ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ
- ಜ.21ರಿಂದ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ
- ತಂಡದ ಸ್ಟಾರ್ ಆಲ್‌ರೌಂಡರ್ ಇಂಜುರಿಯಿಂದ ಅಲಭ್ಯ
- ಸ್ಟಾರ್ ಆಲ್‌ರೌಂಡರ್ ಸ್ಥಾನಕ್ಕೆ ಯುವ ವೇಗಿ
ನಾಗ್ಪುರ್: ಏಕದಿನ ಸರಣಿಯನ್ನು ಟೀಮ್ ಇಂಡಿಯಾದಿಂದ ಕಸಿದ ನ್ಯೂಜಿಲೆಂಡ್ ತಂಡ, ಇದೀಗ ಟಿ20 ಸರಣಿಯನ್ನೂ ವಶಪಡಿಸಿಕೊಳ್ಳಲು ಸಜ್ಜಾಗುತ್ತಿದೆ. ಈ ಮಧ್ಯೆ, ತಂಡದ ಸ್ಟಾರ್ ಆಲ್‌ರೌಂಡರ್ ಅಲಭ್ಯತೆ ಕಾಡಿದ್ದು, ಅವರ ಸ್ಥಾನಕ್ಕೆ ಯುವ ವೇಗಿಯನ್ನು ಕರೆದುಕೊಳ್ಳಲಾಗಿದೆ.
ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಬುಧವಾರದಿಂದ (ಜ.21) ಆರಂಭವಾಗಲಿದ್ದು, ಮೊದಲ ಪಂದ್ಯ ನಾಗ್ಪುರದ ವಿಧರ್ಭ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ವಿರುದ್ಧದ ಮೊದಲ ಏಕದಿನ ಸರಣಿಯ ಗೆಲುವಿನ ಲಯದಲ್ಲಿರುವ ಕಿವೀಸ್ ಪಡೆಗೆ ತಮ್ಮ ಆಟಗಾರನ ಅಲಭ್ಯತೆ ಬಿಗ್ ಶಾಕ್ ನೀಡಿದೆ.
ಬ್ರೇಸ್‌ವೆಲ್ ಅಲಭ್ಯ
ನ್ಯೂಜಿಲೆಂಡ್ ತಂಡದ ಏಕದಿನ ನಾಯಕ ಮೈಕೆಲ್ ಬ್ರೇಸ್‌ವೆಲ್ ಗಾಯದ ಕಾರಣದಿಂದಾಗಿ ಮೊದಲ ಮೂರು ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಕುರಿತು ಈಗಾಗಲೇ ಕಿವೀಸ್ ಮ್ಯಾನೇಜ್ಮೆಂಟ್ ಸ್ಪಷ್ಟಪಡಿಸಿದೆ. ಟೀಮ್ ಇಂಡಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅವರು ಇಂಜುರಿಗೆ ಒಳಗಾದ ಹಿನ್ನೆಲೆ ಟಿ20 ಸರಣಿಯಲ್ಲಿ ಆಡುತ್ತಿಲ್ಲ ಎಂದಿದೆ. ಅವರು ಚೇತರಿಸಿಕೊಂಡು ತಂಡಕ್ಕೆ ಹಿಂತಿರುಗುವವರೆಗೆ ಅವರ ಸ್ಥಾನದಲ್ಲಿ ಯುವ ವೇಗಿ ಕ್ರಿಶ್ಚಿಯನ್ ಕ್ಲಾರ್ಕ್ ಮೊದಲ ಮೂರು ಪಂದ್ಯಗಳನ್ನಾಡಲಿದ್ದಾರೆ ಎನ್ನಲಾಗಿದೆ.
ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಬೆವನ್ ಜೇಕಬ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಇಶ್ ಸೋಧಿ, ಕ್ರಿಶ್ಚಿಯನ್ ಕ್ಲಾರ್ಕ್ (ಮೊದಲ 3 ಪಂದ್ಯಗಳಿಗೆ).
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಮೊದಲ ಮೂರು ಟಿ20), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಇಶಾನ್ ಕಿಶನ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ.