- ಇಂದು (ಏ.07) ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಐಪಿಎಲ್ ಪಂದ್ಯ
- ಐಪಿಎಲ್ 19ನೇ ಆವೃತ್ತಿಯಲ್ಲಿ 'ಬೇಬಿ ಬಾಸ್' ಸ್ಫೋಟಕ ಬ್ಯಾಟಿಂಗ್
- 15 ವರ್ಷದ ಬ್ಯಾಟರ್ಗೆ ಬೌಲ್ ಮಾಡಲು ಅಂತಾರಾಷ್ಟ್ರೀಯ ಬೌಲರ್ಗಳೇ ಯೋಚಿಸುವಂತ ಪರಿಸ್ಥಿತಿ
- ಆರ್‌ಆರ್ ಯುವ ಬ್ಯಾಟರ್ ಕುರಿತು ಮುಂಬೈ ಇಂಡಿಯನ್ಸ್ ಕೋಚ್ ಅಚ್ಚರಿ ಹೇಳಿಕೆ
RR vs MI: ಇಂದು (ಏ.07) ಅಸ್ಸಾಂನ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಐಪಿಎಲ್ 19ನೇ ಆವೃತ್ತಿಯಲ್ಲಿ ಎದುರಾಳಿ ತಂಡದ ಬೌಲರ್ಗಳಲ್ಲಿ ನಡುಕ ಹುಟ್ಟಿಸಿರುವ 15 ವರ್ಷದ ವೈಭವ್ ಸೂರ್ಯವಂಶಿ, ಅಂತಾರಾಷ್ಟ್ರೀಯ ಬೌಲರ್ಗಳೇ ಬೌಲಿಂಗ್ ಮಾಡಲು ಯೋಚಿಸುವಂತೆ ಮಾಡಿದ್ದಾರೆ. ಇದನ್ನೇ ಮುಂದಿಟ್ಟು ಮಾತನಾಡಿರುವ ಮುಂಬೈ ಕೋಚ್, ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ.
ವಿಶ್ವದ ಬೆಸ್ಟ್ ಬೌಲರ್ ಎಂದೇ ಖ್ಯಾತಿ ಗಳಿಸಿರುವ ಜಸ್ಪ್ರೀತ್ ಬುಮ್ರಾ, ಮುಂಬೈ ಇಂಡಿಯನ್ಸ್ ತಂಡದ ಅದ್ಭುತ ಶಕ್ತಿ. ಇವರ ಬೌಲಿಂಗ್ಗೆ ಆಡುವುದು ಎಂಥಾ ಬ್ಯಾಟರ್ಗಾದರೂ ಕಷ್ಟಸಾಧ್ಯವೇ. ಹೀಗಿರುವಾಗ, ಬೇಬಿ ಬಾಸ್ ಇಂದಿನ ಪಂದ್ಯದಲ್ಲಿ ಹೇಗೆ ಆಡುತ್ತಾರೆ? ಸಿಕ್ಸರ್, ಬೌಂಡರಿಗಳನ್ನು ಹರಿಸುತ್ತಾರೆ? ಎಂಬ ಕುತೂಹಲ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡತೊಡಗಿದೆ.
ಮುಂಬೈ ಕೋಚ್ ಪರಾಸ್ ಮಾಂಬ್ರೆ ಮಾತನಾಡಿ, ವೈಭವ್ ಸೂರ್ಯವಂಶಿ ಅವರ ಆಟವು ನನಗೆ ಹೊಸದೇನಲ್ಲ. ಇದು ವೈಭವ್ಗೆ ಎರಡನೇ ಐಪಿಎಲ್ ಸೀಸನ್. ಆದಾಗ್ಯೂ, ಅವರು ತಮ್ಮ ತಂಡದ ಪರ ಉತ್ತಮವಾಗಿಯೇ ಆಡುತ್ತಿದ್ದಾರೆ. ಆರ್‌ಆರ್ ತಂಡಕ್ಕೆ ಅಮೂಲ್ಯ ಆಟಗಾರ ಎಂದರೆ ತಪ್ಪಾಗಲಾರದು. ಅದರ ಬಗ್ಗೆ ಯಾವುದೇ ಸಂದೇಹವೂ ಇಲ್ಲ. ಆದರೆ, ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ರೀತಿ ನಮಗೆ ಹೊಸದಲ್ಲ. ಇದರ ಬಗ್ಗೆ ಯಾವುದೇ ಚಿಂತೆಯೂ ಇಲ್ಲ. ಬೇರೆ ಬ್ಯಾಟರ್ಗಳನ್ನು ಹೇಗೆ ಕಟ್ಟಿಹಾಕಬೇಕು ಎಂದು ಪ್ಲ್ಯಾನ್ ಮಾಡುತ್ತೇವೋ, ಅಂತೆಯೇ ಇವರನ್ನೂ ಯಾವ ರೀತಿ ಪೆವಿಲಿಯನ್ಗೆ ಕಳುಹಿಸಬೇಕು ಎಂಬುದನ್ನು ಚಿಂತಿಸಿದ್ದೇವೆ ಎಂದರು.
ಐಪಿಎಲ್ ಟೂರ್ನಿಯಲ್ಲಿ ಇಲ್ಲಿಯವರೆಗೆ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು 30 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 14 ಪಂದ್ಯಗಳನ್ನು ಆರ್‌ಆರ್ ಗೆದ್ದಿದೆ. ಉಳಿದ 16 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿದೆ,(ಏಜೆನ್ಸೀಸ್).