ಸಲ್ಮಾನ್ ಅಲಿ ಅಘಾ ಪತ್ನಿ  
ಕ್ರಿಕೆಟ್

ನನಗೂ, ನನ್ನ ಮಗನಿಗೂ... ಪಾಕ್​ ಅಭಿಮಾನಿಗಳ ಹುಚ್ಚಾಟಕ್ಕೆ ಬೇಸತ್ತ ಸಲ್ಮಾನ್ ಅಲಿ ಅಘಾ​ ಪತ್ನಿ ಅಳಲು | Pakistan Fans

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ವಿರುದ್ಧ ಸೂಪರ್​-8 ಪಂದ್ಯ ಸೋತ ಪಾಕಿಸ್ತಾನ
  • ಪಾಕ್​ ಸೋಲಿನ ಬೆನ್ನಲ್ಲೇ ತಂಡಕ್ಕೆ ಹಾಗೂ ತಂಡದ ನಾಯಕನ ವಿರುದ್ಧ ಛೀಮಾರಿ
  • ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ ಪತ್ನಿ ಮತ್ತು ಮಗನಿಗೆ ಕೆಟ್ಟ ಮಾತುಗಳಿಂದ ಅವಮಾನ
ಶ್ರೀಲಂಕಾ: ನಿನ್ನೆ (ಫೆ.24) ನಡೆದ ಸೂಪರ್​-8 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲುಂಡ ಬೆನ್ನಲ್ಲೇ ಪಾಕ್​ ಅಭಿಮಾನಿಗಳಿಂದ (Pakistan Fans), ಪಾಕಿಸ್ತಾನ ಕ್ರಿಕೆಟ್​ ತಂಡದ​ ನಾಯಕ​ ಸಲ್ಮಾನ್ ಅಲಿ ಆಘಾ ಅವರ ಪತ್ನಿ ಮತ್ತು ಮಗನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಛೀಮಾರಿ, ನಿಂದನೆಗಳು ವ್ಯಕ್ತವಾಗುತ್ತಿವೆ.
ಇಂಗ್ಲೆಂಡ್ ವಿರುದ್ಧದ ಸೋಲಿನ ನಂತರ ಪಾಕ್​ ಕ್ರಿಕೆಟ್ ಅಭಿಮಾನಿಗಳು ತಮ್ಮನ್ನು ಮತ್ತು ತಮ್ಮ ಪುತ್ರನನ್ನು ಸೋಷಿಯಲ್​ ಮೀಡಿಯಾದಲ್ಲಿ ತೀರ ಕೆಟ್ಟ ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ಸಲ್ಮಾನ್ ಅವರ ಪತ್ನಿ ಸಬ್ಬಾ ಮಾಂಝರ್ ಆರೋಪಿಸಿದ್ದಾರೆ. ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್-8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡವು 2 ವಿಕೆಟ್‌ಗಳ ಅಂತರದ ಸೋಲನ್ನು ಅನುಭವಿಸಿತು. ಈ ಸೋಲಿನ ಬೆನ್ನಲ್ಲೇ ಪಾಕ್​ ಸೆಮೀಸ್​ ಕನಸು ಬಹುತೇಕ ಭಗ್ನ ಎಂಬ ಮಾತುಗಳು ಜಾಲತಾಣಗಳಲ್ಲಿ ಹರಿದಾಡಿತು.

ವೈರಲ್​ ಬೆನ್ನಲ್ಲೇ ಸ್ಟೋರಿ ಡಿಲೀಟ್​!

ಇದನ್ನು ನೋಡ್ತಿದ್ದಂತೆ ಕೆರಳಿದ ಪಾಕಿಸ್ತಾನಿ ಅಭಿಮಾನಿಗಳು, ಇದೀಗ ತಂಡದ ಕ್ಯಾಪ್ಟನ್​ ಮತ್ತು ಅವರ ಪತ್ನಿ, ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ತಮಗೆ ಮತ್ತು ತಮ್ಮ ಮಗನಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಸಬ್ಬಾ ಮಾಂಝರ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಮ್ಮನ್ನು ಹೀಗೆಲ್ಲ ನಿಂದಿಸಿ, ಅಪಮಾನಿಸಿದ ಕೂಡಲೇ ಪಾಕಿಸ್ತಾನ ಏನು ಟಿ20 ವಿಶ್ವಕಪ್​ ಗೆಲ್ಲುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಸಲಿಗೆ, ಇದು ಪಾಕ್​ ಕ್ರಿಕೆಟ್​ ಪ್ರೇಮಿಗಳ ಹುಚ್ಚಾಟ, ತಳಮಟ್ಟದ ಬುದ್ಧಿಯನ್ನು ಮತ್ತೆ ಎತ್ತಿಹಿಡಿದಿದೆ. ಈ ಸುದ್ದಿ ವೈರಲ್​ ಆಗ್ತಿದ್ದಂತೆ ಇದೀಗ ತಮ್ಮ ಸ್ಟೋರಿಯನ್ನು ಸಲ್ಮಾನ್ ಪತ್ನಿ ಡಿಲೀಟ್​ ಮಾಡಿದ್ದಾರೆ.
ಪಂದ್ಯದ ವಿವರ
165 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ಗೆ ನಾಯಕ ಹ್ಯಾರಿ ಬ್ರೂಕ್ ಶತಕ ಗಳಿಸುವ ಮೂಲಕ 19.1 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿ ಗೆಲುವಿಗೆ ನೆರವಾದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ನೇರವಾಗಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಮೊದಲ ತಂಡವಾಗಿದೆ,(ಏಜೆನ್ಸೀಸ್).