿಸಿದೆ.
ಭಾನುವಾರ ಪ್ರೇಮದಾಸಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿಪಾಕಿಸ್ತಾನವನ್ನು 61 ರನ್ಗಳ ಬೃಹತ್ಅಂತರದಿಂದ ಮಣಿಸಿದ ಭಾರತ, ಟೂರ್ನಿಯ 'ಸೂಪರ್-8' ಹಂತಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದೆ.
ಭಾರತದಸಂಘಟಿತ ಆಟದ ಮುಂದೆ ಪಾಕಿಸ್ತಾನತತ್ತರಿಸಿ ಹೋಗಿದ್ದು, ಉಭಯ ದೇಶಗಳ ನಡುವಿನಕ್ರಿಕೆಟ್ ಗುಣಮಟ್ಟದ ವ್ಯತ್ಯಾಸ ಇದೀಗ ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಪಾಕ್ಚೇಸಿಂಗ್ ವೇಳೆ ಪಿಸಿಬಿ ಅಧ್ಯಕ್ಷರ ಪಲಾಯನ!
ಭಾರತನೀಡಿದ 176 ರನ್ಗಳ ಗುರಿಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತದ ಬೌಲರ್ಗಳು ಆರಂಭದಲ್ಲೇ ಸಿಂಹಸ್ವಪ್ನವಾದರು.ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಅವರ ಮಾರಕ ದಾಳಿಗೆಸಿಲುಕಿದ ಪಾಕಿಸ್ತಾನ 34 ರನ್ಗಳಿಗೇ 4 ವಿಕೆಟ್ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಗಮನಾರ್ಹಸಂಗತಿಯೆಂದರೆ, ಪಾಕಿಸ್ತಾನ ತಂಡ ಸತತವಾಗಿ ವಿಕೆಟ್ಕಳೆದುಕೊಳ್ಳುತ್ತಿದ್ದಂತೆ,ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕಸಚಿವ ಮೊಹ್ಸಿನ್ ನಖ್ವಿ ಅವರು ಪಂದ್ಯ ಮುಗಿಯುವಮುನ್ನವೇ ಕ್ರೀಡಾಂಗಣ ಬಿಟ್ಟು ಹೊರನಡೆದರು. ಕಪ್ಪು ಕಾರಿನಲ್ಲಿ ಅವರು ಮೈದಾನದಿಂದ ಹೊರಹೋಗುತ್ತಿರುವವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ತಮ್ಮ ತಂಡದ ಹೀನಾಯಸೋಲನ್ನು ನೋಡಲಾಗದೆ ನಖ್ವಿ ಪಲಾಯನ ಮಾಡಿದ್ದಾರೆ" ಎಂದು ಅಭಿಮಾನಿಗಳು ಟ್ರೋಲ್ಮಾಡುತ್ತಿದ್ದಾರೆ.
ಟಾಸ್ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಯುವಬ್ಯಾಟರ್ ಅಬಿಷೇಕ್ ಶರ್ಮಾ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ, ನಂತರ ಬಂದ ಇಶಾನ್ಕಿಶನ್ ಪಾಕ್ ಬೌಲರ್ಗಳಮೇಲೆ ಸವಾರಿ ಮಾಡಿದರು. ಕೇವಲ 40 ಎಸೆತಗಳಲ್ಲಿ 77 ರನ್ ಸಿಡಿಸಿದ ಕಿಶನ್,ಭಾರತದ ಇನ್ನಿಂಗ್ಸ್ಗೆ ವೇಗ ನೀಡಿದರು.ತಿಲಕ್ ವರ್ಮಾ (25) ಅವರೊಂದಿಗೆ ಉತ್ತಮ ಜೊತೆಯಾಟವಾಡಿದ ಕಿಶನ್ ಪಂದ್ಯದ ಹಾದಿಯನ್ನೇ ಬದಲಿಸಿದರು.
ಒಂದುಹಂತದಲ್ಲಿ ಹಾರ್ದಿಕ್ ಪಾಂಡ್ಯ (0) ವಿಕೆಟ್ ಕಳೆದುಕೊಂಡು ಭಾರತ 126/4 ಕ್ಕೆ ಕುಸಿದಾಗ ಆತಂಕಸೃಷ್ಟಿಯಾಗಿತ್ತು. ಆದರೆ, ನಾಯಕ ಸೂರ್ಯಕುಮಾರ್ ಯಾದವ್,ಶಿವಂ ದುಬೆ ಮತ್ತು ರಿಂಕುಸಿಂಗ್ ಜವಾಬ್ದಾರಿಯುತವಾಗಿ ಆಡಿ ತಂಡದ ಮೊತ್ತವನ್ನು175/7 ಕ್ಕೆ ತಲುಪಿಸಿದರು. ಪಾಕಿಸ್ತಾನದ ಪರ ಸೈಮ್ ಅಯೂಬ್3 ವಿಕೆಟ್ ಪಡೆದು ಗಮನ ಸೆಳೆದರು.
ಭಾರತದಸಂಘಟಿತ ಪ್ರದರ್ಶನ
ಪಾಕಿಸ್ತಾನದಪರ ಉಸ್ಮಾನ್ ಖಾನ್ (44 ರನ್) ಒಬ್ಬರೇ ಹೋರಾಟನಡೆಸಿದರು. ಉಳಿದ ಯಾವ ಬ್ಯಾಟರ್ಗಳಿಗೂ ಭಾರತದ ಶಿಸ್ತಿನ ಬೌಲಿಂಗ್ ಎದುರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ 18 ಓವರ್ಗಳಲ್ಲಿ ಕೇವಲ114 ರನ್ಗಳಿಗೆ ಆಲೌಟ್ ಆಯಿತು.
ಅಕ್ಷರ್ಪಟೇಲ್: 29ಕ್ಕೆ 2 ವಿಕೆಟ್ (ಪಂದ್ಯದ ಪ್ರಮುಖ ತಿರುವು)
ಹಾರ್ದಿಕ್ಪಾಂಡ್ಯ: 16ಕ್ಕೆ 2 ವಿಕೆಟ್
ಜಸ್ಪ್ರೀತ್ಬುಮ್ರಾ: 17ಕ್ಕೆ 2 ವಿಕೆಟ್
ವರುಣ್ಚಕ್ರವರ್ತಿ:17ಕ್ಕೆ 2 ವಿಕೆಟ್
ಈ ಗೆಲುವಿನೊಂದಿಗೆ ಭಾರತ ಸತತ ಮೂರುಪಂದ್ಯಗಳನ್ನು ಗೆದ್ದಂತಾಗಿದ್ದು, ಅಪ್ರತಿಮ ಫಾರ್ಮ್ನೊಂದಿಗೆ ಸೂಪರ್-8 ಹಂತಕ್ಕೆ ಮುನ್ನಡೆದಿದೆ. ಪಾಕಿಸ್ತಾನಕ್ಕೆ ಈ ಸೋಲು ದೊಡ್ಡಆಘಾತ ನೀಡಿದ್ದು, ಮುಂದಿನ ಹಂತ ತಲುಪುವ ಹಾದಿದುರ್ಗಮವಾಗಿದೆ.
ಪಂದ್ಯದಸಂಕ್ಷಿಪ್ತ ಸ್ಕೋರ್:
ಭಾರತ:175/7 (20 ಓವರ್) - ಇಶಾನ್ ಕಿಶನ್ 77, ತಿಲಕ್ ವರ್ಮಾ 25.
ಪಾಕಿಸ್ತಾನ:114 ಆಲೌಟ್ (18 ಓವರ್) - ಉಸ್ಮಾನ್ ಖಾನ್ 44; ಅಕ್ಷರ್ ಪಟೇಲ್ 2/29, ಬುಮ್ರಾ 2/17.
ಫಲಿತಾಂಶ:ಭಾರತಕ್ಕೆ 61 ರನ್ಗಳ ಭರ್ಜರಿಜಯ,(ಏಜೆನ್ಸೀಸ್).