ಬೆನ್​ ಸ್ಟೋಕ್ಸ್​ಗೆ ಸೋಲಿನ ವಿದಾಯ 
ಕ್ರಿಕೆಟ್

ಬೆನ್​ ಸ್ಟೋಕ್ಸ್​ಗೆ ಸೋಲಿನ ವಿದಾಯ

ನಾಟಿಂಗ್​ಹ್ಯಾಂ: ನ್ಯೂಜಿಲೆಂಡ್​ ತಂಡ ಆತಿಥೇಯ ಇಂಗ್ಲೆಂಡ್​ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ 160 ರನ್​ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ನ್ಯೂಜಿಲೆಂಡ್​ 2-1ರಿಂದ ಸರಣಿ ಗೆದ್ದುಕೊಂಡಿತು. ಇಂಗ್ಲೆಂಡ್​ ನಾಯಕ ಬೆನ್​ ಸ್ಟೋಕ್ಸ್​ (Ben Stokes) 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತೀಜಿವನಕ್ಕೆ ಸೋಲಿನ ವಿದಾಯ ಹೇಳಿದರು.

373 ರನ್​ ಸವಾಲಿಗೆ ಪ್ರತಿಯಾಗಿ 4 ವಿಕೆಟ್​ಗೆ 103 ರನ್​ಗಳಿಂದ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್​ ಭೋಜನ ವಿರಾಮದ ಬಳಿಕ 212 ರನ್​ಗಳಿಗೆ ಆಲೌಟ್​ ಆಯಿತು. ಕಿವೀಸ್​ 25 ವರ್ಷಗಳ ಬಳಿಕ ಇಂಗ್ಲೆಂಡ್​ನಲ್ಲಿ ಸರಣಿ ಜಯಿಸಿತು. ಭಾನುವಾರ 4ನೇ ದಿನದಾಟದ ನಡುವೆಯೇ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದ 35 ವರ್ಷದ ಸ್ಟೋಕ್ಸ್​, ಆರಂಭಿಕರಾಗಿ ಆಡಿದ ತನ್ನ ಕೊನೇ ಇನಿಂಗ್ಸ್​ನಲ್ಲಿ 30 ರನ್​ಗೆ ಔಟಾಗಿದ್ದರು.

ಸ್ಟೋಕ್ಸ್​ ಇನ್ನು ಕೌಂಟಿಯಲ್ಲಿ ಡರ್​ಹ್ಯಾಂ ಪರ ಮತ್ತು ಇತರ ್ರಾಂಚೈಸಿ ಟಿ20 ಲೀಗ್​ಗಳಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಖಚಿತಪಡಿಸಿದ್ದಾರೆ.