ಆರ್ಆರ್ ತಂಡದ ಆಟಗಾರರು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ
- ಬ್ಯಾಕ್ ಟು ಬ್ಯಾಕ್ ಎರಡು ಸೀಸನ್ಗಳಲ್ಲಿ ಕಳಪೆ ಪ್ರದರ್ಶನ
- ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಕೈಬಿಡಲು ಫ್ರಾಂಚೈಸಿ ನಿರ್ಧಾರ
- ರಾಜಸ್ಥಾನ ರಾಯಲ್ಸ್ ಜೊತೆಗೆ ಟ್ರೇಡ್ ಡೀಲ್, ಈ ಆಟಗಾರನಿಗೆ ಬೇಡಿಕೆ
ನವದೆಹಲಿ: ಈ ವರ್ಷದ ಐಪಿಎಲ್ 19ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆ ಸ್ಥಾನದಲ್ಲಿ ಉಳಿಸಿದ ಕ್ಯಾಪ್ಟನ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿರುದ್ಧ ಅದ್ಯಾಕೋ ಟೀಮ್ ಮ್ಯಾನೇಜ್ಮೆಂಟ್ ಸಂಪೂರ್ಣ ಅಸಮಾಧಾನ ಹೊರಹಾಕಿದೆ. ಎಂ ತಂಡದ ನಾಯಕನಾಗಿ ಪಾಂಡ್ಯ ಜವಾಬ್ದಾರಿ ವಹಿಸಿಕೊಂಡ ದಿನದಿಂದಲೂ ಬಲಿಷ್ಠ ಟೀಮ್ಗಳಲ್ಲಿ ಒಂದಾಗಿದ್ದ ಮುಂಬೈ, ಪೈಪೋಟಿ ಕೊಡುವುದಿರಲಿ, ಅಂಕಪಟ್ಟಿಯ ಕೆಳ ಸ್ಥಾನಕ್ಕೆ ಬಂದು, ಎಕ್ಸಿಟ್ ಆಗುತ್ತಿರುವುದು ಸದ್ಯ ಫ್ರಾಂಚೈಸಿಯ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಈಗ ಹಾರ್ದಿಕ್ ಹೊರನೂಕುವಿಕೆಗೆ ದೊಡ್ಡ ಕಾರಣವೂ ಆಗಿದೆ.
ಗುಜರಾತ್ ಟೈಟಾನ್ಸ್ ತಂಡವನ್ನು ಒಂದು ಬಾರಿ ಚಾಂಪಿಯನ್ಸ್, ಇನ್ನೊಂದು ಫೈನಲ್ ಹಂತಕ್ಕೆ ಕೊಂಡೊಯ್ದಿದ್ದ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್ ನಾಯಕನಾದೆ ಮೇಲೆ, ತಂಡವನ್ನು ಪ್ಲೇಆಫ್ ಹಂತಕ್ಕೂ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಫ್ರಾಂಚೈಸಿಯ ಆಟಗಾರರು ತನ್ನೊಂದಿಗೆ ಉತ್ತಮ ಮಾತುಕತೆ, ಹೊಂದಾಣಿಕೆ ಹೊಂದಿಲ್ಲ ಎಂಬುದು ಪರೋಕ್ಷವಾಗಿ ಹಾರ್ದಿಕ್ ಮಾತಾಗಿದೆ. ಇನ್ನೊಂದೆಡೆ, ಡ್ರೆಸ್ಸಿಂಗ್ ರೂಮ್ ಭಿನ್ನಾಭಿಪ್ರಾಯಗಳಿಂದ ಮುಂಬೈ ಇಂಡಿಯನ್ಸ್ ಸಾಲು ಸಾಲು ಸೋಲುಗಳನ್ನು ಕಂಡಿತು ಎಂಬ ಸುದ್ದಿಗಳಿವೆ. ಅಸಲಿಗೆ, ಜಸ್ಪ್ರೀತ್ ಬುಮ್ರಾ ಮತ್ತು ಒಂದಷ್ಟು ಆಟಗಾರರು ಪಾಂಡ್ಯ ಮಾತು ಕೇಳಲು ಸಿದ್ಧವಿರಲಿಲ್ಲ. ಅದೇ ತಂಡದ ಸೋಲಿಗೆ ಮುಖ್ಯ ಕಾರಣವಾಯಿತು ಎನ್ನಲಾಗಿದೆ.
ವರದಿಗಳ ಪ್ರಕಾರ, ರಾಜಸ್ಥಾನ ರಾಯಲ್ಸ್ ತಂಡ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಜೊತೆ ಟ್ರೇಡ್ ಡೀಲ್ ಮಾಡಿಕೊಳ್ಳಲು ಮುಂದಾಗಿದೆ ಎಂಬ ಸುದ್ದಿಗಳು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಾರ್ದಿಕ್ರನ್ನು ಕ್ಯಾಪ್ಟನ್ಸಿಯಿಂದ ತೆಗೆಯುವುದಲ್ಲ, ಬದಲಿಗೆ ತಂಡದಿಂದಲೇ ಹೊರನೂಕಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಜ್ಜಾಗಿದೆ. ಇದಕ್ಕಾಗಿ, ಆರ್ಆರ್ ಜೊತೆಗೆ ಟ್ರೇಡ್ ಡೀಲ್ಗೆ ಮಾತುಕತೆ ನಡೆಸಿದ್ದು, ಓಪನರ್ ಯಶಸ್ವಿ ಜೈಸ್ವಾಲ್ರನ್ನು ಹಾರ್ದಿಕ್ ಬದಲಿಗೆ ಕಳುಹಿಸಿಕೊಡುವಂತೆ ಎಂಐ ಬೇಡಿಕೆಯಿಟ್ಟಿದೆ.
ಕಳೆದ ವರ್ಷ ಸಂಜು ಸ್ಯಾಮ್ಸನ್ ಆರ್ಆರ್ನಿಂದ ನೇರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೋದ ಬಳಿಕ ಯಶಸ್ವಿ ಜೈಸ್ವಾಲ್ಗೆ ತಂಡದ ಮುಂದಿನ ಕ್ಯಾಪ್ಟನ್ ಆಗುವ ಬಿಗ್ ಚಾನ್ಸ್ ಇತ್ತು. ಆದರೆ, ಮ್ಯಾನೇಜ್ಮೆಂಟ್ ಆ ಅವಕಾಶವನ್ನು ರಿಯಾನ್ ಪರಾಗ್‌ಗೆ ನೀಡುವ ಮೂಲಕ ರಾಜಸ್ಥಾನ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿತು. ಪ್ರಸ್ತುತ, ಆರ್ಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಟ್ರೇಡ್ ಡೀಲ್ ತೆರೆಮರೆಯಲ್ಲಿ ನಡೆಯುತ್ತಿದ್ದು, ಯಾರ ಜಾಗಕ್ಕೆ ಯಾರು ಬರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).