IND vs NZ T20: ಇಂದು ಹ್ಯಾಮಿಲ್ಟನ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಐದನೇ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ 7 ವಿಕೆಟ್ಗಳಿಂದ ಗೆದ್ದು ಬೀಗುವ ಮೂಲಕ 2-3 ಅಂತರದಲ್ಲಿ ಟೀಮ್ ಇಂಡಿಯಾ ಎದುರು ವೈಟ್ ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ಸಂಜು ಸ್ಯಾಮ್ಸನ್ (4) ಮತ್ತು ಅಭಿಷೇಕ್ ಶರ್ಮಾ (1) ಉತ್ತಮ ಓಪನಿಂಗ್ ಸಿಗಲಿಲ್ಲ. ನಂತರ ಕಣಕ್ಕಿಳಿದ ಇಶಾನ್ ಕಿಶನ್ (61 ರನ್, 32 ಎಸೆತಗಳು, 5 ಬೌಂಡರಿಗಳು, 5 ಸಿಕ್ಸರ್ಗಳು) ಮತ್ತು ನಾಯಕ ಶ್ರೇಯಸ್ ಅಯ್ಯರ್ (50 ರನ್, 23 ಎಸೆತಗಳು, 3 ಬೌಂಡರಿಗಳು, 4 ಸಿಕ್ಸರ್ಗಳು) ಸ್ಫೋಟಕ ಅರ್ಧಶತಕಗಳನ್ನು ಸಿಡಿಸಿದ ಪರಿಣಾಮ, ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ಗಳನ್ನು ಕಲೆಹಾಕಿತು.
ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ಗೆ ಫಿನ್ ಆಲೆನ್ ಕೇವಲ 2 ರನ್ಗೆ ಔಟ್ ಆಗುವ ಮೂಲಕ ತಂಡಕ್ಕೆ ಬಿಗ್ ಶಾಕ್ ನೀಡಿದರು. ಆದರೆ, ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಟಿಮ್ ಸೈಫರ್ಟ್, ಏಕಾಂಗಿಯಾಗಿ 50 ಎಸೆತಗಳಲ್ಲಿ 93 ರನ್ಗಳನ್ನು (11 ಬೌಂಡರಿ, 5 ಸಿಕ್ಸರ್) ಬಾರಿಸಿದರು. ಆದರೆ, ಶತಕ ದಾಖಲಿಸುವಲ್ಲಿ ಎಡವಿದರು. ಅವರ ಬಳಿಕ ಕ್ರೀಸ್ಗೆ ಅಂಟಿ ನಿಂತ ಗ್ಲೆನ್ ಫಿಲಿಪ್ಸ್, ಅಜೇಯ 65 ರನ್ (8 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನು, ತಂಡದ ಪರ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ 4 ಓವರ್ ಮಾಡಿದ 41 ರನ್ಗಳನ್ನು ನೀಡಿದರು. ಆದರೆ, ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಉಳಿದಂತೆ ಅರ್ಷದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು. ಇದು ತಂಡದ ಬೌಲಿಂಗ್ ಪ್ರದರ್ಶನದಲ್ಲಿ ಅಂತಹ ಭರ್ಜರಿ ಪ್ರದರ್ಶನ ಏನು ನಡೆಯಲಿಲ್ಲ ಎಂಬುದನ್ನು ಒತ್ತಿ ಹೇಳಿದೆ.