ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

ಆತನಿಗೆ ಯಾರಿಂದಲೂ ಸಪೋರ್ಟ್​ ಇಲ್ಲ! ಕ್ಯಾಪ್ಟನ್ ಹಾರ್ದಿಕ್​ ಬೆನ್ನಿಗೆ ನಿಂತ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ​

ಪ್ರಮುಖ ಮುಖ್ಯಾಂಶಗಳು

  • 19ನೇ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ಗೆ 7 ಸೋಲು
  • ಬ್ಯಾಕ್ ಟು ಬ್ಯಾಕ್​ ಸೋಲುತ್ತಿರುವ ತಂಡಕ್ಕೆ ಪ್ಲೇಆಫ್​ ಕನಸು ಭಗ್ನ
  • ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಯಾರೊಬ್ಬರೂ ಸಪೋರ್ಟ್​ ಮಾಡ್ತಿಲ್ಲ
Hardik Pandya: ಪ್ರಸ್ತುತ, 19ನೇ ಐಪಿಎಲ್​ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಸರಣಿ ಸೋಲಿನಿಂದ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಸತತ ಕಳಪೆ ಪ್ರದರ್ಶನ ನೀಡುತ್ತಿರುವ ಐದು ಬಾರಿ ಚಾಂಪಿಯನ್ಸ್ ಮುಡಿಗೇರಿಸಿಕೊಂಡ ತಂಡ, ಈಗ ಒಂದೇ ಒಂದು ಗೆಲುವಿಗೂ ತೀರ ಹೆಣಗಾಡುವಂತ ಪರಿಸ್ಥಿತಿಗೆ ತಲುಪಿದೆ. ಹೀಗಿರುವಾಗಲೇ, ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಹೀನಾಯ ಸೋಲು ಅನುಭವಿಸಿತು. ಇದು ಫ್ರಾಂಚೈಸಿ ಅಭಿಮಾನಿಗಳಿಗೆ ಪ್ಲೇಆಫ್​ ಕನಸು ಸಂಪೂರ್ಣವಾಗಿ ಭಗ್ನಗೊಂಡಿದೆ.
ತಂಡವು ಸತತ ಸೋಲಿನಿಂದ ಕಂಗೆಟ್ಟ ಹಿನ್ನೆಲೆ ಸದ್ಯ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯಗೆ ಸಾಲು ಸಾಲು ಟೀಕೆಗಳು ಹರಿದುಬರುತ್ತಿವೆ. ಒಂದಷ್ಟು ಮಾಜಿ ಕ್ರಿಕೆಟಿಗರು ಮುಂಬೈ ಇಂಡಿಯನ್ಸ್​ನ ಸ್ಟಾರ್​ ಆಲ್​ರೌಂಡರ್​ ಅನ್ನು ನಾಯಕತ್ವದಿಂದ ಕಿತ್ತುಬಿಸಾಡಬೇಕು ಎಂದೆಲ್ಲ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಈ ಮಧ್ಯೆ, ಪಾಂಡ್ಯ ಬೆನ್ನಿಗೆ ನಿಂತ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್​ ತಿವಾರಿ, ತಂಡದ ಸೋಲಿಗೆ ಹಾರ್ದಿಕ್​ ಒಬ್ಬರನ್ನೇ ದೂಷಿಸುವುದು ಸರಿಯಲ್ಲ ಎಂದಿದ್ದಾರೆ.
ಕ್ರಿಕ್​ಬಜ್​ ಜೊತೆ ಮಾತನಾಡಿದ ತಿವಾರಿ, ಮುಂಬೈ ಇಂಡಿಯನ್ಸ್ ಸೋಲಿಗೆ ಹಾರ್ದಿಕ್​ ಪಾಂಡ್ಯ ಮಾತ್ರ ಜವಾಬ್ದಾರರಲ್ಲ. ಇಡೀ ತಂಡವೇ ಇದಕ್ಕೆ ಕಾರಣ. ಟೀಮ್​ನ ಸಹ ಆಟಗಾರರಿಂದ ಉತ್ತಮ ಸಾಥ್​ ಸಿಕ್ಕಿದರೆ, ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಸೋಲಿನಿಂದ ಮಂಕಾಗಿ ಕೂತಿರುವ ಹಾರ್ದಿಕ್​ಗೆ ಯಾರೊಬ್ಬರಿಂದಲೂ ಸಪೋರ್ಟ್​ ಇಲ್ಲ ಎಂದರು.
ಹೌದು, ಕ್ಯಾಪ್ಟನ್​ ರೋಲ್​ ಇಲ್ಲಿ ತುಂಬಾ ಮುಖ್ಯ. ನನ್ನ ಪ್ರಕಾರ, ಹಾರ್ದಿಕ್​ ಉತ್ತಮವಾಗಿ ಆಡಿಲ್ಲ. ಅದನ್ನು ಒಪ್ಪಿಕೊಳ್ಳೋಣ. ಆದರೆ ಉಳಿದ ಆಟಗಾರರು ಸಹ ಆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಅಲ್ಲವೇ? ಇದಕ್ಕೆ ಉದಾಹರಣೆ, ಸೂರ್ಯಕುಮಾರ್​ ಯಾದವ್​ ಕಳಪೆ ಫಾರ್ಮ್​ನಲ್ಲಿದ್ದಾರೆ. ಅವರಿಂದ ಒಂದೊಳ್ಳೆ ಪ್ರದರ್ಶನ ಬಂದಿಲ್ಲ. ಇನ್ನು ತಿಲಕ್​ ವರ್ಮಾ ಒಂದು ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ ಚೇತರಿಸಿಕೊಂಡಿದ್ದಾರೆ. ಹೀಗಿರುವಾಗ, ಹೇಗೆ ನೀವು ಗೆಲುವಿನ ಫಲಿತಾಂಶ ನೋಡಲು ಸಾಧ್ಯ? ನಿಜಕ್ಕೂ ಇದು ಬಹಳ ಬೇಸರ ಮೂಡಿಸುತ್ತೆ ಎಂದು ಹೇಳಿದರು,(ಏಜೆನ್ಸೀಸ್).