ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ
- ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹೀಗೂ ಮಾಡ್ಬೇಕಾ?
- ಅಭಿಮಾನಿಗಳಿಲ್ಲದ ಪಿಎಸ್ಎಲ್ ಸಮಸ್ಯೆಗೆ ಭಾರತದ ಸನ್ನಿವೇಶ ಉದಾಹರಣೆ
- ನಾಚಿಕೆಯಿಲ್ಲದ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ವಿರುದ್ಧ ನೆಟ್ಟಿಗರು ಛೀಮಾರಿ
ಕರಾಚಿ: ಐಪಿಎಲ್ ಸಮಯಕ್ಕೆ ಪಿಎಸ್ಎಲ್ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಕಿಂಚಿತ್ತು ನಾಚಿಕೆ, ಮಾನ, ಮರ್ಯಾದೆ ಇಲ್ಲ ಅನ್ನೋದಕ್ಕೆ ಅವರ ಇತ್ತೀಚಿನ ಹೇಳಿಕೆಗೆಳೇ ಜ್ವಲಂತ ಸಾಕ್ಷಿ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಭಾರತದಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಎಳೆದು ತರುವ ಸಚಿವನಿಗೆ ಸದ್ಯ ನೆಟ್ಟಿಗರ ಛೀಮಾರಿ ಹಾಕುತ್ತಿದ್ದಾರೆ.
ಪಿಸಿಬಿ ಮುಖ್ಯಸ್ಥ ಹಾಗೂ ಪಾಕ್ನ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪಂದ್ಯಗಳನ್ನು ಐಪಿಎಲ್ಗೆ ಟಕ್ಕರ್ ಕೊಡಲು ನಡೆಸುತ್ತಿರುವುದು ಬಹುತೇಕರಿಗೆ ಗೊತ್ತೇ ಇದೆ. ಅದಕ್ಕೆಂದೇ, ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯಕ್ಕೆ ತರಾತುರಿಯಲ್ಲಿ ಪ್ರಾರಂಭಿಸಿರುವ ನಖ್ವಿ, ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದ ದೇಶದಲ್ಲಿ ವಿಪರೀತ ಇಂಧನ ಬಿಕ್ಕಟ್ಟು ಕಾಡುತ್ತಿರುವ ಕಾರಣ, ಸ್ಟೇಡಿಯಂಗೆ ಅಭಿಮಾನಿಗಳನ್ನು ಸೇರಿಸುತ್ತಿಲ್ಲ.
ಎರಡೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್ಗೆ ಜನರು ದಯವಿಟ್ಟು ಬರಬೇಡಿ. ಮೊದಲೇ ಇಂಧನ ಸಮಸ್ಯೆಯಿದೆ. ನೀವೆಲ್ಲರೂ ಬಂದರೆ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗುತ್ತೆ ಎಂದೇಳುವ ಮೂಲಕ ಒಬ್ಬೇ ಒಬ್ಬ ಕ್ರಿಕೆಟ್ ಫ್ಯಾನ್ಗೂ ಒಳಗೆ ಪ್ರವೇಶಿಸಲು ಅನುಮತಿ ನೀಡದ ನಖ್ವಿ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಭಾರತವನ್ನು ಎಳೆದು ತಂದಿರುವುದು ಸದ್ಯ ನೆಟ್ಟಿಗರನ್ನು ಕೆರಳಿಸಿದೆ.
ಸ್ಟೇಡಿಯಂಗೆ ಏಕೆ ಕ್ರಿಕೆಟ್ ಅಭಿಮಾನಿಗಳನ್ನು ನೀವು ಸೇರಿಸುತ್ತಿಲ್ಲ? ಯಾವಾಗ ಅವರಿಗೆಲ್ಲ ಪಂದ್ಯ ನೋಡುವ ಅವಕಾಶ ಕಲ್ಪಿಸಿಕೊಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ನಖ್ವಿ, ಇಂಧನ ಬಿಕ್ಕಟ್ಟಿನ ಹಿನ್ನೆಲೆ ಇಂತಹ ನಿರ್ಧಾರ ಕೈಗೊಂಡಿದ್ದೇವೆ. ಭಾರತದಲ್ಲಿಯೂ ಸಹ ಪೆಟ್ರೋಲ್ ಸಮಸ್ಯೆಗಳಿವೆ. ಅಲ್ಲಿಯೂ ಜನರು ಬಂಕ್ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ಎಂದು ಸುಖಾಸುಮ್ಮನೆ ಭಾರತವನ್ನು ಎಳೆದು ತಂದಿರುವುದು ಹಲವರ ಪಿತ್ತವನ್ನು ನೆತ್ತಿಗೇರಿಸಿದೆ. ಮೊಹ್ಸಿನ್ ಮಾತನಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಅನೇಕರು ಗೆಲ್ಲದ ಟ್ರೋಫಿ ಕದ್ದ ಕಳ್ಳ ನೀನು ಎಂದೆಲ್ಲ ಛೀಮಾರಿ ಹಾಕಿರುವುದು ಹಾಸ್ಯಸ್ಪದ,(ಏಜೆನ್ಸೀಸ್).