ವೈಭವ್ ಸೂರ್ಯವಂಶಿ 
ಕ್ರಿಕೆಟ್

ಮೊದಲು ಲ್ಯಾಬ್​ನಲ್ಲಿ ಟೆಸ್ಟ್​ ಮಾಡಿಸಿ! ವೈಭವ್ ಸೂರ್ಯವಂಶಿ ಶತಕದಾಟ ಬೆನ್ನಲ್ಲೇ​ ಪಾಕ್​ ವ್ಯಕ್ತಿ ಅಚ್ಚರಿ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ಮುಂದುವರಿದ ವೈಭವ್ ಸೂರ್ಯವಂಶಿಯ ಬಿರುಗಾಳಿ ಬ್ಯಾಟಿಂಗ್
  • ಯುವ ಬ್ಯಾಟರ್​ನ ಬ್ಯಾಟಿಂಗ್​ ಆರ್ಭಟದ ಬಗ್ಗೆ ಮಾತನಾಡಿದ ಪಾಕ್​ ವ್ಯಕ್ತಿ
Vaibhav Sooryavanshi: ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ತನ್ನ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡುತ್ತಿರುವ ರಾಜಸ್ಥಾನ ರಾಯಲ್ಸ್‌ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಶೀಘ್ರದಲ್ಲೇ ಟೀಮ್​ ಇಂಡಿಯಾಗೆ ಪಾದರ್ಪಣೆ ಮಾಡುವುದು ಬಹುತೇಕ ಖಚಿತ ಎಂದೂ ಹೇಳಲಾಗುತ್ತಿದೆ. ಈ ಮಧ್ಯೆ, ಐಪಿಎಲ್​ನಲ್ಲಿ ಆರ್​ಆರ್​ಗೆ ಓಪನರ್​ ಆಗಿ ಮಿಂಚುತ್ತಿರುವ ಈ ಯುವ ಬ್ಯಾಟರ್​, ಹಲವರ ಗೊಂದಲ ಮತ್ತು ಅನುಮಾನಗಳಿಗೆ ಕಾರಣವಾಗಿದ್ದಾರೆ.  
ಸಾಮಾನ್ಯವಾಗಿ ಯಾರಿಗೆ ಆಗಲಿ, 15 ವರ್ಷದ ಹುಡುಗನೊಬ್ಬ ಮೈದಾನದ ತುಂಬೆಲ್ಲ ಸಿಕ್ಸರ್​ಗಳನ್ನು ಹೊಡೆಯುತ್ತಾನೆ ಎಂದರೆ ಅಚ್ಚರಿ ಹಾಗೂ ಗೊಂದಲ ಮೂಡುವುದು ತೀರ ಸಹಜ. ಕಾರಣ, ಅಂತಾರಾಷ್ಟ್ರೀಯ ಮತ್ತು ಅನುಭವಿ ಆಟಗಾರರಿಂದಲೇ ಸಾಧ್ಯವಾಗದು, ಒಬ್ಬ ಚಿಕ್ಕ ಹುಡುಗನಿಂದ ಆಗುತ್ತಿರುವುದು ಕ್ರಿಕೆಟ್​ ದಿಗ್ಗಜರಿಗೆ ನಂಬಲು ಅಸಾಧ್ಯವಾಗಿದೆ. ಹೀಗಿರುವಾಗ, ಸಾಮಾನ್ಯ ಜನರು ಗೊಂದಲಕ್ಕೆ ಒಳಗಾಗುವುದರಲ್ಲಿ ಆಶ್ಚರ್ಯವೇನಿಲ್ಲ.  
ಯಾವುದೇ ತಂಡವಿರಲಿ, ಯಾವ ಬೌಲರ್​ ಇರಲಿ, ಮುಖ ಮೂತಿ ನೋಡದೆ ಮೈದಾನದಲ್ಲಿ ತನ್ನ ಅಬ್ಬರದ ಬ್ಯಾಟಿಂಗ್​ ನಡೆಸುವ ವೈಭವ್, ಕೇವಲ 15 ವರ್ಷಕ್ಕೆ ಅಪಾರ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸುತ್ತಿರುವ ಸೂರ್ಯವಂಶಿ, ಆರೆಂಜ್​ ಕ್ಯಾಪ್​ ತಮ್ಮದಾಗಿಸಿಕೊಳ್ಳುತ್ತಿರುವುದು ಮತ್ತು ಅತ್ಯಧಿಕ ರನ್​ ಹೊಂದಿರುವ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ. ಇಂತಹ ಯುವ ಸ್ಫೋಟಕ ಬ್ಯಾಟರ್​ ಬಗ್ಗೆ ಪಾಕಿಸ್ತಾನದ ವ್ಯಕ್ತಿಯೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.  ​ 
ಪಾಕ್​ನ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಕೆಟ್​ ಎಕ್ಸ್​ಪರ್ಟ್​ ನೌಮನ್​ ನಿಯಾಜ್​, ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ ಅವರ ದೇಹದೊಳಗೆ ಯಾವುದೋ ಎಐ ಚಿಪ್​ ಅವಳಡಿಕೆಯಾಗಿದೆ. ಆತನನ್ನು ಯಾವುದಾದರೂ ಲ್ಯಾಬ್​ಗೆ ಕಳುಹಿಸಿ, ಚೆಕ್​ ಮಾಡಿಸಿ ಎಂದು ತಮಾಷೆಯಾಗಿ ಹೇಳಿದರು. 
ಈತ ನಿಜಕ್ಕೂ ಅನ್​ರಿಯಲ್​. ಅಷ್ಟು ದೊಡ್ಡ ಭರವಸೆಗಳನ್ನು ಹೊಂದಿರುವ ವೈಭವ್ ಸೂರ್ಯವಂಶಿ, ಎಂಥಾ ಪ್ಲೇಯರ್​. ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಅವರು ಮಂದಗತಿಯ ಬ್ಯಾಟಿಂಗ್ ಮಾಡಿದರು ಅನಿಸುತ್ತೆ. 300ರ ಸ್ಟ್ರೈಕ್​ರೇಟ್​ನಲ್ಲಿ ಆಡಬೇಕಿತ್ತು ಅವರು. ಈಗಲೇ ವೈಭವ್ ಹೀಗೆ. ಇನ್ನು ಮುಂದಿನ ದಿನಗಳಲ್ಲಿ 18ರ ಪ್ರಾಯ ದಾಟುತ್ತಿದ್ದಂತೆ ಅವರ ದೇಹದ ಆಕಾರ, ಬ್ಯಾಟಿಂಗ್ ಶೈಲಿ, ಪವರ್​ಹಿಟ್ಟಿಂಗ್​ ಹೇಗೆಲ್ಲ ಬದಲಾಗಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).