ImadWasim  
ಕ್ರಿಕೆಟ್

ಪಾಕ್ ಕ್ರಿಕೆಟ್‌ನಲ್ಲಿ ಸಂಚಲನ: ಮಗುವಿನ ಗರ್ಭಪಾತ ಮಾಡಿಸಿದ್ರಾ ಇಮಾದ್ ವಾಸಿಂ? ಸಾಕ್ಷ್ಯವಿದೆ ಎಂದ ಮೊದಲ ಪತ್ನಿ! | ImadWasim

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮಾದ್ ವಾಸಿಂ(ImadWasim)ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕೆ ಭಾರಿ ವಿವಾದಕ್ಕೆ ಸಿಲುಕಿದ್ದಾರೆ.

ಹೌದು,ಮೊದಲ ಪತ್ನಿಸಾನ್ನಿಯಾ ಅಶ್ಫಾಕ್‌ ಅವರಿಗೆ ವಿಚ್ಛೇದನ ನೀಡಿದ ಕೇವಲ ಎರಡೇ ತಿಂಗಳಲ್ಲಿ ನೈಲಾ ಎಂಬುವವರನ್ನು ಇಮಾದ್ಎರಡನೇ ಮದುವೆಯಾಗಿದ್ದಾರೆ. ಆದರೆ, ಈ ಬೆನ್ನಲ್ಲೇ ಅವರ ಮೊದಲ ಪತ್ನಿ ಮಾಡಿರುವ ಆರೋಪಗಳು ಕ್ರಿಕೆಟ್ಲೋಕವನ್ನೇ ಬೆಚ್ಚಿಬೀಳಿಸಿವೆ.

ಇಮಾದ್ ವಾಸಿಂಎರಡನೇ ಮದುವೆಯ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಕೂಡಲೇ, ಮೊದಲ ಪತ್ನಿ ಸಾನ್ನಿಯಾಅಶ್ಫಾಕ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. "ಡಿಸೆಂಬರ್ 2023ರಲ್ಲಿ ಇಮಾದ್ ಲಾಹೋರ್‌ನಲ್ಲಿ ನನ್ನ ಮಗುವನ್ನು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಅವನೊಬ್ಬ ಕೊಲೆಗಾರಮತ್ತು ವಂಚಕ. ಇದಕ್ಕೆ ನನ್ನ ಬಳಿ ವಿಡಿಯೋ ಸಾಕ್ಷ್ಯವಿದೆ," ಎಂದು ಸಾನ್ನಿಯಾ ಗಂಭೀರ ಆರೋಪ ಮಾಡಿದ್ದಾರೆ.ಅಲ್ಲದೆ, ಪಾಕಿಸ್ತಾನ್ ಸೂಪರ್ ಲೀಗ್ (PSL) ತಂಡವಾದ 'ಇಸ್ಲಾಮಾಬಾದ್ ಯುನೈಟೆಡ್' ಇಮಾದ್‌ನನ್ನು ತಂಡಕ್ಕೆಸೇರಿಸಿಕೊಂಡಿರುವುದನ್ನು ಖಂಡಿಸಿರುವ ಅವರು, #BoycottIslamabadUnited ಎಂದು ಅಭಿಯಾನಕ್ಕೆ ಕರೆನೀಡಿದ್ದಾರೆ.

ಇಮಾದ್ ವಾಸಿಂಸಮರ್ಥನೆ

ಈ ಆರೋಪಗಳ ನಡುವೆಯೇಇಮಾದ್ ವಾಸಿಂ ತಮ್ಮ ಎರಡನೇ ಪತ್ನಿ ನೈಲಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. "ನಾನು ನನ್ನ ಮೊದಲಮದುವೆಯಲ್ಲಿ ಇರಬಾರದಷ್ಟು ಕಾಲ ಇದ್ದೆ. ಶಾಂತಿ ಮತ್ತು ಸ್ಥಿರತೆಯ ಜೀವನಕ್ಕಾಗಿ ನಾನು ನೈಲಾ ಅವರನ್ನುಮದುವೆಯಾಗಿದ್ದೇನೆ. ಈ ನಿರ್ಧಾರವನ್ನು ಪೋಷಕರ ಮಾರ್ಗದರ್ಶನದಂತೆ ಯೋಚಿಸಿಯೇ ಮಾಡಿದ್ದೇನೆ,"ಎಂದು ಇಮಾದ್ ಹೇಳಿದ್ದಾರೆ. ಅಲ್ಲದೆ, ತನ್ನ ಎರಡನೇ ಪತ್ನಿಯನ್ನು 'ಮನೆ ಮುರುಕಿ' (Homewrecker)ಎಂದು ಕರೆಯುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದು, ಎಲ್ಲದಕ್ಕೂ ತಾನೇ ಜವಾಬ್ದಾರ ಎಂದುಬರೆದುಕೊಂಡಿದ್ದಾರೆ.

ಮಕ್ಕಳ ಬಗ್ಗೆಪ್ರೀತಿ

ಮೊದಲ ಮದುವೆಮುರಿದುಬಿದ್ದರೂ, ಆ ಸಂಬಂಧದಿಂದ ತನಗೆ ಸಿಕ್ಕ ಮಕ್ಕಳು ತನ್ನ ಜೀವನದ ದೊಡ್ಡ ಆಶೀರ್ವಾದ ಎಂದು ಇಮಾದ್ಹೇಳಿದ್ದಾರೆ. ಡಿಸೆಂಬರ್ 2024 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಇಮಾದ್,ಈಗ ವೈಯಕ್ತಿಕ ಬದುಕಿನ ಕಹಿ ಘಟನೆಗಳಿಂದ ಸುದ್ದಿಯಲ್ಲಿದ್ದಾರೆ,(ಏಜೆನ್ಸೀಸ್‌).