2025ರ ಸಾಲಿನಲ್ಲಿ ಖೇಲ್ರತ್ನವಿಲ್ಲ! 17 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ
ನವದೆಹಲಿ: ಹಲವು ತಿಂಗಳುಗಳಿಂದ ಘೋಷಣೆಯಾಗದೆ ಬಾಕಿ ಉಳಿದಿದ್ದ 2025ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಕೇಂದ್ರ ಕ್ರೀಡಾ ಸಚಿವಾಲಯ ಕೊನೆಗೂ ಮಂಗಳವಾರ ಪ್ರಕಟಿಸಿದೆ. ಈ ಬಾರಿ ಯಾರಿಗೂ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿಲ್ಲ. ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್, ಬ್ಯಾಡ್ಮಿಂಟನ್ ಡಬಲ್ಸ್ ತಾರೆಯರಾದ ಗಾಯತ್ರಿ ಗೋಪಿಚಂದ್, ತ್ರಿಸಾ ಜೋಲಿ ಮತ್ತು ಅಥ್ಲೀಟ್ ತೇಜಸ್ವಿನ್ ಶಂಕರ್ ಸಹಿತ 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ (
) ಪ್ರಕಟಿಸಲಾಗಿದೆ. ಕರ್ನಾಟಕದ ಮಾಜಿ ುಟ್ಬಾಲ್ ಆಟಗಾರ ಐ. ಅರುಮೈನಾಯಗಂ ಜೀವಮಾನ ಸಾಧನೆಗಾಗಿ ಅರ್ಜು ಪ್ರಶಸ್ತಿ ಪಡೆದಿದ್ದಾರೆ.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿಯು 6 ತಿಂಗಳ ಹಿಂದೆಯೇ ಶಿಾರಸು ಪಟ್ಟಿಯನ್ನು ಸಲ್ಲಿಸಿತ್ತು. ಸುಪ್ರೀಂ ಕೊರ್ಟ್ ನಿವೃತ್ತ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಸಾರಥ್ಯದ ಆಯ್ಕೆ ಸಮಿತಿಯು ಹಾಕಿ ತಾರೆ ಹಾರ್ದಿಕ್ ಹೆಸರನ್ನು ಖೇಲ್ರತ್ನ ಪ್ರಶಸ್ತಿಗೆ ಶಿಾರಸು ಮಾಡಿತ್ತು. ಆದರೆ ಕ್ರೀಡಾ ಸಚಿವಾಲಯ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ಅವರ ಹೆಸರಿಲ್ಲ. 1991&92ರಲ್ಲಿ ಆರಂಭಗೊಂಡ ಖೇಲ್ರತ್ನ ಪ್ರಶಸ್ತಿಯನ್ನು ಯಾರಿಗೂ ನೀಡದಿರುವ 3ನೇ ದೃಷ್ಟಾಂತ ಇದಾಗಿದೆ. ಈ ಮುನ್ನ 2008 ಮತ್ತು 2014ರಲ್ಲಿ ಯಾರಿಗೂ ಖೇಲ್ರತ್ನ ನೀಡಲಾಗಿರಲಿಲ್ಲ. 2021ರಲ್ಲಿ ಸರ್ವಾಧಿಕ 12 ಕ್ರೀಡಾಪಟುಗಳಿಗೆ ಖೇಲ್ರತ್ನ ನೀಡಲಾಗಿತ್ತು.
ಅರ್ಜುನ ಪ್ರಶಸ್ತಿಗೂ ಆಯ್ಕೆ ಸಮಿತಿಯು 24 ಕ್ರೀಡಾಪಟುಗಳ ಹೆಸರನ್ನು ಶಿಾರಸು ಮಾಡಿತ್ತು. ಈ ಪೈಕಿ 17 ಹೆಸರುಗಳನ್ನಷ್ಟೇ ಕ್ರೀಡಾ ಸಚಿವಾಲಯ ಅಂಗೀಕರಿಸಿದೆ. ಆಯ್ಕೆ ಸಮಿತಿ ಶಿಾರಸು ಮಾಡಿದ ಬಳಿಕವೂ ಕ್ರೀಡಾ ಸಚಿವಾಲಯ ಈ ಪಟ್ಟಿಯನ್ನು ಮರು ಮೌಲ್ಯಮಾಪನ ಮಾಡಿ ಯೋಗ್ಯರಿಗೆ ಮಾತ್ರ ಪ್ರಶಸ್ತಿ ವಿತರಿಸುವ ಮೂಲಕ ಅದರ ಪ್ರತಿಷ್ಠೆಯನ್ನು ಕಾಪಾಡಲು ನಿರ್ಧರಿಸಿದ್ದರಿಂದ ಪುರಸತರ ಘೋಷಣೆ ವಿಳಂಬಗೊಂಡಿದೆ. ಈ ಬಾರಿ ಯಾವ ಕ್ರಿಕೆಟಿಗರಿಗೂ ಅರ್ಜುನ ಪ್ರಶಸ್ತಿ ನೀಡಲಾಗಿಲ್ಲ. 2023ರಲ್ಲಿ ಕೊನೆಯದಾಗಿ ವೇಗಿ ಮೊಹಮದ್ ಶಮಿ ಅರ್ಜುನ ಪ್ರಶಸ್ತಿ ಪಡೆದ ಕ್ರಿಕೆಟಿಗರಾಗಿದ್ದಾರೆ.
ಮಹಿಳಾ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯರೆನಿಸಿದ 19 ವರ್ಷದ ದಿವ್ಯಾ ದೇಶಮುಖ್, 2024ರ ಚೆಸ್ ಒಲಿಂಪಿಯಾಡ್ ಗೆದ್ದ ಭಾರತ ತಂಡದ ಭಾಗವೂ ಆಗಿದ್ದರು. 2023ರ ಏಷ್ಯನ್ ಗೇಮ್ಸ್ನಲ್ಲಿ ರಜತ ಗೆದ್ದಿದ್ದ ಡೆಕಾಥ್ಲಾನ್ ಪಟು ತೇಜಸ್ವಿನ್ ಶಂಕರ್ ಇತ್ತೀಚೆಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಜಯಿಸಿ ಇತಿಹಾಸ ಬರೆದಿದ್ದರು. ಬ್ಯಾಡ್ಮಿಂಟನ್ ದಿಗ್ಗಜ ಪುಲ್ಲೇಲಾ ಗೋಪಿಚಂದ್ 1999ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದರೆ, ಇದೀಗ 27 ವರ್ಷಗಳ ಬಳಿಕ ಅವರ ಪುತ್ರಿ ಗಾಯತ್ರಿ ಗೋಪಿಚಂದ್ ಈ ಗೌರವ ಸ್ವೀಕರಿಸುತ್ತಿದ್ದಾರೆ. ಇತ್ತೀಚೆಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ರಜತ ಪದಕ ಗೆದ್ದಿದ್ದ ಬಾಕ್ಸರ್ ನರೇಂದರ್ ಬೆರ್ವಾಲ್ ಕೂಡ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2024ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತ 32 ಕ್ರೀಡಾಪಟುಗಳ ಪೈಕಿ 17 ಮಂದಿ ಪ್ಯಾರಾ ಕ್ರೀಡಾಪಟುಗಳಾಗಿದ್ದರು. ಆದರೆ ಈ ಬಾರಿ ಕೇವಲ ಇಬ್ಬರು ಪ್ಯಾರಾ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ. 3 ಕೋಚ್ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿದೆ. ಇಬ್ಬರು ಮಾಜಿ ಕೋಚ್ಗಳಿಗೆ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಘೋಷಿಸಲಾಗಿದೆ.
ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಯು ಪ್ರತಿಮೆಯ ಜತೆಗೆ ತಲಾ 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ತಿಳಿಸಲಾಗಿಲ್ಲ. ಆದರೆ ಆಗಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನದಂದು ಪ್ರದಾನ ಮಾಡುವ ನಿರೀೆ ಇದೆ. ಹಾಲಿ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ, ಸೆಪ್ಟೆಂಬರ್&ಅಕ್ಟೋಬರ್ ತಿಂಗಳ ಏಷ್ಯನ್ ಗೇಮ್ಸ್ ಮತ್ತು ಪ್ಯಾರಾ ಏಷ್ಯಾಡ್ ನಂತರ ಆರಂಭವಾಗುವ ಸಾಧ್ಯತೆ ಇದೆ.
2025ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ:
ಅರ್ಜುನ: ಗಾಯತ್ರಿ ಗೋಪಿಚಂದ್, ತ್ರಿಸಾ ಜೋಲಿ (ಬ್ಯಾಡ್ಮಿಂಟನ್), ತೇಜಸ್ವಿನ್ ಶಂಕರ್, ಮುಹಮ್ಮದ್ ಅಜ್ಮಲ್, ಪ್ರಿಯಾಂಕಾ ಗೋಸ್ವಾಮಿ (ಅಥ್ಲೆಟಿಕ್ಸ್), ನರೇಂದರ್ (ಬಾಕ್ಸಿಂಗ್), ವಿದಿತ್ ಗುಜರಾತಿ, ದಿವ್ಯಾ ದೇಶಮುಖ್ (ಚೆಸ್), ಧನುಷ್ ಶ್ರೀಕಾಂತ್ (ಕಿವುಡರ ಶೂಟಿಂಗ್), ರಾಜ್ಕುಮಾರ್ ಪಾಲ್, ಲಾಲ್ರೆಮ್ಸಿಯಾಮಿ (ಹಾಕಿ), ಸುರ್ಜೀತ್, ಪೂಜಾ (ಕಬಡ್ಡಿ), ರುದ್ರಾಂಶ್ ಖಂಡೆಲ್ವಾಲ್ (ಪ್ಯಾರಾ ಶೂಟಿಂಗ್), ಅಖಿಲ್ ಶೆರಾನ್ (ಶೂಟಿಂಗ್), ಏಕ್ತಾ ಭ್ಯಾನ್ (ಪ್ಯಾರಾ ಅಥ್ಲೆಟಿಕ್ಸ್), ಅರವಿಂದ್ ಸಿಂಗ್ (ರೋಯಿಂಗ್).
ಅರ್ಜುನ (ಜೀವಮಾನ ಸಾಧನೆ): ಐ ಅರುಮೈನಾಯಗಂ (ಫುಟ್ಬಾಲ್).
ದ್ರೋಣಾಚಾರ್ಯ: ಪರ್ವೀರ್ ಸಿಂಗ್, ಛೋಟೆ ಲಾಲ್ ಯಾದವ್, ನೇಹಾ ಚವನ್.
ದ್ರೋಣಾಚಾರ್ಯ (ಜೀವಮಾನ ಸಾಧನೆ): ಧಮೇರ್ಂದರ್ ಯಾದವ್, ವಿರೇಂದರ್ ಕುಮಾರ್.