ಮೈದಾನದಲ್ಲಿ ನಿರಾಶೆಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು 
ಕ್ರಿಕೆಟ್

18 ಟೆಸ್ಟ್‌ಗಳಿಂದ ಗೆಲುವೇ ಇಲ್ಲ; 8 ವರ್ಷಗಳಿಂದ ಜಯದ ಬರ! ದಯನೀಯ ಸ್ಥಿತಿಗೆ ತಲುಪಿದ ಪಾಕಿಸ್ತಾನ ಟೆಸ್ಟ್​ ತಂಡ! Pakistan Cricket

ಕ್ರಿಕೆಟ್​: ಒಂದು ಕಾಲದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಬಲಿಷ್ಟ ತಂಡವೆಂದು ಗುರುತಿಸಿಕೊಂಡವರಲ್ಲಿ ಪಾಕಿಸ್ತಾನ ಕ್ರಿಕೆಟ್ (Pakistan Cricket)​ ತಂಡ ಕೂಡ ಒಂದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡ ದಯನೀಯ ಪರಿಸ್ಥಿಗೆ ತಲುಪಿದ್ದು, ಕಳೆದ 18 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ತಮ್ಮ ತಂಡ ಎಷ್ಟು ಬಲಹೀನವಾಗಿದೆ ಎಂದು ಜಗತ್ತಿಗೆ ರುಜುವಾತು ಪಡಿಸಿದೆ.
ಸದ್ಯ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಮೂರು ಟೆಸ್ಟ್​ಗಳ ಟೂರ್ನಿಯಲ್ಲಿ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಸೋಲನ್ನು ಅನುಭವಿಸುವ ಮೂಲಕ ಕಳೆದ 18 ಪಂದ್ಯಗಳಲ್ಲಿ ಸರಳಿ ಸೋಲನ್ನು ಅನುಭವಿಸಿದ ತಂಡವಾಗಿ ಹೊರಬಿದ್ದಿದೆ. ಇದರಲ್ಲಿ 16 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದರೆ, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

8 ವರ್ಷದಿಂದ ಒಂದೇ ಒಂದು ಗೆಲುವಿಲ್ಲ!

ಲಾರ್ಡ್ಸ್​​ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ, ಇಂಗ್ಲೆಂಡ್​ ಟಾಸ್​ ಸೋತು ಬ್ಯಾಟಿಂಗ್​ ಮಾಡಿ ಮೊದಲ ಇನ್ನಿಂಗ್ಸ್​​ನಲ್ಲಿ 290 ರನ್​ಗಳಿಗೆ ಆಲ್​ಔಟ್​ ಆದರೆ ಪಾಕಿಸ್ತಾನ 110 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿತು.
ಎರಡನೇ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ 208 ರನ್​ಗಳನ್ನು ಗಳಿಸಿ ಪಾಕಿಸ್ತಾನಕ್ಕೆ 389 ರನ್​ಗಳ ಗುರಿಯನ್ನು ನೀಡಿತು. ಆದರೆ, ಪಾಕಿಸ್ತಾನ ಕೇವಲ 194 ರನ್​ಗಳಿಗೆ ಆಲ್​ ಔಟ್​ ಆಗುವ ಮೂಲಕ, ಹೀನಾಯ ಸೋಲನ್ನು ಅನುಭವಿಸು.

ಈ ಮೂಲಕ ಸರಣಿ ಜೊತೆಗೆ ಕಳೆದ 8 ವರ್ಷಗಳಿಂದ ಒಂದೇ ಒಂದು ಟೆಸ್ಟ್​​ ಪಂದ್ಯಗಳನ್ನು ಗೆಲ್ಲದ ತನ್ನ ದಾಖಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ.

ಸದ್ಯ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯನ್ನು ಪಾಕಿಸ್ತಾನ ಸೋತಿದೆ. ಈಗ ಸೆಪ್ಟೆಂಬರ್​ 9 ರಂದು ಮೂರನೇ ಪಂದ್ಯವಿದ್ದು, ಈ ಪಂದ್ಯವನ್ನು ಗೆದ್ದು ತನ್ನ ಸತತ ಸೋಲಿನ ದಾಖಲೆಯನ್ನು ಮುರಿಯುತ್ತಾ? ಅಥವಾ ಸರಣಿ ವೈಟ್​ವಾಶ್​ ಆಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ, (ಏಜನ್ಸೀಸ್​).