ಪಾಕಿಸ್ತಾನ ಕ್ರಿಕೆಟ್​ ತಂಡ 
ಕ್ರಿಕೆಟ್

ಭಾರತ ಅಂದ್ರೆ ಭಯ ನಿಮಗೆ! ಪಾಕ್​ ಮಾಜಿ ಕ್ರಿಕೆಟಿಗನಿಂದಲೇ ಪಾಕಿಸ್ತಾನ ತಂಡಕ್ಕೆ ಛೀಮಾರಿ | Pakistan

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ 7 ರಿಂದ ಟಿ20 ವಿಶ್ವಕಪ್​ ಮೆಗಾ ಟೂರ್ನಮೆಂಟ್​ ಆರಂಭ
  • ಟೂರ್ನಿ ಆರಂಭವಾಗಬೇಕು ಅಷ್ಟರಲ್ಲಿ ಪಾಕಿಸ್ತಾನದಿಂದ ಮತ್ತೊಂದು ಖ್ಯಾತೆ
  • ತಮ್ಮ ತಂಡದ ವಿರುದ್ಧವೇ ತಿರುಗಿಬಿದ್ದ ಪಾಕ್​ ಮಾಜಿ ಕ್ರಿಕೆಟಿಗ
Pakistan: ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು, ಇದೇ ಫೆ.7ರಿಂದ ಈ ಮೆಗಾ ಟೂರ್ನಮೆಂಟ್​ ಶುರುವಾಗಲಿದೆ. ಆದರೆ, ಈ ಮಧ್ಯೆ ಪಾಕಿಸ್ತಾನ ಮಾಡುತ್ತಿರುವ ಹೈಡ್ರಾಮಾ ಮಾತ್ರ ಸದ್ಯ ಕ್ರಿಕೆಟ್​ ಪ್ರಿಯರಿಂದ ಮಾತ್ರವಲ್ಲ, ಬಿಸಿಸಿಐ ಮತ್ತು ಐಸಿಸಿಗೂ ಸಾಕಾಗಿ ಹೋಗಿದೆ.

ಮುಖಕ್ಕೆ ಹೊಡೆದಂತೆ ಹೇಳಿಕೆ

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸಿದೆ. ಇನ್ನೇನು ಟೂರ್ನಿ ಆರಂಭವಾಗಬೇಕು ಅಷ್ಟರಲ್ಲಿ ಪಾಕ್​ ತನ್ನ ನರಿಬುದ್ಧಿಯನ್ನು ಪ್ರದರ್ಶಿಸಲು ಹೊರಟ್ಟಿದೆ. ಈವರೆಗೆ ವಿಶ್ವಕಪ್​ ಬಹಿಷ್ಕರಿಸುತ್ತೇವೆ ಎಂದು ಬೊಂಬಡಿ ಬಜಾಯಿಸುತ್ತಿದ್ದ ಪಾಕಿಸ್ತಾನ, ಇದೀಗ ಫೆ.15ರಂದು ನಿಗದಿಯಾಗಿರುವ ಟೀಮ್ ಇಂಡಿಯಾ ವಿರುದ್ಧ ಗ್ರೂಪ್​ ಪಂದ್ಯವನ್ನು ಆಡುವುದಿಲ್ಲ ಎಂದಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಜಾಗತಿಕವಾಗಿ ಪಾಕಿಸ್ತಾನ ತಂಡ ಮತ್ತು ಆಟಗಾರರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಹೆದರಿ ನಿರ್ಧಾರ?

ಪಂದ್ಯ ಬಹಿಷ್ಕರಿಸುವ ನಾಟಕಕ್ಕೆ ಛೀಮಾರಿ ಹಾಕಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, "ಇಂತಹ ನಿರ್ಧಾರಗಳಿಂದ ಜನರು, ಟೀಮ್ ಇಂಡಿಯಾ ವಿರುದ್ಧ ಆಡಲು ನಮ್ಮವರಿಗೆ ಹೆದರಿಕೆ. ಹೀಗಾಗಿಯೇ, ಪಂದ್ಯವನ್ನು ಬಹಿಷ್ಕರಿಸಿದ್ದಾರೆ ಎಂದು ಲೇವಡಿ ಮಾಡ್ತಾರೆ. ಅಸಲಿಗೆ, ಇದರಲ್ಲಿ ಯಾವುದೇ ಲಾಜಿಕ್ ಇಲ್ಲ. ಪಾಕ್​ ಪ್ರಕಾರ, ಅವರಿನ್ನೂ ಬಾಂಗ್ಲಾ ಪರ ನಿಂತ ಹಾಗೇ ಕಾಣಿಸುತ್ತಿದೆ. ಆದರೆ, ಬಾಂಗ್ಲಾದೇಶ ತಂಡ ಟೂರ್ನಿಯಿಂದ ಹೊರಬಿದ್ದು ಯಾವುದೋ ಕಾಲವಾಯಿತು" ಎಂದಿದ್ದಾರೆ.
ಇಲ್ಲಿ ಪಾಕಿಸ್ತಾನ ತಂಡವು ತಮ್ಮ ಆಟದ ಮೇಲೆ ಮಾತ್ರ ಗಮನಹರಿಸಬೇಕು. ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಜನರಿಗೆ ಬೇರೆಯೇ ಸಂದೇಶ ಹೋಗುತ್ತದೆ. ಇಂಥಾ ನಿರ್ಣಯಗಳಿಂದ ಸೆಮಿಫೈನಲ್​ಗೆ ಹೋಗುವ ಹಾದಿಯನ್ನು ಪಾಕ್​ ಇನ್ನಷ್ಟು ಕಠಿಣ ಮಾಡಿಕೊಂಡಿದೆ. ಇದು ತುಂಬಾ ದೊಡ್ಡ ತಪ್ಪು. ಭಾರತ ಆಡುತ್ತಿರುವ ಬ್ರ್ಯಾಂಡ್​ ಕ್ರಿಕೆಟ್ ಅನ್ನು ಪಾಕಿಸ್ತಾನ ಆಡುತ್ತಿಲ್ಲ. ಟಿ20 ಅಥವಾ ಏಕದಿನ ವಿಶ್ವಕಪ್ ಆಗಿರಲಿ, ಪ್ರತಿಯೊಂದು ಹಂತದಲ್ಲೂ ಭಾರತ ಪಾಕಿಸ್ತಾನವನ್ನು ಮಣಿಸಿದೆ" ಎಂದು ಹೇಳಿದ್ದಾರೆ.

ಫೈನಲ್​ನಲ್ಲಿ ಟ್ರೋಫಿ ಕೊಟ್ಟು ಬರ್ತಿರಾ?

ಯಾವಾಗಲೂ ನಿರ್ಧಾರ ಮಾಡುವ ಮುನ್ನ ಹತ್ತು ಬಾರಿ ಯೋಚಿಸಬೇಕು. ಸುಮ್ಮನೆ, ಏಕಾಏಕಿ ಒಂದು ನಿರ್ಣಯ ತೆಗೆದುಕೊಳ್ಳುವುದಲ್ಲ. ಬಾಂಗ್ಲಾ ವಿಚಾರದಲ್ಲಿ ಭಾವನೆಗೆ ಒಳಗಾಗಿ ತಪ್ಪು ನಿರ್ಧಾರಗಳನ್ನು ಮಾಡುವುದು ಸರಿಯಲ್ಲ. ಇದೇ ಮೊದಲ ಪಂದ್ಯವನ್ನಾಡಲು ನಿರಾಕರಿಸುತ್ತಿರುವ ನೀವು, ಅದೇ ಭಾರತ ಫೈನಲ್​ಗೆ ಬಂದ್ರೆ ಆಡಲ್ಲ ಎಂದು ಟ್ರೋಫಿ ಕೊಟ್ಟು ಬರ್ತೀರಾ? ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).