ಇಂಗ್ಲೆಂಡ್​ ತಂಡದ ನಾಯಕ ಹ್ಯಾರಿ ಬ್ರೂಕ್ 
ಕ್ರಿಕೆಟ್

ಬ್ರೂಕ್​ ಅಬ್ಬರದ ಶತಕ! ಇಂಗ್ಲೆಂಡ್​ಗೆ ರೋಚಕ ಜಯ;​ ಕಡೆಗೂ ಪಾಕಿಸ್ತಾನ ಸೆಮೀಸ್​ ಕನಸು ಭಗ್ನ? | PAK vs ENG

PAK vs ENG: ಇಂದು (ಫೆ.24) ಶ್ರೀಲಂಕಾದ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವೆ ನಡೆದ ನಾಲ್ಕನೇ ಸೂಪರ್-8 ಪಂದ್ಯದಲ್ಲಿ ಪಾಕ್​ ಗೆಲುವಿನ ದಡ ಸೇರುವಲ್ಲಿ ಕಡೆಗೂ ವಿಫಲವಾಯಿತು.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕ್​, ಇಂಗ್ಲೆಂಡ್​ಗೆ ಬೌಲಿಂಗ್ ಮಾಡುವಂತೆ ತಿಳಿಸಿತು. ಅಂತೆಯೇ, ಬ್ಯಾಟ್​ ಮಾಡಿದ ಪಾಕಿಸ್ತಾನ, 20 ಓವರ್​ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು 164 ರನ್​ ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್​ಗೆ ಆರಂಭಿಕ ಬ್ಯಾಟರ್​ಗಳೇ ಕೈಕೊಟ್ಟರು. ಇದು ತಂಡಕ್ಕೆ ದೊಡ್ಡ ಶಾಕ್​ ನೀಡಿದ್ದೇ ಆದರೂ ಕ್ಯಾಪ್ಟನ್​ ಹ್ಯಾರಿ ಬ್ರೂಕ್​ ಅವರಿಂದ ಬಂದ ಇನ್ನಿಂಗ್ಸ್​ ಪಾಕಿಸ್ತಾನ ಹಾಕಿಕೊಂಡ ಲೆಕ್ಕಾಚಾರವನ್ನೇ ಬದಲಿಸಿತು.
ಫಿಲ್​ ಸಾಲ್ಟ್​, ಜಾಸ್​ ಬಟ್ಲರ್​, ಜಾಕೆಬ್​ ಬೆಥಲ್​ ಸೇರಿದಂತೆ ಸ್ಟಾರ್​ ಬ್ಯಾಟರ್​ಗಳು ಬಹುಬೇಗನೇ ವಿಕೆಟ್​ ಕಳೆದುಕೊಂಡರು. ಇಂತಹ ಕಠಿಣ ಸಮಯದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್​, ಕೇವಲ 51 ಎಸೆತಗಳಲ್ಲಿ 100 ರನ್​ ಬಾರಿಸಿದರು. ಸ್ಫೋಟಕ ಇನ್ನಿಂಗ್ಸ್ ನೀಡುವ ಮೂಲಕ ಪಾಕ್​ ಬೌಲರ್​ಗಳ ಬೆವರಿಳಿಸಿದರು. ಇಷ್ಟೇ ಅಲ್ಲದೆ, ಪಾಕಿಸ್ತಾನದ ಸೆಮಿಫೈನಲ್​ ಕನಸು ಬಹುತೇಕ ಭಗ್ನಗೊಂಡಿದೆ. ಶತಕದಾಟ ತೋರುವ ಮೂಲಕ ನಾಯಕನ ಇನ್ನಿಂಗ್ಸ್​ ನೀಡಿದ್ದು ವಿಶೇಷ.