ಪುಟ್ಟ ಅಭಿಮಾನಿ ಜೊತೆ ಮಹೇಂದ್ರ ಸಿಂಗ್ ಧೋನಿ
- ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ
- ಪಂದ್ಯ ನೋಡಲು ಬಂದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ
- ಪಾಪ್ ಕಾರ್ನ್ ಕೇಳಿದ ಧೋನಿ ವಿಡಿಯೋ ವೈರಲ್
MS Dhoni: ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಆಗಮಿಸಿರುವ ಟೀಮ್ ಇಂಡಿಯಾ ದಿಗ್ಗಜ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಎಂದಿನಂತೆ ತಮ್ಮ ತುಂಟತನದಿಂದ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ಪ್ರವಾಸವನ್ನು ಫಾಲೋ ಮಾಡುತ್ತಿರುವ ಕ್ಯಾಪ್ಟನ್ ಕೂಲ್, ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ನ ಮೊದಲ ಪಂದ್ಯಕ್ಕೆ ಆಗಮಿಸಿದ್ದಾರೆ. ಕ್ಯಾಮರಾಮನ್ ಕಣ್ಣಿಗೆ ಬಿದ್ದ ಧೋನಿ, ಸ್ಟ್ಯಾಂಡ್‌ನಲ್ಲಿ ಪುಟ್ಟ ಬಾಲಕನ ಪಕ್ಕದಲ್ಲಿ ಕುಳಿತು ಪಾಪ್ ಕಾರ್ನ್ ಕೇಳುತ್ತಿರುವ ದೃಶ್ಯ ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ಹರಿದಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಯುವ ಅಭಿಮಾನಿ ಜತೆಗೆ ಕುಳಿತು ತಿನ್ನುವ ಮೂಲಕ ನೀವು ಮತ್ತೊಮ್ಮೆ ಸರಳ ವ್ಯಕ್ತಿ ಎಂಬುದನ್ನು ಸಾಬೀತು ಮಾಡಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ.
ಆರಂಭದಲ್ಲಿ ಧೋನಿಗೆ ಪಾಪ್ ಕಾರ್ನ್ ಕೊಟ್ಟ ಬಾಲಕ, ಸ್ವಲ್ಪ ಸಮಯದ ಬಳಿಕ ಇನ್ನೊಂದು ಎಂದು ಕೇಳಿದ. ಇದಕ್ಕೆ, ಇಲ್ಲ ನನಗೆ ಸಾಕಾಯಿತು ಎನ್ನುವ ಧೋನಿಯ ಮಾತು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಪ್ರಸ್ತುತ, ಇಂಗ್ಲೆಂಡ್ ನೀಡಿರುವ 259 ರನ್ಗಳ ಗುರಿಯನ್ನು ಬೆನ್ನತ್ತಿರುವ ಟೀಮ್ ಇಂಡಿಯಾಗೆ ಆರಂಭಿಕ ಹಂತದಲ್ಲೇ ರೋಕೊ ಜೋಡಿಯ ವಿಕೆಟ್ಗಳು ದೊಡ್ಡ ಆಘಾತ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ಗೆ ಆರಂಭಿಕ ಬ್ಯಾಟರ್ ಬೆನ್ ಡಕೆಟ್ (43 ರನ್) ಉತ್ತಮ ಆರಂಭವನ್ನೇ ನೀಡಿದರು. ಆದರೆ, ಡಕೆಟ್ಗೆ ಸರಿಯಾದ ಸಾಥ್ ನೀಡದ ಜಾಕೆಬ್ ಬೆಥಲ್ ಕೇವಲ 14 ರನ್ಗೆ ಔಟ್ ಆದರು. ಅವರ ಬೆನ್ನಲ್ಲೇ ಕ್ರೀಸ್ಗಿಳಿದ ಕ್ಯಾಪ್ಟನ್ ಹ್ಯಾರಿ ಬ್ರೂಕ್ (1), ಜಾಸ್ ಬಟ್ಲರ್ (5), ಸ್ಯಾಮ್ ಕರನ್ (0) ತಂಡಕ್ಕೆ ರನ್ ಕೊಡುಗೆ ನೀಡುವಲ್ಲಿ ವಿಫಲರಾದರು.
ತಂಡದ ಟಾಪ್ ಆರ್ಡರ್ ಬ್ಯಾಟರ್ಗಳೇ ಬ್ಯಾಕ್ ಟು ಬ್ಯಾಕ್ ಕೈಕೊಟ್ಟರು ಅಲುಗಾಡದೆ ಕ್ರೀಸ್ಗೆ ಅಂಟಿ ನಿಂತ ಜೋ ರೂಟ್ (76) ಮತ್ತು ಲಿಯಾಮ್ ಡಾಸನ್ (68) ಬ್ಯಾಟಿಂಗ್ ಮೋಡಿ ತಂಡದ ಒಟ್ಟು ಮೊತ್ತವನ್ನು 250ರ ಗಡಿದಾಟಿಸಲು ಸಹಾಯ ಮಾಡಿತು. ಆಲ್ಔಟ್ ಆದ ಬ್ರೂಕ್ ಪಡೆ, 50 ಓವರ್ನಲ್ಲಿ 258 ರನ್ ಕಲೆಹಾಕಲಷ್ಟೇ ಶಕ್ತವಾಯಿತು.