ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಸೂಪರ್ 8 ಪಂದ್ಯ
- ಇಂದಿನಿಂದ ಟಿ20 ವಿಶ್ವಕಪ್ ಸೂಪರ್ 8 ಹಂತದ ಪಂದ್ಯಗಳು
- ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ
- ಮಳೆ ಆರ್ಭಟಕ್ಕೆ ಪಂದ್ಯ ನಡೆಯದಿದ್ದರೆ ನಾಳೆಗೆ ಮುಂದೂಡಿಕೆ?
PAK vs NZ: ಇಂದು (ಫೆ.21) ಕೊಲೊಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೂಪರ್ 8 ಹಂತದ ಪಂದ್ಯಕ್ಕೆ ಇದೀಗ ವರುಣನ ಅಡಚಣೆ ಎದುರಾಗಿದೆ.
ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಮುಖಾಮುಖಿಯಾದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಟಾಸ್ ಆಗಿದ್ದು, ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಮೊದಲ ಓವರ್ಗೂ ಮುನ್ನವೇ ಮಳೆ ಶುರುವಾಗಿ, ಪಂದ್ಯ ಆರಂಭಕ್ಕೆ ಅಡಚಣೆ ಉಂಟುಮಾಡಿದೆ. ಇನ್ನೂ ಮಳೆರಾಯನ ಆರ್ಭಟ ನಿಲ್ಲದೆ ಇರುವುದು ಸದ್ಯ ಪಂದ್ಯ ನಡೆಯುವುದೇ ಡೌಟ್ ಎಂದು ಹೇಳಲಾಗಿದೆ.
ಹವಾಮಾನ ವರದಿ ಏನು?
ಹವಾಮಾನ ಮುನ್ಸೂಚನೆಗಳ ಪ್ರಕಾರ, ಮುಂದಿನ ಕೆಲವು ಗಂಟೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಗಳು ಶೇ.20ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಮಳೆ ಏನಾದರೂ ಬಿಡದೆ ಸುರಿದರೆ ಪಂದ್ಯ ರದ್ದಾಗುವ ಸಾಧ್ಯತೆಗಳಿವೆ. ತಂಡಗಳು ಕನಿಷ್ಠ 5 ಓವರ್ ಆದರೂ ಆಡಬೇಕಿದೆ. ಅದೇನಾದರೂ ಸಾಧ್ಯವಾಗಲಿಲ್ಲ ಎಂದರೆ, ಮ್ಯಾಚ್ ರದ್ದಾಗಲಿದೆ.
ಪಂದ್ಯ ವಾಶ್ಔಟ್ ಆದ್ರೆ ನಾಳೆಗೆ?
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದ ಯಾವುದಾದರೂ ಪಂದ್ಯ ರದ್ದಾಗುವ ಮೊದಲು ಕನಿಷ್ಠ ಐದು ಓವರ್ಗಳನ್ನು ಆಡುವುದು ಅನಿವಾರ್ಯ. ಇದು ಐಸಿಸಿಯ ಮೂಲ ನಿಯಮ. ವರುಣನ ಆರ್ಭಟದ ನಡುವೆ ಈ 5 ಓವರ್ ಕೂಡ ಆಡಿಸಲು ಸಾಧ್ಯವಾಗಿಲ್ಲ ಎಂದಾದರೆ, ಆ ಪಂದ್ಯ ರದ್ದಾಗುತ್ತೆ. ಈ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಇಲ್ಲಿ 'ರಿಸರ್ವ್ ಡೇ'ಗೆ (ಪಂದ್ಯ ನಾಳೆಗೆ ಮುಂದೂಡಿಕೆ) ಅನುಮತಿ ಇಲ್ಲ,(ಏಜೆನ್ಸೀಸ್).