ನೀನಾ ವೆಂಕಟೇಶ್, ಋಜುಲಾ, ತನಿಷಿ ಗುಪ್ತಾ ಮತ್ತು ಧಿನಿಧಿ ದೇಸಿಂಘು ಒಳಗೊಂಡ ರಿಲೇ ತಂಡ
ಬೆಂಗಳೂರು: ಅಹಮದಾಬಾದ್‌ನಲ್ಲಿ ಮಂಗಳವಾರ ಆರಂಭಗೊಂಡ 79ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡ 4*100 ಫ್ರೀಸ್ಟೈಲ್ ರಿಲೇ ವಿಭಾಗದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಸ್ವರ್ಣ ಪದಕ ಗೆದ್ದುಕೊಂಡಿದೆ. ಇದರೊಂದಿಗೆ ಕೂಟದ ಮೊದಲ ದಿನ 3 ಚಿನ್ನ, 1 ಬೆಳ್ಳಿ, 2 ಕಂಚು ಸಹಿತ ಒಟ್ಟು 6 ಪದಕ ಸಾಧನೆ ಮಾಡಿದೆ.
ನೀನಾ ವೆಂಕಟೇಶ್, ಋಜುಲಾ, ತನಿಷಿ ಗುಪ್ತಾ ಮತ್ತು ಧಿನಿಧಿ ದೇಸಿಂಘು ಒಳಗೊಂಡ ರಿಲೇ ತಂಡ
3 ನಿಮಿಷ 53.45 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ನೂತನ ರಾಷ್ಟ್ರೀಯ ದಾಖಲೆ ಬರೆಯಿತು. ಮಹಿಳೆಯರ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಲಿನೇಷಾ ಎ.ಕೆ 33.51 ಸೆಕೆಂಡ್‌ಗಳಲ್ಲಿ ಗುರಿ ಕ್ರಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, 33.84 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದ ರಾಜ್ಯದವರೇ ಆದ ಎಸ್. ಲಕ್ಷ್ಯ ಕಂಚು ಜಯಿಸಿದರು. 1,500 ಫ್ರೀಸ್ಟೈಲ್‌ನಲ್ಲಿ ಶ್ರೀ ಚರಣಿ ತುಮು (17ನಿ,22.17ಸೆ) ಕಂಚು ಗೆದ್ದರು. ಪುರುಷರ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಆಕಾಶ್ ಮಣಿ 50.40 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರೆ, 200 ಮೆಡ್ಲೆಯಲ್ಲಿ ಶೋನ್ ಗಂಗೂಲಿ (2ನಿ, 05.32ಸೆ) ರಜತ ಪದಕಕ್ಕೆ ಮುತ್ತಿಕ್ಕಿದರು.